More

    ಪಬ್ಜಿ ಆಟದಲ್ಲೇ ಬದುಕು ಕಳೆದುಕೊಂಡ… ನಾನು ತುಂಬ ಕೆಟ್ಟವನು ಎಂದು ಪತ್ರ ಬರೆದಿಟ್ಟು ಸತ್ತೇ ಹೋದ

    ಜಲಂಧರ್: ಮೊಬೈಲ್ ಹುಚ್ಚು ಬದುಕನ್ನೇ ಕಿತ್ತುಕೊಳ್ಳುತ್ತದೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ.
    ಪಂಜಾಬ್‌ನ ಜಲಂಧರ್ ನಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ, ಮೊಬೈಲ್ ಆಟ ಬಿಟ್ಟು ಓದಿನತ್ತ ಗಮನಹರಿಸಲು ತಂದೆ ಬುದ್ಧಿ ಹೇಳಿ ಎಚ್ಚರಿಸಿದ್ದಕ್ಕೆ ಮನನೊಂದ ಮಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
    ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಸ್ಥಳೀಯ ಕಾಲೇಜಿನ ಮೂರನೇ ವರ್ಷದ ಬಿಬಿಎ ವಿದ್ಯಾರ್ಥಿ ಮಾಣಿಕ್ ಶರ್ಮಾ (20) ಮೃತ ವ್ಯಕ್ತಿ.

    ಇದನ್ನೂ ಓದಿ: ಗಂಡು ಮಗು ಬೇಕೆಂದು ಬೆಳಗ್ಗೆಯಷ್ಟೇ ಜನಿಸಿದ್ದ ಹೆಣ್ಣು ಶಿಶುವನ್ನು ಅಪ್ಪನೇ ಕೊಂದ


    ಅವರ ತಂದೆ ಚಂದರ್ ಶೇಖರ್ ಶರ್ಮಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಕ್ರಿಯ ಸದಸ್ಯರಾಗಿದ್ದಾರೆ ಮತ್ತು ರಾಸಾಯನಿಕ ಉತ್ಪನ್ನಗಳ ಮಾರಾಟ ಕೇಂದ್ರ ನಡೆಸುತ್ತಿದ್ದಾರೆ.
    ಅವರ ಕುಟುಂಬವು ಜಲಂಧರ್​​​ನ ಬಸ್ತಿ ದನಿಶ್​​ಮಂದನ್ ಪ್ರದೇಶದಲ್ಲಿ ನೆಲೆಸಿದೆ.

    ಮಾನಿಕ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸದ ಕಾರಣ ಮೊಬೈಲ್ ಫೋನ್ ಬಿಟ್ಟು ಮತ್ತು ಅಧ್ಯಯನದತ್ತ ಗಮನ ನೀಡುವಂತೆ ಎಚ್ಚರಿಸಿದ್ದರು.

    ಇದನ್ನೂ ಓದಿ:  ಐವರ ಜತೆಗೂಡಿ ಅಪ್ರಾಪ್ತ ಮಗಳ ರೇಪ್: ಮದರಸಾ ಶಿಕ್ಷಕನ ಮನೆಯಲ್ಲಿ ಸಿಕ್ಕಿದ್ದನ್ನು ಕಂಡು ಬೆಚ್ಚಿದ್ದ ಪೊಲೀಸರು!


    ಆತ ಮೊಬೈಲ್ ನಲ್ಲಿ ಪಬ್ಜಿಯಂತಹ ಆಟ ಆಡಲು ಸಾಕಷ್ಟು ಸಮಯ ಕಳೆಯುತ್ತಿದ್ದುದಾಗಿ ಆತನ ತಂದೆ ತಿಳಿಸಿದ್ದಾರೆ. “ಕಾಲೇಜು ಪರೀಕ್ಷೆಯಲ್ಲಿ ಆತ ಕಡಿಮೆ ಅಂಕಗಳಿಸಿದ ಕಾರಣ ಅಧ್ಯಯನದತ್ತ ಗಮನ ಹರಿಸಲು ಆತನಿಗೆ ಬುದ್ಧಿ ಹೇಳಿದ್ದೆ ಎಂದು ಅವರ ತಂದೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
    ಗುರುವಾರ ಬೆಳಗ್ಗೆ ಕೂಡ ಮಾಣಿಕ್​​ಗೆ ಫೋನ್ ಬಿಟ್ಟು ಓದಲು ಅವರ ತಂದೆ ಗದರಿದ್ದರು. ಆದರೆ ಬುದ್ಧಿ ಮಾತಿನಿಂದ ಸುಧಾರಿಸಿಕೊಳ್ಳದ ಆತ ಅವರ ತಂದೆ ಅಂಗಡಿಗೆ ತೆರಳಿದ ನಂತರ, “ಮೈ ಬಹುತ್ ಬೂರಾ ಹೂಂ (ನಾನು ತುಂಬ ಕೆಟ್ಟವನು) ಎಂದು ಆತ್ಮಹತ್ಯೆ ಪತ್ರ ಬರೆದು ತನ್ನ ತಂದೆಯ ರಿವಾಲ್ವರ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾನೆ.
    ಆತ್ಮಹತ್ಯೆ ನಡೆದ ಸ್ಥಳದಿಂದ ಈ ಒಂದು ಸಾಲಿನ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ.
    ಮೃತನ ತಂದೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. 

    ನಿಮಗೂ ಬಾಹ್ಯಾಕಾಶ ವಿದ್ಯಮಾನದ ಕುತೂಹಲ ಇದೆಯೇ? ಇಲ್ನೋಡಿ ಬೆರಗು ಮೂಡಿಸುವ ಬಣ್ಣದ ಚಿಟ್ಟೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts