More

    ಪತ್ನಿ ಕೊಲೆ ಮಾಡಿ ಸುಟ್ಟ ಪತಿರಾಯನಿಗೆ ಶಿಕ್ಷೆ

    ಹುಬ್ಬಳ್ಳಿ: ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದು ಸುಟ್ಟು ಹಾಕಿದ ಪತಿರಾಯ ಅಪರಾಧಿ ಎಂದು ಇಲ್ಲಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

    ಅಪರಾಧಿ ಪತಿ ಈರಣ್ಣ ಬಸವರಾಜ ಕಮ್ಮಾರ ಎಂಬಾತಗೆ ಮಾರ್ಚ್ 3ಕ್ಕೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿ, ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್ ಅವರು ಶನಿವಾರ ತೀರ್ಪು ನೀಡಿದ್ದಾರೆ.

    ಪ್ರಕರಣ ಏನು: ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿಯ ಫಕೀರಪ್ಪಾ ಬಸಪ್ಪಾ ಕುರಹಟ್ಟಿ ಅವರ ಮಗಳನ್ನು ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಈರಣ್ಣ ಬಸವರಾಜ ಕಮ್ಮಾರ ಅವರಿಗೆ 2013ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಆಗ 50 ಸಾವಿರ ರೂ. ನಗದು, 6 ತೊಲೆ ಬಂಗಾರ, ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿ, 9 ತೊಲೆ ಬಂಗಾರದ ಆಭರಣ ಹಾಕಿ ಮದುವೆ ಮಾಡಲಾಗಿತ್ತು.

    ಆದರೂ ಮದುವೆ ನಂತರ ಹೆಚ್ಚಿನ ವರದಕ್ಷಿಣೆಗೆ ಪೀಡಿಸುತ್ತಿದ್ದ ಈರಣ್ಣ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ. ಬಾಡಿಗೆ ಮನೆಯಲ್ಲಿದ್ದ ಈತ 2016ರ ಮಾರ್ಚ್ 11ರ ರಾತ್ರಿ ಮತ್ತೆ ತಂಟೆ ತೆಗೆದ ಈರಣ್ಣ ಬೆಳಗಿನ ಜಾವ ಕಟ್ಟಿಗೆ ಪಳಿಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಲ್ಲದೆ, ಅವಳನ್ನು ಹೊತ್ತುಕೊಂಡು ಗಾರ್ಡನ್ ಖುಲ್ಲಾ ಜಾಗದಲ್ಲಿ ಬೆಂಕಿ ಹಚ್ಚಿ ಸುಟ್ಟು ಪುರಾವೆ ನಾಶಪಡಿಸಿದ್ದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಹಾಯಕ ಪೊಲೀಸ್ ಆಯುಕ್ತ ಎಸ್.ಬಿ. ಛಬ್ಬಿ ಪ್ರಕರಣದ ತನಿಖೆ ಕೈಗೊಂಡಿದ್ದರು. ಸರ್ಕಾರಿ ಅಭಿಯೋಜಕಿ ಸರೋಜಾ ಹೊಸಮನಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts