More

    ಕೇರಳದಲ್ಲಿ ಬೀಡಿ ಕಟ್ಟುತ್ತಿದ್ದ ಹುಡುಗ ಈಗ ಅಮೆರಿಕದಲ್ಲಿ ನ್ಯಾಯಾಧೀಶ..!

    ನವದೆಹಲಿ: ಅಮರಿಕದ ಟೆಕ್ಸಸ್ ರಾಜ್ಯದಲ್ಲಿ ಭಾರತೀಯ ಮೂಲದ ವಕೀಲ ಸುರೇಂದ್ರನ್ ಕೆ ಪಟ್ಟೆಲ್ ಅವರು ಕೇರಳದಲ್ಲಿ ಬಡತನದಲ್ಲಿ ಬೆಳೆಯುವುದರಿಂದ ಹಿಡಿದು ಅಮೆರಿಕದಲ್ಲಿ ನ್ಯಾಯಾಧೀಶರಾಗುವವರೆಗೆ ಸ್ಪೂರ್ತಿದಾಯಕ ಪ್ರಯಾಣವನ್ನು ಹೊಂದಿದ್ದಾರೆ. ಜನವರಿ 1 ರಂದು ಟೆಕ್ಸಸ್ ರಾಜ್ಯದ ಫೋರ್ಟ್ ಬೆಂಡ್ ಕೌಂಟಿಯಲ್ಲಿರುವ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.

    ಕೇರಳದ ಕಾಸರಗೋಡಿನಲ್ಲಿ ದಿನಗೂಲಿ ನೌಕರರಿಗೆ ಜನಿಸಿದ್ದರು. ಇವರು ಶಾಲಾ ಕಾಲೇಜುಗಳಿಗೆ ಹೋಗುವಾಗಲೂ ದುಡಿದು ಅವರಿಗೆ ಸಹಾಯ ಮಾಡುತ್ತಿದ್ದ ಪಟ್ಟೇಲ್ ಅವರಿಗೆ ಇದು ದೊಡ್ಡ ಸಾಧನೆಯಾಗಿದೆ. ಹದಿಹರೆಯದಲ್ಲಿದ್ದಾಗ, ಸಂಪಾದನೆಗಾಗಿ ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಇಂದು ನ್ಯಾಯಾಧೀಶರಾಗಿದ್ದಾರೆ.

    ಅವರು ೧೦ ನೇ ತರಗತಿಯ ನಂತರ ತಮ್ಮ ಶಿಕ್ಷಣವನ್ನು ನಿಲ್ಲಿಸಲು ನಿರ್ಧರಿಸಿ ಬೀಡಿ ಕಟ್ಟಲು ಪ್ರಾರಂಭಿಸಿದ್ದರು. ಆದರೆ ಆ ಕಠಿಣ ಅವಧಿ ಅವರ ದೃಷ್ಟಿಕೋನವನ್ನು ಬದಲಾಯಿಸಿತು. ಒಂದು ವರ್ಷದ ಸುದೀರ್ಘ ವಿರಾಮದ ನಂತರ ಅವರು ಶೀಕ್ಷಣದ ಕಡೆಗೆ ವಾಪಸ್ ಮುಖ ಮಾಡಿದ್ದರು. ನಂತರ ಅವರು ಹಂತಹಂತವಾಗಿ ಬೆಳೆಯುತ್ತಾ ಹೋಗಿ ಇಂದು ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ. 

    ಅವರು ೧೦ ನೇ ತರಗತಿಯ ನಂತರ ತಮ್ಮ ಶಿಕ್ಷಣವನ್ನು ನಿಲ್ಲಿಸಲು ನಿರ್ಧರಿಸಿ ಬೀಡಿ ಕಟ್ಟಲು ಪ್ರಾರಂಭಿಸಿದ್ದರು. ಆದರೆ ಆ ಕಠಿಣ ಅವಧಿ ಅವರ ದೃಷ್ಟಿಕೋನವನ್ನು ಬದಲಾಯಿಸಿತು. ಒಂದು ವರ್ಷದ ಸುದೀರ್ಘ ವಿರಾಮದ ನಂತರ ಅವರು ಶೀಕ್ಷಣದ ಕಡೆಗೆ ವಾಪಸ್ ಮುಖ ಮಾಡಿದ್ದರು. ನಂತರ ಅವರು ಹಂತಹಂತವಾಗಿ ಬೆಳೆಯುತ್ತಾ ಹೋಗಿ ಇಂದು ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ.

    ಅವರು ಇ.ಕೆ. ನಯನಾರ್ ಸ್ಮಾರಕ ಸರ್ಕಾರಿ ಕಾಲೇಜಿಗೆ ಸೇರಿದರೂ ಕೆಲಸವನ್ನು ಮುಂದುವರಿಸಬೇಕಾಯಿತು. ಇದರಿಂದ ಹಾಜರಾತಿಗೆ ತೊಂದರೆಯಾಗಿ ಪ್ರಾಧ್ಯಾಪಕರು ಅವನನ್ನು ಪರೀಕ್ಷೆಗೆ ಕೂರಲು ಬಿಡಲಿಲ್ಲ. ಆದರೆ ಪಟ್ಟೆಲ್ ವಕೀಲನಾಗಲು ಬಯಸಿದ್ದು ತನಗೆ ಒಂದೇ ಒಂದು ಅವಕಾಶವನ್ನು ನೀಡುವಂತೆ ತನ್ನ ಶಿಕ್ಷಕರಲ್ಲಿ ಬೇಡಿಕೊಂಡಿದ್ದರು.

    “ನಾನು ಉತ್ತಮ ಸ್ಕೋರ್ ಮಾಡದಿದ್ದರೆ ಓದುವುದನ್ನು ನಿಲ್ಲಿಸುತ್ತೇನೆ” ಎಂದಿದ್ದ ಪಟ್ಟೇಲ್ ಆ ಬಾರಿ ಟಾಪರ್ ಆಗಿ ಹೊರ ಹೊಮ್ಮಿದ್ದರು. ಹೀಗಾಗಿ ಮುಂದಿನ ವರ್ಷಗಳಲ್ಲಿ ಅಧ್ಯಾಪಕರು ಅವರಿಗೆ ತುಂಬಾ ಸಹಕಾರ ನೀಡಿದರು. ಮುಂದೆ, ಪಟ್ಟೆಲ್ ಕ್ಯಾಲಿಕಟ್ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ ಮಾಡಲು ಬಯಸಿದ್ದರು. ಆದರೆ ಹಣಕಾಸಿನ ಸಮಸ್ಯೆಯಾಗಿತ್ತು. ಮೊದಲ ವರ್ಷದಲ್ಲಿ, ಅವರ ಸ್ನೇಹಿತರು ಸಹಾಯ ಮಾಡಿದರು. ನಂತರ, ಅವರು ಹೋಟೆಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸವನ್ನು ಮಾಡುತ್ತಾ ಓದನ್ನು ಮುಂದುವರೆಸಿದರು.

    1995ರಲ್ಲಿ ಪಟ್ಟೇಲ್ ಅವರು ಕಾನೂನು ಪದವಿ ಪಡೆದು ೧೯೯೬ ರಲ್ಲಿ ಕೇರಳದ ಹೊಸದುರ್ಗದಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿ ಕ್ರಮೇಣ ಪ್ರಸಿದ್ಧ ವಕೀಲರಾದರು. ಸುಮಾರು ಒಂದು ದಶಕದ ನಂತರ, ಅವರು ಸುಪ್ರೀಂ ಕೋರ್ಟಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು.

    ೨೦೦೭ ರಲ್ಲಿ ಅವರ ಕುಟುಂಬಕ್ಕೆ ಅಮೆರಿಕಗೆ ಹೋಗಲು ಅವಕಾಶ ಲಭಿಸಿತ್ತು. ನರ್ಸ್ ಆಗಿದ್ದ ಅವರ ಪತ್ನಿಯನ್ನು ಅಮೆರಿಕದ ಪ್ರಮುಖ ವೈದ್ಯಕೀಯ ಸೌಲಭ್ಯವೊಂದರಲ್ಲಿ ಕೆಲಸ ಮಾಡಲು ಆಯ್ಕೆ ಮಾಡಲಾಗಿತ್ತು.

    ದಂಪತಿಗಳು ಖಾಯಂ ರೆಸಿಡೆನ್ಸಿಯನ್ನು ಪಡೆದು ತಮ್ಮ ಪುಟ್ಟ ಮಗಳ ಜೊತೆಗೆ ಟೆಕ್ಸಾಸ್ ನ ಹೂಸ್ಟನ್ ಗೆ ತೆರಳಿದರು. ಅಮೆರಿಕಕ್ಕೆ ತೆರಳಿದ ಎರಡು ವರ್ಷಗಳ ನಂತರ, ಪಟ್ಟೆಲ್ ಟೆಕ್ಸಾಸ್ ಬಾರ್ ಪರೀಕ್ಷೆಗೆ ಹಾಜರಾದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಪಾಸ್ ಕೂಡ ಆದರು.

    ಡೆಮಾಕ್ರಟಿಕ್ ಪಕ್ಷದೊಂದಿಗೆ ಹೊಂದಾಣಿಕೆ ಹೊಂದಿರುವ ಪಟ್ಟೇಲ್, “ನ್ಯಾಯಾಲಯಗಳು ನ್ಯಾಯಸಮ್ಮತವಾಗಿದ್ದು ಸಹಾನುಭೂತಿಯಿಂದ ಕೂಡಿರಬೇಕು” ಎಂದು ಅವರು ಹೇಳಿದ್ದಾರೆ. ವೃತ್ತಿ ಜೀವನದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ ಇವರು ಒಂದೊಂದೇ ಮೆಟ್ಟಿಲನ್ನು ಹತ್ತಿ ಈಗ ನ್ಯಾಯಾಧೀಶರಾಗಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts