More

    ಹೊಳೆಯುವ ವಸ್ತು ನೋಡಿ ಗಾಜಿನ ತುಣುಕೆಂದು ಭಾವಿಸಿದವನಿಗೆ ಕಾದಿತ್ತೊಂದು ಅಚ್ಚರಿ…!

    ಅರ್ಕಾನಸ್​: ಹೊಳೆಯುತ್ತಿದ್ದ ವಸ್ತುವನ್ನು ನೋಡಿ ಗಾಜು ಇರಬಹುದೆಂದು ತೆಗೆದುಕೊಂಡ ವ್ಯಕ್ತಿಯೊಬ್ಬನಿಗೆ ಕೊನೆಯಲ್ಲಿ ಅಚ್ಚರಿಯೊಂದು ಎದುರಾದ ಘಟನೆ ಅಮೆರಿಕದಲ್ಲಿ ನಡೆದಿದೆ.

    ಹೌದು, ಆ ಹೊಳೆಯುವ ವಸ್ತು ಬರೀ ಗಾಜಲ್ಲ. ಬದಲಾಗಿ 9.07 ಕ್ಯಾರೆಟ್​ ಡೈಮಂಡ್​ ಆಗಿದ್ದು, ವ್ಯಕ್ತಿಗೆ ಅಚ್ಚರಿ ಆಗಿದೆ. ಅಂದಹಾಗೆ ಈ ಅಪರೂಪದ ಪ್ರಸಂಗ ಜರುಗಿರುವುದು ಅಮೆರಿಕದ ನೈರುತ್ಯ ಅರ್ಕಾನಸ್​ನ ರಾಜ್ಯದ ಪಾರ್ಕಿನಲ್ಲಿ. ಆ ಅದೃಷ್ಟದ ವ್ಯಕ್ತಿಯೇ ಮೌಮೆಲ್ಲೆ ನಿವಾಸಿ ಕೆವಿನ್​ ಕಿನಾರ್ಡ್​. 48 ವರ್ಷದ ಇತಿಹಾಸದಲ್ಲೇ ಕ್ರೇಟರ್​ ಆಫ್​ ಡೈಮಂಡ್ಸ್​ ಸ್ಟೇಟ್​​ ಪಾರ್ಕ್​ನಲ್ಲಿ ದೊರೆತ ಎರಡನೇ ಅತಿದೊಡ್ಡ ಡೈಮಂಡ್​ ಇದಾಗಿದೆ.

    ಈ ಬಗ್ಗೆ ಮಾತನಾಡಿರುವ ಕೆವಿನ್​, ನಾನು ಮತ್ತು ನನ್ನ ಸ್ನೇಹಿತ ಮರ್ಫ್ರೀಸ್​ಬೊರೊ ನಗರದಲ್ಲಿರುವ ರಾಜ್ಯದ ಪಾರ್ಕ್​ಗೆ ಸಿಫ್ಟಿಂಗ್​ (ಸೊಸುವ) ಸಾಧನವನ್ನು ಸಾಗಿಸಿದ್ದೇವು. ಚಿಕ್ಕಿಂದಿನಿಂದಲೂ ಕ್ರೇಟರ್​ ಆಫ್​ ಡೈಮಂಡ್ಸ್​ ಸ್ಟೇಟ್​​ ಪಾರ್ಕ್​ಗೆ ಭೇಟಿ ನೀಡುತ್ತಿದ್ದೇನೆ. ಆದರೆ, ಎಂದಿಗೂ ನಾನು ಡೈಮಂಡ್​ ಪತ್ತೆ ಮಾಡಿರಲಿಲ್ಲ. ಆದರೆ, ಸೆಪ್ಟೆಂಬರ್​ 7ರಂದು ನಾವು ಪಾರ್ಕಿನಲ್ಲಿ ಸೊಸುವ ಸಾಧನವನ್ನು ಹಿಡಿದು ಅತ್ತಿಂದಿತ್ತ ಅಲೆದಾಡುವಾಗ ಹೊಳೆಯುವ ಮಾದರಿಯ ವಸ್ತುವನ್ನು ನೋಡಿ ಗಾಜೆಂದು ಭಾವಿಸಿ ತೆಗೆದುಕೊಂಡು ಬ್ಯಾಗ್​ಗೆ ಹಾಕಿಕೊಂಡು ಹುಡುಕಾಟವನ್ನು ಮುಂದುವರಿಸಿದೆ ಎಂದಿದ್ದಾರೆ.

    ಇದನ್ನು ಓದಿ: ಲಾಕ್​ಡೌನ್​​ನಲ್ಲಾಯ್ತು ಕಣ್​ ಕಣ್ಣ ಸಲಿಗೆ.. ಆತನಿಗೆ 38, ಆಕೆಗೆ 40.. ಈಗ ಇಬ್ಬರೂ ಎಂಗೇಜ್ಡ್​!

    ಇದಕ್ಕೂ ಮುನ್ನ ಪಾರ್ಕಿಗೆ ಭೇಟಿ ನೀಡಿದ್ದ ಪ್ರವಾಸಿಗರು ಡೈಮಂಡ್​ ಪತ್ತೆ ಹಚ್ಚಿದ್ದರ ಉದಾಹರಣೆ ಇದ್ದಿದ್ದರಿಂದ, ಪಾರ್ಕಿನ ಡೈಮಂಡ್​ ಸಂಶೋಧನ ಕೇಂದ್ರದ ಸಿಬ್ಬಂದಿ ನಮ್ಮನ್ನು ತಡೆದು ಪರಿಶೀಲಿಸಿದರು. ಮೊದಲು ನನ್ನ ಫ್ರೆಂಡ್ಸ್​ ಅನ್ನು ಪರಿಶೀಲಿಸಿದರು. ಬಳಿಕ ನನ್ನನ್ನು ತಪಾಸಣೆ ಮಾಡಿದರು. ನನ್ನ ಬಳಿ ಇದ್ದ ಗಾಜಿನ ವಸ್ತುವನ್ನು ತೆಗೆದುಕೊಂಡರು. ಅದನ್ನು ಪರಿಶೀಲಿಸಿದ ಬಳಿಕ ನಾವು ಡೈಮಂಡ್​ ಪತ್ತೆ ಮಾಡಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದರು ಎಂದು ಕೆವಿನ್​ ಹೇಳಿದ್ದಾರೆ.

    ನಿಜ ಹೇಳಬೇಕೆಂದರೆ ಸಿಬ್ಬಂದಿ ಹೇಳಿದ್ದನ್ನು ಕೇಳಿ ನಾನು ಕಣ್ಣೀರಾಕಿದೆ. ನನಗೆ ನಿಜಕ್ಕೂ ಶಾಕ್​ ಆಯಿತು ಎಂದಿದ್ದಾರೆ. ಇನ್ನು ಕ್ರೇಟರ್​ ಆಫ್​ ಡೈಮಂಡ್ಸ್​ ಸ್ಟೇಟ್​​ ಪಾರ್ಕ್​ನಲ್ಲಿ ಪ್ರವಾಸಿಗರು ಪ್ರತಿದಿನ ಒಂದಲ್ಲ ಎರಡು ಡೈಮಂಡ್​ಗಳನ್ನು ಪತ್ತೆ ಹಚ್ಚುತ್ತಾರೆ. ಈವರೆಗೂ 246 ಡೈಮಂಡ್​ಗಳು ಪಾರ್ಕಿನಲ್ಲಿ ನೋಂದಣಿ ಆಗಿವೆ. (ಏಜೆನ್ಸೀಸ್​)

    ಲವ್​ ಜಿಹಾದ್​ ಹೆಸರಿನಲ್ಲಿ ವೈರಲ್​ ಆಗಿರುವ ಯುವತಿ ಫೋಟೋಗಳ ಅಸಲಿ ಕಹಾನಿಯೇ ಬೇರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts