ದಕ್ಷಿಣ ಅಮೆರಿಕ: ಬೊಲಿವಿಯಾದ ವ್ಯಕ್ತಿಯೊಬ್ಬ ಅಮೆಜಾನ್‌ನ ದಟ್ಟವಾದ, ಅಪಾಯಕಾರಿ ಕಾಡಿನಲ್ಲಿ 31 ದಿನಗಳ ಕಾಲ ಆಹಾರವಿಲ್ಲದೆ ಬದುಕುಳಿದಿದ್ದಾನೆ. ಈತನ ಕಥೆ ಕೇಳಿದ್ರೆ ಮೈ ಜುಮ್ಮೆನ್ನುತ್ತದೆ.
30 ವರ್ಷದ ಜೊನಾಟನ್ ಅಕೋಸ್ಟಾ ಅವರು ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಅಮೆಜಾನ್ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದನು. ನಾಲ್ವರು ಕಾಡಿನ ಮಧ್ಯೆ ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿದರು. ಜೊನಾಥನ್ ಅವರ ಬಂದೂಕಿನಲ್ಲಿ ಒಂದೇ ಒಂದು ಗುಂಡು ಇತ್ತು ಮತ್ತು ಒಬ್ಬರ ಬಳಿ ಬೆಂಕಿಕಡ್ಡಿ ಅಥವಾ ಟಾರ್ಚ್ ಕೂಡ ಇರಲಿಲ್ಲ. ಮನೆಗೆ ಮರಳುವ ದಾರಿ ತಿಳಿಯದೆ ಕಾಡಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಯಿತ್ತು.
ಜೊನಾಟನ್ ಅವರು ಕಾಣೆಯಾಗಿದ್ದಾರೆಂದು ಕುಟುಂಬಸ್ಥರು ಹುಡುಕ ತೊಡಗಿದರು. ನಂತರ ಅವರನ್ನು ರಕ್ಷಣಾ ತಂಡ ಪತ್ತೆ ಮಾಡಿದೆ. ಜೊನಾಟನ್ ಕಾಡಿನಲ್ಲಿದ್ದಾಗ, ಅವನ ಪಾದದ ಉಳುಕಿತ್ತು, ನಿರ್ಜಲೀಕರಣದಿಂದ ಅವನ ಮುಖವೂ ಊದಿಕೊಂಡಿತು 17 ಕೆಜಿ ತೂಕವನ್ನು ಕಳೆದುಕೊಂಡರು. ಆತನನ್ನು ರಕ್ಷಿಸಿದ ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ರೀಲ್ ಚಿತ್ರೀಕರಿಸುವ ವೇಳೆ ಭೀಕರ ಅಪಘಾತ: ಮಹಿಳೆ ಸಾವು, ಇಬ್ಬರು ಅರೆಸ್ಟ್
ಜೊನಾಟನ್ ಅವರು ಚೇತರಿಸಿಕೊಂಡ ನಂತರ ಕಾಡಿನಲ್ಲಿ ಅವರು ಒಂದು ತಿಂಗಳು ಕಳೆದ ಕಷ್ಟ ದಿನಗಳ ಕುರಿತಾಗಿ ಹಂಚಿಕೊಂಡಿದ್ದಾರೆ. ಜೊನಾಥನ್ ಅವರು ಈ ದಟ್ಟವಾದ ಕಾಡಿನಲ್ಲಿ ಬದುಕಲು ಹುಳುಗಳನ್ನು ತಿನ್ನುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಯಿತ್ತು. ಕೊನೇಕ್ಷಣದಲ್ಲಿ ತನ್ನ ಮೂತ್ರವನ್ನೇ ಕುಡಿದು ಬದುಕುಳಿದಿದ್ದೇನೆಂದು ಹೇಳಿದ್ದಾರೆ.