More

    ವಿವಾಹೇತರ ಸಂಬಂಧ ಹೊಂದಿದ್ದ ಉಪನ್ಯಾಸಕ ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನೂ ಪ್ರಾಣ ಬಿಟ್ಟ…

    ತೆಲಂಗಾಣ: ಉಪನ್ಯಾಸಕರೊಬ್ಬರು ತಮ್ಮ ಪತ್ನಿ ಮತ್ತು ಮಕ್ಕಳಿಗೆ ವಿಷ ಕುಡಿಸಿ ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ಗಂಗಾಧರ ಪಟ್ಟಣದಲ್ಲಿ ಘಟನೆ ನಡೆದಿದೆ.

    ಗಂಗಾಧರ ವೇಮುಲ ಶ್ರೀಕಾಂತ್, ಕರೀಂನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಮಮತಾ ಹಾಗೂ ಅವರಿಗೆ ಐದು ವರ್ಷದ ಮಗಳು ಅಮೂಲ್ಯ ಮತ್ತು 20 ತಿಂಗಳ ಮಗ ಅದ್ವೈತ್ ಎಂಬ ಇಬ್ಬರು ಮಕ್ಕಳಿದ್ದರು.

    ಪುಟ್ಟ ಮಗು ಅದ್ವೈತ್, ನ.16 2022 ರಂದು ವಾಂತಿ ಮತ್ತು ಭೇದಿಯಿಂದ ಸಾವನ್ನಪ್ಪಿದ್ದರು. ಮಗಳು ಅಮೂಲ್ಯ, ಡಿ.4 ರಂದು ವಾಂತಿ ಭೇದಿಯಿಂದಾಗಿ ನಿಧನರಾಗಿದ್ದರು. ಆರೋಪಿಯ ಪತ್ನಿ ಮಮತಾ, ಡಿಸೆಂಬರ್ 18 ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮತ್ತೊಮ್ಮೆ ಅದೇ ಕಾರಣದಿಂದ ಮೃತಪಟ್ಟಿದ್ದರು. ಈ ನಡುವೆ ಶ್ರೀಕಾಂತ್, ಆಸ್ಪತ್ರೆಗೆ ದಾಖಲಾದ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ವಿವಿಧ ವಾಟ್ಸಾಪ್ ಗ್ರೂಪ್‌ಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ದಾನಿಗಳಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದರು. ಎನ್ನಲಾಗಿದೆ

    ಎರಡು ತಿಂಗಳೊಳಗೆ ಮೂವರು ಕುಟುಂಬ ಸದಸ್ಯರ ಸಾವಿನಲ್ಲಿ ಶ್ರೀಕಾಂತ್‌ನ ಪಾತ್ರವಿದೆ ಎಂದು ಸಂಬಂಧಿಕರು ಮತ್ತು ಸ್ನೇಹಿತರು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಮೂರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸುವಂತೆ ಕರೀಂನಗರದ ಸರ್ಕಾರಿ ವೈದ್ಯರಿಗೆ ಮನವಿ ಮಾಡಿದ್ದಾರೆ. ಅಲ್ಲಿ ವೈದ್ಯರು, ಎಲ್ಲರ ದೇಹದಲ್ಲೂ ಒಂದೇ ರೀತಿಯ ವಿಷಕಾರಿ ಅಂಶವಿದೆ ಎಂದು ಘೋಷಿಸಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಇನ್ನಷ್ಟು ವಿವರವಾಗಿರುವ ವರದಿಯನ್ನು ಪಡೆಯಲು ಪೊಲೀಸರು ಮೂವರ ರಕ್ತದ ಮಾದರಿಗಳನ್ನು ಮುಂಬೈನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮುಂಬೈನಿಂದ ವರದಿ ಬಂದ ನಂತರ ಆರೋಪಿ ಶ್ರೀಕಾಂತ್​, ತನ್ನ ಪಾತ್ರ ಬಹಿರಂಗವಾಗಬಹುದು ಎಂದು ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ.

    ಆರೋಪಿ ಶ್ರೀಕಾಂತ್, ಇತ್ತೀಚೆಗಷ್ಟೇ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರನ್ನು ತೊರೆಯಲು ನಿರ್ಧರಿಸಿದ್ದ ಎಂದು ತಿಳಿದು ಬಂದಿದೆ. ಸುಮಾರು 30 ದಿನಗಳ ಹಿಂದೆಯೇ ತನ್ನ ಮಗ ಅದ್ವೈತ್‌ಗೆ ವಿಷಪೂರಿತ ಪದಾರ್ಥಗಳನ್ನು ತಿನ್ನಿಸುವ ಮೂಲಕ ತನ್ನ ಯೋಜನೆಯನ್ನು ಪ್ರಾರಂಭಿಸಿದ್ದ. ತನ್ನ ಮಗ ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿ ಆಸ್ಪತ್ರೆಗೆ ಸೇರಿಸಿದ್ದ.

    ಅದೇ ಪ್ಲಾನ್​ಅನ್ನು ಶ್ರೀಕಾಂತ್, ತನ್ನ ಮಗಳು ಅಮೂಲ್ಯ ಮತ್ತು ತನ್ನ ಮಡದಿ ಮಮತಾ ಮೇಲೆ ಪ್ರಯೋಗಿಸಿದ್ದ. ಆದರೆ ಎರಡು ತಿಂಗಳೊಳಗೆ ಮೂವರು ಕುಟುಂಬ ಸದಸ್ಯರ ಸಾವನ್ನಪ್ಪಿದ್ದರಿಂದ ಅವನ ಮೇಲೆ ಸಂಶಯಗೊಂಡ ಸಂಬಂಧಿಕರು ಹಾಗೂ ಸ್ನೇಹಿತರು, ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ಈತನ ಮಾಸ್ಟರ್ ಪ್ಲಾನ್ ಬೆಳಕಿಗೆ ಬಂದಿದೆ.

    ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಿಷಕಾರಿ ಪದಾರ್ಥಗಳನ್ನು ಸೇವಿಸಿ ಮೂವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದರು. ಶ್ರೀಕಾಂತ್ ಕೂಡ ಸಾಯಲು ಅದೇ ವಿಷ ಸೇವಿಸಿದ್ದ ಎನ್ನುವುದು ಈಗ ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts