More

    ಕೋಪ ಬಂದಿದ್ದು ಪತ್ನಿ ಮೇಲೆ..ಕೊಂದಿದ್ದು 14 ತಿಂಗಳ ಮಗುವನ್ನು…

    ನೊಯ್ಡಾ: ಪತ್ನಿಯೊಂದಿಗೆ ಜಗಳವಾಡಿ, ನಂತರ 14 ತಿಂಗಳ ಮಗುವನ್ನು ಹತ್ಯೆಗೈದವನನ್ನು ಪೊಲೀಸರು ಬಂಧಿಸಿದ್ದಾರೆ.
    ನೊಯ್ಡಾದ ಜೆಜೆ ಕಾಲನಿಯಲ್ಲಿ ಘಟನೆ ನಡೆದಿದೆ. 28 ವರ್ಷದ ಈ ಕೂಲಿ ಕಾರ್ಮಿಕ ಪತ್ನಿ (23) ಹಾಗೂ ಮಗುವಿನೊಂದಿಗೆ ವಾಸವಾಗಿದ್ದ. ಶನಿವಾರ ಪತ್ನಿಯೊಂದಿಗೆ ಜಗಳವಾಡುತ್ತ, ಪುಟ್ಟ ಮಗುವನ್ನು ನೆಲದ ಮೇಲೆ ಎಸೆದಿದ್ದಾನೆ. ನೆಲದ ಮೇಲೆ ಬಿದ್ದ ಮಗು ಅಸ್ವಸ್ಥವಾಗಿತ್ತು. ಅದನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

    ಈತ ಪದೇಪದೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಬಾರಿಯೂ ಜಗಳವಾಡುತ್ತ ಮಗುವನ್ನು ಎಳೆದು ಪತ್ನಿಯೆಡೆಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಗುವನ್ನು ಕೊಂದ ಪತಿಯ ವಿರುದ್ಧ ಮಹಿಳೆಯೇ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಕಾಶ್ಮೀರ..ಭಾರತೀಯ ಸೇನೆ ಬಗ್ಗೆ ಅವಹೇಳನ ಮಾಡಿದ್ದ ಜೆಎನ್​ಯು ವಿದ್ಯಾರ್ಥಿ ಸೈಯದ್​ ವಿರುದ್ಧ ಎಫ್​ಐಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts