More

  ಸ್ನೇಹಿತನಿಂದಲೇ ಯುವಕನ ಅಂತ್ಯ..ಫ್ರೆಂಡ್​​ಶಿಪ್ ಡೇ ದಿನವೇ ಘೋರ ದುರಂತ

  ಪಾಟ್ನಾ: ಮಾದಕ ವ್ಯಸನಿಯೋರ್ವ ಗಾಂಜಾ ಖರೀದಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ್ನೇ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯ ಪಾಲಿ ಗ್ರಾಮದಲ್ಲಿ ನಡೆದಿದೆ.

  ಮೃತ ವ್ಯಕ್ತಿಯನ್ನು ಪ್ರದೀಪ್ ಕುಮಾರ್ (23 ವರ್ಷ) ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ 11: 30ರ ಸುಮಾರಿಗೆ, ಆರೋಪಿ ಪ್ರಿನ್ಸ್ ಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆತ ಮಾದಕ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ.

  ಇದನ್ನೂ ಓದಿ: ಒಂದೇ ಒಲಿಂಪಿಕ್ಸ್‌ನಲ್ಲಿ 7 ಪದಕ.. ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ ಈಜುಗಾರ್ತಿ

  ಪೊಲೀಸರ ನೀಡಿದ ಮಾಹಿತಿ ಪ್ರಕಾರ, ಆರೋಪಿ ಒಂದು ಗಾಂಜಾ ಪ್ಯಾಕೆಟ್ ಖರೀದಿಸಲು ಸ್ನೇಹಿತ ಪ್ರದೀಪ್ ಬಳಿ 50 ರೂ. ಕೇಳಿದ್ದಾನೆ. ಆಗ ಪ್ರದೀಪ್ ನನ್ನ ಬಳಿ ಹಣ ಇಲ್ಲ ಎಂಬ ಉತ್ತರ ನೀಡಿದ್ದಾನೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆದು ಪ್ರದೀಪ್ ಎದೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ. ಪ್ರದೀಪ್‌ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದರು ಆತ ಸಾವನ್ನಪ್ಪಿದ್ದಾನೆ.

  ಮೃತನ ಸಹೋದರ ನೀಡಿದ ದೂರಿನ ಮೇಲೆ, ಪ್ರಕರಣ ದಾಖಲಿಸಿಕೊಂಡಿರುವ ನೌಬತ್ಪುರ್ ಪೊಲೀಸ್ ಅಧಿಕಾರಿ ಸಾಮ್ರಾಟ್ ದೀಪಕ್ ಕುಮಾರ್ ಆರೋಪಿಯನ್ನು ಖೆಡ್ಡಾಗೆ ಕೆಡವಲು ಮುಂದಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts