More

    VIDEO | ಎಕ್ಸ್​ಪ್ರೆಸ್​ ವೇಯಲ್ಲಿ ಉಚಿತ ಹೆಲ್ಮೆಟ್ ನೀಡಿದ ‘ಹೆಲ್ಮೆಟ್ ಮ್ಯಾನ್’; ಈತನ ಕಾಳಜಿಗೆ ಭೇಷ್ ಎಂದ ಪೊಲೀಸರು!

    ಉತ್ತರ ಪ್ರದೇಶ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ 100 ಕಿ.ಮೀ ಮೀರಿದ ವೇಗದಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ನೀಡುವ ಮೂಲಕ ಹೆಲ್ಮೆಟ್ ಸುರಕ್ಷತೆಯನ್ನು ಉತ್ತೇಜಿಸಲು ರಸ್ತೆ ಸುರಕ್ಷತಾ ವಕೀಲ ರಾಘವೇಂದ್ರ ಕುಮಾರ್ ವಿಭಿನ್ನವಾದ ಅಭಿಯಾನ ಕೈಗೊಂಡಿದ್ದಾರೆ.

    ‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಖ್ಯಾತರಾಗಿರುವ ರಾಘವೇಂದ್ರ ಕುಮಾರ್ ಅವರು ಹೆಲ್ಮೆಟ್ ಧರಿಸಿ ಕಾರನ್ನು ಚಲಾಯಿಸುತ್ತಿದ್ದಾಗ ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಬಳಿಕ ಹೊಸ ಹೆಲ್ಮೆಟ್ ನೀಡಿದ್ದಾರೆ. ಬಳಿಕ ರಸ್ತೆ ಸುರಕ್ಷತೆ ಬಗ್ಗೆ ತಿಳಿಹೇಳಿದ್ದಾರೆ.

    ಇದನ್ನೂ ಓದಿ: ಕಲಬುರಗಿ | ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲೇ ಪ್ರಾಣಬಿಟ್ಟ ಹೆಡ್​​ ಕಾನ್​​ಸ್ಟೇಬಲ್

    ಸದ್ಯ ರಾಘವೇಂದ್ರ ಕುಮಾರ್ ಹೆಲ್ಮೆಟ್ ಕುರಿತು ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಮಹಾರಾಷ್ಟ್ರ ಪೊಲೀಸರು ಟ್ವೀಟ್ ಮಾಡಿ, ರಾಘವೇಂದ್ರ ಅವರ ಕಾಳಜಿಯನ್ನು ಶ್ಲಾಘಿಸಿ, ನಿಮ್ಮ ಈ ಕಾರ್ಯ ಇನ್ನಷ್ಟು ಜನರಿಗೆ ಪ್ರೇರೇಪಣೆ ನೀಡಲಿ ಎಂದು ಹೇಳಿದೆ.

    ‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ’ ಹ್ಯಾಂಡಲ್‌ ಈ ವಿಡಿಯೋವನ್ನು ಹಂಚಿಕೊಂಡಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ಸವಾರ ತನ್ನನ್ನು ನಿಖಿಲ್ ತಿವಾರಿ ಎಂದು ಪರಿಚಯಿಸಿಕೊಳ್ಳುವುದನ್ನು ಕಾಣಬಹುದು. ವಿಡಿಯೋವನ್ನು ಈಗಾಗಲೇ 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts