More

    7 ವರ್ಷಗಳ ಹಿಂದೆ ಬಸ್ಸಲ್ಲಿ ಮಹಿಳಾ ಪೊಲೀಸ್ ಮೈ ಮುಟ್ಟಿದ್ದ 50 ವರ್ಷದ ಕಿಡಿಗೇಡಿಗೆ ಈಗ ಒಂದು ವರ್ಷ ಜೈಲು

    ಮುಂಬೈ: ಬಸ್​ನಲ್ಲಿ ಮಹಿಳಾ ಪೊಲೀಸ್ ಕಾನ್​​ಸ್ಟೆಬಲ್​ ದೇಹವನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದ ಕಿಡಿಗೇಡಿಗೆ ಒಂದು ವರ್ಷ ಜೈಲುಶಿಕ್ಷೆ ಆಗಿದೆ. ಮಾತ್ರವಲ್ಲ, ಒಂದು ಸಾವಿರ ರೂಪಾಯಿಯನ್ನು ಪರಿಹಾರವಾಗಿ ನೀಡುವಂತೆಯೂ ಆದೇಶಿಸಲಾಗಿದೆ.

    ಭೀಮರಾವ್ ಗಾಯಕ್​ವಾಡ್ ಎಂಬ 50 ವರ್ಷದ ಆರೋಪಿ ಬಸ್​ನಲ್ಲಿ ಮಹಿಳೆ ಪೊಲೀಸ್ ಕಾನ್​​ಸ್ಟೆಬಲ್​ ಮೈಮುಟ್ಟಿ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಕೇಸ್ ದಾಖಲಾಗಿದ್ದು, ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

    ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಅತಿಯಾಗಿದೆ. ಅದರಲ್ಲೂ ಆರೋಪಿ ಅಸಭ್ಯವಾಗಿ ವರ್ತಿಸಿರುವುದು ಸಾಕ್ಷಿಸಮೇತ ಸಾಬೀತಾಗಿದೆ. ಆರೋಪಿಯು ಮಹಿಳಾ ಪೊಲೀಸ್ ಸಿಬ್ಬಂದಿಯ ಸೊಂಟದ ಕೆಳಭಾಗವನ್ನು ಸ್ಪರ್ಶಿಸಿದ್ದ. ಅಲ್ಲದೆ ಆತ ತಾನು ಮದ್ಯದ ಅಮಲಿನಲ್ಲಿ ಹಾಗೆ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿಲ್ಲ, ಆದರೆ ಶಿಕ್ಷೆ ವಿಧಿಸುವಾಗ ಹೇಳಿದ್ದ. ಹೀಗಾಗಿ ಆತನ ವಾದವನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಂದಹಾಗೆ ಈ ಪ್ರಕರಣ 2015ರ ಡಿ. 9ರಂದು ಸಂಜೆ 5.30ರ ಸುಮಾರಿಗೆ ಮುಂಬೈನ ಬೆಸ್ಟ್​ ಬಸ್​ನಲ್ಲಿ ನಡೆದಿತ್ತು. ಸಂತ್ರಸ್ತೆಯ ಹಿಂದಿನ ಸೀಟ್​ನಲ್ಲಿ ಆರೋಪಿ ಕುಳಿತಿದ್ದ.
    ಆರೋಪಿ ಸೀಟ್ ನಡುವಿನ ಗ್ಯಾಪ್​ನಲ್ಲಿ ಆಕೆಯ ದೇಹವನ್ನು ಮುಟ್ಟುತ್ತಿದ್ದ. ಮೊದಲ ಸಲ ಹೀಗೆ ಮಾಡಿದ್ದಾಗ ಆಕೆ ಸುಮ್ಮನಿದ್ದರೂ, ಮತ್ತೆ ಎರಡನೇ ಸಲ ಮಾಡಿದ್ದಾಗ ಆಕೆ ತಕ್ಷಣ ಆತನ ಕೈಯನ್ನು ಹಿಡಿದು ರಕ್ಷಣೆಗೆ ಕೂಗಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಅಂದು ತಕ್ಷಣ ಬಸ್ಸನ್ನು ಹತ್ತಿರದ ಎಮ್​ಆರ್​ಎ ಮಾರ್ಗ್​ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts