More

    ಮಹಿಳೆಯರ ಚೇಂಜಿಂಗ್​ ರೂಂನ ಸೀಲಿಂಗ್​ನಲ್ಲಿ ಇಣುಕುತ್ತಿದ್ದವ ದುಪ್ಪೆಂದು ಬಿದ್ದ!

    ವಾಷಿಂಗ್ಟನ್​: ಕಳ್ಳ ಬೆಕ್ಕುಗಳಂತೆ, ಜಿಮ್​ ಒಂದರ ಮಹಿಳೆಯರ ಚೇಂಜಿಂಗ್​ ರೂಂನ ಸೀಲಿಂಗ್​ನಲ್ಲಿ ಕುಳಿತು, ಬಟ್ಟೆ ಬದಲಾಯಿಸುವ ಮಹಿಳೆಯರನ್ನು ಇಣುಕಿ ನೋಡುತ್ತಿದ್ದ ವ್ಯಕ್ತಿಯೊಬ್ಬ ದುಪ್ಪೆಂದು ಕೆಳಕ್ಕೆ ಬಿದ್ದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

    ಬ್ರಿಯಾನ್ ಆಂಥೋನಿ ಜೋ (41) ಬಂಧಿತ ಆರೋಪಿ. ಈತ ಶನಿವಾರದಂದು ಸ್ಟಾಫರ್ಡ್ ಕೌಂಟಿಯ ಒನೆಲೈಫ್ ಫಿಟ್‌ನೆಸ್‌ನಲ್ಲಿ ಮಾಡಬಾರದ ಕೆಲಸ ಮಾಡಿದ್ದಾನೆ. ಜಿಮ್​ನಲ್ಲಿದ್ದ ಮಹಿಳೆಯರ ಚೇಂಜಿಂಗ್​ ರೂಂನ ಮೇಲಿನ ಸೀಲಿಂಗ್​ನಲ್ಲಿ ಅಡಗಿ ಕುಳಿತಿದ್ದಾನೆ. ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ಕದ್ದು ನೋಡಲಾರಂಭಿಸಿದ್ದಾನೆ. ಓರ್ವ ಮಹಿಳೆ ಬಟ್ಟೆ ಬದಲಾಯಿಸುವ ಸಮಯದಲ್ಲಿ ಆತ 10 ಅಡಿಯಷ್ಟು ಕೆಳಕ್ಕೆ ಬಿದ್ದಿದ್ದಾನೆ. ಮಹಿಳೆಯ ಮೇಲೆಯೇ ಬಿದ್ದಿದ್ದಾನೆ ಎನ್ನಲಾಗಿದೆ.

    ತಕ್ಷಣವೇ ಜಿಮ್​ನ ಸಿಬ್ಬಂದಿ ಬ್ರಿಯಾನ್​ನನ್ನು ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಲಾಗಿದೆ. ಮಹಿಳೆ ಮತ್ತು ಆರೋಪಿಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)

    ರೈತ ಹೋರಾಟದ ಬೆಂಬಲಕ್ಕೆ ನಿಂತ ನೀಲಿ ತಾರೆ ಮಿಯಾ ಖಲೀಫಾ! ಟ್ರೋಲಿಗರು ಫುಲ್​ ಖುಷ್​

    ಟಾಯ್ಲೆಟ್​ನಲ್ಲಿ ಚಿರತೆ-ನಾಯಿ ಲಾಕ್: ನಾಯಿ ಎದುರಿಗಿದ್ರೂ ಚಿರತೆ ಫುಲ್ ಸೈಲೆಂಟ್‌! ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts