More

    ಪ್ಯಾರಾಗ್ಲೈಡಿಂಗ್‌ ವೇಳೆ ಕಿರುಚುತ್ತಾ ಮೂರ್ಛೆ ಹೋದ ವ್ಯಕ್ತಿ, ವೈರಲ್ ಆಯ್ತು ವಿಡಿಯೋ

    ನವದೆಹಲಿ: ಪ್ಯಾರಾಗ್ಲೈಡಿಂಗ್ ಮಾಡುವಾಗ ಜನರು ತುಂಬಾ ಭಯಪಡುವ ಅನೇಕ ವಿಡಿಯೋಗಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಪ್ಯಾರಾಗ್ಲೈಡಿಂಗ್ ವೇಳೆ ಹೆದರುವುದು, ಕಿರುಚಲು ಪ್ರಾರಂಭಿಸುವುದು ಮಾಡುತ್ತಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಆ ವ್ಯಕ್ತಿ ಎಷ್ಟು ಹೆದರಿ ಸುಮ್ಮನಾದನೆಂದರೆ ಸುಮ್ಮನೆ ಕಿರುಚುತ್ತಾ ಪ್ರಜ್ಞಾಹೀನನಾದ. ವಿಡಿಯೋ ನೋಡಿದ ನಂತರ ಜನರು ನಿಮಗೆ ತುಂಬಾ ಭಯವಾಗಿದ್ದರೆ ಪ್ಯಾರಾಗ್ಲೆಡಿಂಗ್ ಮಾಡಬೇಡಿ ಎಂದು ಹೇಳುತ್ತಾರೆ.

    ಈ ವಿಡಿಯೋದ ಆರಂಭದಲ್ಲಿ ಪ್ಯಾರಾಗ್ಲೆಡಿಂಗ್ ಮಾಡುವಾಗ ಒರ್ವ ವ್ಯಕ್ತಿ ತುಂಬಾ ಹೆದರುತ್ತಾನೆ. ಅವನ ಬಾಯಿ ತೆರೆದಿದೆ, ಅವನೊಂದಿಗೆ ಇರುವ ಮಾರ್ಗದರ್ಶಿ ನಗುತ್ತಿದ್ದಾನೆ. ವ್ಯಕ್ತಿ ಪ್ರಜ್ಞಾಹೀನನಾಗಿರುವುದು ಅವನಿಗೆ ತಿಳಿದಿರಲಿಲ್ಲ. ನಂತರ ಅವನ ತಲೆ ಕೆಳಕ್ಕೆ ಬಾಗುತ್ತದೆ. ಅದರ ನಂತರ ಅವನನ್ನು ಕೆಳಗೆ ಇಳಿಸಲಾಗುತ್ತದೆ. ನಂತರ ಮಾರ್ಗದರ್ಶಿ ವ್ಯಕ್ತಿಯ ಮುಖವನ್ನು ಮೇಲಕ್ಕೆ ತಿರುಗಿಸಿದಾಗ, ವ್ಯಕ್ತಿ ಕಿರುಚಲು ಪ್ರಾರಂಭಿಸುತ್ತಾನೆ.

    ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ
    ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಎನಝೇಟರ್ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ವಿಡಿಯೋವನ್ನು 76 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 1500ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಬಹುತೇಕರು ಅದನ್ನು ರೀಟ್ವೀಟ್ ಮಾಡುತ್ತಿದ್ದಾರೆ. ಅಲ್ಲದೆ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ನಾನು ಇದೇ ರೀತಿ ಮಾಡುತ್ತಿದ್ದೆ, ಉತ್ಸುಕನಾಗುವ ಬದಲು ಭಯಭೀತನಾಗಿರುತ್ತಿದ್ದೆ’, ‘ಅವನಿಗೆ ಕೆಳಗೆ ಬೀಳುವ ಕನಸು ಕಂಡಾಗ ಎಚ್ಚರವಾಯಿತು’?, ಹೀಗೆ ನಾನಾ ಕಾಮೆಂಟ್​​​​ ಹಾಕುತ್ತಿದ್ದಾರೆ. ಜತೆಗೆ ಕಾಮೆಂಟ್ ವಿಭಾಗದಲ್ಲಿ ಇಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಅನಂತನಾಗ್‌ನಲ್ಲಿ ಮತ್ತೊಬ್ಬ ಯೋಧ ಹುತಾತ್ಮ; ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ, ಮುಂದುವರಿದ ಎನ್‌ಕೌಂಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts