More

    ಪ್ರವಾಹದ ಮಧ್ಯೆ ಸಿಲುಕಿದ ಲಾರಿಯಿಂದ ಹಾರಿ ಮರಹತ್ತಿದ ಚಾಲಕ; ದುರ್ದೈವ ಅಲ್ಲೇ ಕಾದಿತ್ತು

    ಸಿದ್ದಿಪೇಟ್​: ಈ ಲಾರಿ ಚಾಲಕ ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ…ಆತನನ್ನು ರಕ್ಷಿಸಲು ರಕ್ಷಣಾ ಪಡೆಗಳು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಕೊನೆಗೂ ಆತ ಜೀವ ಸಹಿತ ಬರಲೇ ಇಲ್ಲ…

    ಇದೊಂದು ದುರ್ಘಟನೆ ನಡೆದಿದ್ದು ತೆಲಂಗಾಣದ ಅಡಿಲಾಬಾದ್​ ಜಿಲ್ಲೆಯಲ್ಲಿ. ಮೃತ ವ್ಯಕ್ತಿಯನ್ನು ಮುಡಿಗೊಂಡ ಶಂಕರ್ (35) ಎಂದು ಗುರುತಿಸಲಾಗಿದೆ. ಕಾಶಿರೆಡ್ಡಿ ಗ್ರಾಮದ ನಿವಾಸಿ. ಈತ ಮೃತಪಟ್ಟಿದ್ದು ಕೊಹೆಡಾ ಮಂಡಲ್​​ನಲ್ಲಿರುವ ಬಸ್ವಾಪುರ ಗ್ರಾಮದಲ್ಲಿ.
    ಈತ ತನ್ನ ಲಾರಿಯಲ್ಲಿ ಸಿದ್ದಿಪೇಟ್​​ನಿಂದ ಹಂಸಾಬಾದ್​ಗೆ ತೆರಳುತ್ತಿದ್ದ. ಮುಂಜಾನೆ 4ಗಂಟೆ ಹೊತ್ತಿಗೆ ಬಸ್ವಾಪುರ ಸೇತುವೆ ಬಳಿ ಬರುತ್ತಿದ್ದಾಗ ಅಲ್ಲಿ ಪ್ರವಾಹ ಏರುತ್ತಿತ್ತು. ಆದರೂ ಚಾಲಕ ಲಾರಿಯನ್ನು ಮುಂದೆ ಡ್ರೈವ್​ ಮಾಡಲು ಪ್ರಯತ್ನಿಸಿದ. ಆದರೆ ಸ್ವಲ್ಪ ದೂರ ಬರುತ್ತಿದ್ದಂತೆ ಲಾರಿ ಅಲುಗಾಡಲು ಶುರುವಾಯಿತು. ಚಾಲಕ ಶಂಕರ್​​ಗೆ ಅಪಾಯದ ಅರಿವಾಯಿತು. ಕೂಡಲೇ ಲಾರಿಯಿಂದ ಅಲ್ಲಿಯೇ ಇದ್ದ ಮರಕ್ಕೆ ಹಾರಿದ್ದರು. ಅದೇ ಲಾರಿಯಲ್ಲಿದ್ದ ಕ್ಲೀನರ್​ ಧರ್ಮಯ್ಯ ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದ. ಅವನು ಬಂದು ಸ್ಥಳೀಯರಿಗೆ ಚಾಲಕ ಅಪಾಯದಲ್ಲಿ ಸಿಲುಕಿದ್ದನ್ನು ಹೇಳಿದ್ದ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರು ಕ್ವಾರಂಟೈನ್​​ಗೆ ಒಳಗಾಗಲಿದ್ದಾರಾ?

    ಮರದ ಮೇಲೆ ಸಿಲುಕಿದ್ದ ಲಾರಿ ಚಾಲಕನನ್ನು ರಕ್ಷಿಸಲು ಚಾಪರ್​ ಬರುವುದು ಅನಿವಾರ್ಯವಾಗಿತ್ತು. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಚಾಪರ್​ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಎನ್​ಡಿಆರ್​ಎಫ್ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಬರುಬರುತ್ತ ಪ್ರವಾಹದ ಮಟ್ಟ ಏರಿದ ಕಾರಣ, ಮರದ ಮೇಲಿದ್ದ ಶಂಕರ್​ ಕೊಚ್ಚಿಕೊಂಡು ಹೋಗಿದ್ದಾರೆ. ಅವರು ಪ್ರವಾಹದಲ್ಲಿ ಹೋದ ಬಳಿಕ ಚಾಪರ್​ ಸ್ಥಳಕ್ಕೆ ಆಗಮಿಸಿದ್ದು ಇನ್ನೂ ದೊಡ್ಡ ದುರಂತ.

    ಸದ್ಯ ಎನ್​ಡಿಆರ್​ಎಫ್​ ಸಿಬ್ಬಂದಿ ಮೃತ ಶಂಕರ್​​ನ ಶವದ ಹುಡುಕಾಟದಲ್ಲಿ ತೊಡಗಿದ್ದಾರೆ. (ಏಜೆನ್ಸೀಸ್​)

    ಜಗತ್ತಿಗೆ ಸ್ವಾವಲಂಬನೆ ಪಾಠ ಕಲಿಸಿದೆ ರಷ್ಯಾ; ನಮ್ಮದು ಬರೀ ಮಾತು; ಶಿವಸೇನೆ ಹೇಳಿಕೆ ಟಾರ್ಗೆಟ್​ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts