More

    ಹೆಗಲಮೇಲೆ ಹೆಬ್ಬಾವು ಹೊತ್ತು ಕುಣಿಸಿದ ಈ ವ್ಯಕ್ತಿ: ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್​

    ಜಕಾರ್ತಾ: ಹಾವು ಎಂದಾಕ್ಷಣ ಮಾರುದ್ದ ಓಡುತ್ತೇವೆ. ಈ ಪದ ಕೇಳಿದರೆ ಸಾಕು ಎಲ್ಲಿಲ್ಲದ ಭಯ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮಾತ್ರ ಹಾವು ಕಂಡರೆ ಭಯವೇ ಇಲ್ಲ.

    ಮಲೇಶಿಯಾದ ಈ ವ್ಯಕ್ತಿ ಭಾರೀ ಗಾತ್ರದ ಎರಡು ಹೆಬ್ಬಾವನ್ನು ತನ್ನ ಹೆಗಲಮೇಲಿಟ್ಟು ಡ್ಯಾನ್ಸ್​ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

    ವಿಶ್ವದಲ್ಲೇ ಅತಿ ಹೆಚ್ಚು ಉದ್ದವಿರುವ ಭಾರೀ ಗಾತ್ರದ ಹೆಬ್ಬಾವು ಇವಾಗಿದ್ದು, ಈ ವ್ಯಕ್ತಿಯು ಅವುಗಳನ್ನು ಎತ್ತುಕೊಂಡು ಹೆಗಲಮೇಲೆ ಹಾಕಿಕೊಂಡು ಕುಣಿಯುತ್ತಾನೆ. ಅದರಂತೆ ಹೆಬ್ಬಾವು ಕೂಡ ಏನೂ ಮಾಡುವುದಿಲ್ಲ. ಈ ದೃಶ್ಯ ನೋಡಿದರೇ ಮೈಯೆಲ್ಲಾ ನಡುಗುವುದಂತು ಸತ್ಯ.

    ಇದೇ ವ್ಯಕ್ತಿ ಇತ್ತೀಚೆಗೆ ನಾಗರಹಾವಿನ ತಲೆಯ ಮೇಲೆ ಮುತ್ತು ಕೊಡುತ್ತಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಏನೇ ಆದರೂ ಈ ವ್ಯಕ್ತಿ ಹಾವಿನ ಜತೆ ಈ ರೀತಿ ಆಟವಾಡುವುದು ಪ್ರಾಣದ ಜತೆ ಚೆಲ್ಲಾಟವಾಡಿದಂತೆಯೇ ಸರಿ.

    ಕೋರ್ಟ್​ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ ಅತ್ಯಾಚಾರದ ಆರೋಪಿ

    ಪಾಕ್​ ಪ್ರಧಾನಿ ಕಾರ್ಯಕ್ರಮದಿಂದ ಕೆಲಸ ಕಳೆದುಕೊಂಡ 17 ಮಂದಿ: ಕಾರಣ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts