More

    ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿ ಮಾಡಿದ ಪತಿರಾಯ; ಮದುವೆಯಲ್ಲಿ ಟ್ರೆಂಡ್​ ಆದ ಕುಟುಂಬ

    ಅಬುಜಾ: ಕೆಲವು ಜನರಿಗೆ ಡಿಫರೆಂಟ್​ ಲೈಫ್​ಸ್ಟೈಲ್​ ಇಷ್ಟವಾಗುತ್ತದೆ. ಡಿಫರೆಂಟ್​ ಆಗಿರಬೇಕೆಂದು ಅವರು ಮಾಡುವ ಕೆಲಸಗಳು ನೋಡುಗರ ಕಣ್ಣಿಗೆ ಹಾಸ್ಯಾಸ್ಪದವಾಗಿಬಿಡುತ್ತದೆ. ಇಲ್ಲೊಬ್ಬ ವ್ಯಕ್ತಿಯೂ ಕೂಡ ಡಿಫರೆಂಟ್​ ಜೀವನವನ್ನು ಬಾಳಲು ಬಯಸುತ್ತಾನಂತೆ. ಡಿಫರೆಂಟ್​ ಗುಂಗಿಗೆ ಬಿದ್ದ ಈತ ಇದೀಗ ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರಾಗಿ ಮಾಡಿದ್ದಾನೆ.

    ಇದನ್ನೂ ಓದಿ: ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್​ನಲ್ಲಿ ಪ್ರಕರಣ ದಾಖಲು

    ನೈಜೀರಿಯಾದ ಪ್ಲೇಬಾಯ್​ ಎಂದೇ ಪ್ರಸಿದ್ಧವಾಗಿರುವ ಪ್ರೆಟ್ಟಿ ಮೈಕ್​ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾನೆ. ಇದೀಗ ತನ್ನ ಸ್ನೇಹಿತನೊಬ್ಬನ ಮದುವೆಗೆ ಹೋದ ಆತ, ವಧು ವರರಿಗಿಂತ ಹೆಚ್ಚು ಸುದ್ದಿಯಾಗಿದ್ದಾನೆ.

    ಪ್ರೆಟ್ಟಿ ಮೈಕ್​ ಇತ್ತೀಚೆಗೆ ಸ್ನೇಹಿತ ವಿಲಿಯಂ ಅವರ ಮದುವೆಗೆ ತನ್ನ ಆರು ಪತ್ನಿಯರನ್ನು ಕರೆದುಕೊಂಡು ಹೋಗಿದ್ದ. ವಿಶೇಷವೆಂದರೆ ಆತನ ಆರೂ ಪತ್ನಿಯರು ಗರ್ಭಿಣಿಯರು. ಎಲ್ಲರಿಗೂ ಒಂದೇ ತೆರನಾದ ಡ್ರೆಸ್​ ಹಾಕಿಸಿಕೊಂಡು ಮದುವೆಗೆ ಕರೆದುಕೊಂಡು ಹೋಗಿದ್ದ ಆತ ತನ್ನ ಪತ್ನಿಯರನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾನೆ. ಅವರ ಹೊಟ್ಟೆಯಲ್ಲಿರುವ ಮಗುವಿಗೆ ನಾನೇ ಅಪ್ಪ ಎಂದು ಹೇಳಿಕೊಂಡಿದ್ದಾನೆ. ಮದುವೆಗೆ ಬಂದವರೆಲ್ಲರೂ ವಧು ವರರನ್ನು ನೋಡುವುದು ಬಿಟ್ಟು ಮೈಕ್​ನ ಕುಟುಂಬವನ್ನೇ ನೋಡುತ್ತಿದ್ದರಂತೆ.

    ಇದನ್ನೂ ಓದಿ: ಅಕ್ಕನನ್ನು ಬಿಟ್ಟು ತಮ್ಮನನ್ನು ಮದುವೆಗೆ ಕರೆದೊಯ್ದ ಅಮ್ಮ; ವಾಪಾಸು ಬಂದವಳಿಗೆ ಕಾದಿತ್ತು ಶಾಕ್

    ಮೈಕ್​ ಈ ರೀತಿ ವಿಚಿತ್ರ ಕೆಲಸ ಮಾಡಿ ಹೆಸರಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಯುವತಿಯರನ್ನು ಕುದುರೆಗಳಂತೆ ಕಟ್ಟಿ, ತಾನು ಸಾರಥಿಯಂತೆ ನಿಂತು ಫೋಸ್​ ಕೊಟ್ಟ ಫೋಟೋ ಹಂಚಿಕೊಂಡಿದ್ದ. ಮಹಿಳೆಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಿದ್ದ ಆತನ ಮೇಲೆ ಪೊಲೀಸ್​ ಪ್ರಕರಣವೂ ದಾಖಲಾಗಿತ್ತು. (ಏಜೆನ್ಸೀಸ್​)

    ನೇಣಿಗೆ ಶರಣಾಗುವ ಮುನ್ನ ತಮ್ಮ ಮಾಡಿದ ಕೆಲಸದಿಂದಾಗಿ ಅಣ್ಣನ ಕುಟುಂಬವೇ ನಾಶ

    ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts