More

    ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!

    ನವದೆಹಲಿ: ಒಂದು ಸಣ್ಣ ದ್ವಿಚಕ್ರ ವಾಹನವನ್ನು ಖರೀದಿಸಬೇಕೆಂದರೆ ನೋಟುಗಳ ಕಂತೆಯನ್ನೇ ತೆಗೆದುಕೊಂಡು ಹೋಗಬೇಕು. ಆದರೆ ಇಲ್ಲೊಬ್ಬ ಭೂಪ ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿ ಭಾರಿ ಗಮನ ಸೆಳೆದಿದ್ದಾನೆ.
    ಅಸ್ಸಾಂ ರಾಜ್ಯದ ಬರ್ಪೆಟ ಜಿಲ್ಲೆಯ ಸ್ಟೇಷನರಿ ಅಂಗಡಿಯ ವ್ಯಕ್ತಿಯೊಬ್ಬ ಹೀಗೆ ಬರೀ ಚಿಲ್ಲರೆ ಹಣದಲ್ಲಿ ಸ್ಕೂಟರ್ ಖರೀದಿಸಿದ್ದಾನೆ. ಹಾಗೆಂದ ಮಾತ್ರಕ್ಕೆ ಆತ ತುಂಬ ಕಡಿಮೆ ಹಣದಲ್ಲಿ ದ್ವಿಚಕ್ರ ವಾಹನ ಖರೀದಿಸಿದ್ದಾನೆ ಎಂದುಕೊಳ್ಳುವಂತಿಲ್ಲ. ಏಕೆಂದರೆ ಇಲ್ಲಿ ಆತ ನಾಣ್ಯಗಳ ಮೂಟೆಯನ್ನೇ ನೀಡಿದ್ದಾನೆ.

    ಹೌದು.. ಸ್ಕೂಟರ್​ ಕೊಳ್ಳುವ ಆಸೆಯಿಂದ ಈತ ಕೆಲವು ತಿಂಗಳುಗಳಿಂದ ದಿನಾ ಒಂದಷ್ಟು ನಾಣ್ಯಗಳನ್ನು ಉಳಿತಾಯ ಮಾಡಿದ್ದ. ಅದೇ ನಾಣ್ಯಗಳನ್ನು ಹಾಗೇ ಶೋರೂಮ್​ಗೆ ತಂದು ಆತ ಸ್ಕೂಟರ್​ ಖರೀದಿಸಿದ್ದ ದೃಶ್ಯಾವಳಿಯನ್ನು ಹಿರಕ್​ ಜೆ. ದಾಸ್ ಎಂಬ ಯೂಟ್ಯೂಬರ್ ಹಂಚಿಕೊಂಡಿದ್ದಾರೆ. ಒಂದು ಕನಸನ್ನು ನನಸು ಮಾಡಿಕೊಳ್ಳಲು ದೊಡ್ಡ ಮೊತ್ತವೇ ಬೇಕಾಗಿದ್ದರೂ ಅದನ್ನು ಸ್ವಲ್ಪಸ್ವಲ್ಪ ಉಳಿಸಿದ ಹಣದಿಂದಲೇ ಸಾಕಾರ ಮಾಡಿಸಿಕೊಳ್ಳಬಹುದು ಎಂದು ಆ ವಿಡಿಯೋ ದಾಸ್ ಹಂಚಿಕೊಂಡಿದ್ದಾರೆ.

    ಏಳೆಂಟು ತಿಂಗಳಿಂದ ಆತ ಚಿಲ್ಲರೆ ಹಣ ಕೂಡಿಡುತ್ತ ಬಂದಿದ್ದು, ಅದನ್ನು ಅಸ್ಸಾಮ್​ನ ಹೌಲಿಯ ಶೋರೂಮ್​ನಲ್ಲಿ ನೀಡಿ ದ್ವಿಚಕ್ರ ವಾಹನ ಖರೀದಿಸಿದ್ದಾನೆ. ಈತ ಸಂಗ್ರಹಿಸಿದ್ದ ನಾಣ್ಯದ ಮೂಟೆಯನ್ನು ಮೂವರು ಸೇರಿ ಹೊತ್ತುಕೊಂಡು ಬಂದಿದ್ದು, ಅದನ್ನು ಅಲ್ಲಿನ ಸಿಬ್ಬಂದಿ ಎಣಿಸಿ ಕಡೆಗೆ ವಾಹನ ಖರೀದಿಸುವವರೆಗೆ ದಾಸ್ ವಿಡಿಯೋದಲ್ಲಿ ದಾಖಲಾಗಿದ್ದು, ಆತ ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಿಲ್ಲ.

    ಬರೀ ಚಿಲ್ಲರೆ ಹಣದಲ್ಲೇ ಸ್ಕೂಟರ್ ಖರೀದಿಸಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts