More

    ವಿಧವೆಯರು..ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದವ ಅರೆಸ್ಟ್​…

    ನವದೆಹಲಿ: ವಿಧವೆಯರನ್ನು..ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದ 34 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಮದುವೆಗೆ ಸಂಬಂಧಪಟ್ಟ ವೆಬ್​ಸೈಟ್​​ಗಳ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಹಣ ಎಗರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ಹೆಸರು ಅಂಚಿತ್​ ಚಾವ್ಲಾ. ತಾನೊಬ್ಬ ಉದ್ಯಮಿಯೆಂದು ಪರಿಚಯಿಸಿಕೊಂಡು ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ತನ್ನ ಹೆಸರು, ಲೊಕೇಶನ್​ಗಳನ್ನು ಪದೇಪದೆ ಬದಲಿಸಿಕೊಳ್ಳುತ್ತಿದ್ದ. ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿ ಇಲ್ಲಿಯವರೆಗೆ ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಿದ್ದಾನೆ ಎಂದು ಹೇಳಿದ್ದಾರೆ.

    ದೆಹಲಿಯ ಅಶೋಕ್​ ವಿಹಾರ್​ ಠಾಣೆಯಲ್ಲಿ ಮಹಿಳೆಯೋರ್ವರು ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಗಿತ್ತು. ತನಗೆ ಮುದಿತ್​ ಚಾವ್ಲಾ ಎಂಬಾತ ಮೋಸ ಮಾಡಿದ್ದಾನೆ. 2018ರ ಡಿಸೆಂಬರ್​​ನಲ್ಲಿ ಮ್ಯಾಟ್ರಿಮೋನಿಯಲ್​ ಸೈಟ್​ವೊಂದರಲ್ಲಿ ನನಗೆ ಅವನ ಪರಿಚಯ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಅದೆಷ್ಟು ಚಿತ್ರಗಳಿಗೆ ಸ್ಫೂರ್ತಿಯಾಯ್ತು ಗೊತ್ತಾ ಕನ್ನಡದ ‘ಸ್ಕೂಲ್​ ಮಾಸ್ಟರ್​’?

    ದೆಹಲಿಯ ಪಾಲಂನಲ್ಲಿ ಇರುವ ಬೆಡ್​ಶೀಟ್​ ಫ್ಯಾಕ್ಟರಿಯ ಮಾಲೀಕ ತಾನು. ಅಷ್ಟೇ ಅಲ್ಲ, ಟ್ರಾವೆಲ್ ಏಜೆನ್ಸಿಗಳ ಜತೆ ಡೀಲಿಂಗ್​ ಕೂಡ ಇದೆ ಎಂದು ಹೇಳಿದ್ದ. ನನ್ನೊಂದಿಗೆ ಮೊದಲು ಇ-ಮೇಲ್​ ಮೂಲಕ ಚಾಟ್​ ಮಾಡುತ್ತಿದ್ದ. ನಂತರ ಫೋನ್​ ನಂಬರ್​ ತೆಗೆದುಕೊಂಡು ಕಾಲ್​ ಕೂಡ ಮಾಡುತ್ತಿದ್ದ. ಇಬ್ಬರೂ ಮಾತನಾಡುತ್ತಿದ್ದೆವು. ವಾಟ್ಸ್​​ಆ್ಯಪ್​ನಲ್ಲಿಯೂ ಸಂದೇಶ ವಿನಿಮಯ ಆಗುತ್ತಿತ್ತು. ಅರ್ಜೆಂಟ್​ ಆಗಿ ಬೇಕು ಎಂದು ಹೇಳಿ ಮೊದಲ ಬಾರಿ ಸ್ವಲ್ಪ ಮೊತ್ತದ ಹಣ ಪಡೆದ. ಅದನ್ನು ಕೆಲವೇ ದಿನಗಳಲ್ಲಿ ಹಿಂದಿರುಗಿಸಿದ. ನಾನೂ ನಂಬಿದೆ. ನಂತರ ತನ್ನ ಉದ್ಯಮಕ್ಕೆ ಸಂಬಂಧಪಟ್ಟಂತೆ ಮಾಡಿರುವ ಸಾಲಗಳನ್ನು ತೀರಿಸಬೇಕು…ನೀನು ಬ್ಯಾಂಕ್​ಗೆ ಪರ್ಸನಲ್​ ಲೋನ್​ ಅರ್ಜಿ ಸಲ್ಲಿಸು ಎಂದು ಹೇಳಿದ್ದ. ಹಾಗೇ ಮಾಡಿದ್ದೆ. ಆದರೆ ನಂತರ ನನಗೆ ವಂಚನೆ ಮಾಡಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಲಾಕ್​ಡೌನ್​ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !

    ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದ. ಅವನು ಆಡುವ ಮಾತುಗಳನ್ನೆಲ್ಲ ಕೇಳಿ ನಾನು ನಂಬಿಕೊಂಡಿದ್ದೆ. 2019ರ ಡಿಸೆಂಬರ್​​ನವರೆಗೆ ಸುಮಾರು 17 ಲಕ್ಷ ರೂ.ನ್ನು ನನ್ನಿಂದ ಪಡೆದುಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

    ಮಹಿಳೆ ನೀಡಿದ ಮಾಹಿತಿಯನ್ನಾಧರಿಸಿ, ಆಕೆ ಹೇಳಿದ ಮ್ಯಾಟ್ರಿಮೋನಿಯಲ್​ ವೆಬ್​​ಸೈಟ್​ನಿಂದಲೂ ವಿವರಣೆ ಪಡೆದಿದ್ದೆವು. ಆರೋಪಿ ಹಲವು ಹೆಸರುಗಳಲ್ಲಿ ಪ್ರೊಫೈಲ್​ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ. ಮಹಿಳೆಯರನ್ನು ಪರಿಚಯ ಮಾಡಿಕೊಂಡು ಚಾಟ್​ ಮಾಡುತ್ತಿದ್ದ. ಮದುವೆಯಾಗುವುದಾಗಿ ಹೇಳಿ ಹಣ ಪಡೆಯುತ್ತಿದ್ದ. ನಂತರ ಸಿಮ್​, ಲೊಕೇಶನ್​ಗಳನ್ನೆಲ್ಲ ಬದಲಿಸಿಕೊಂಡು ಕಣ್ಮರೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಮಹಿಳೆಗೆ ಮೋಸ ಮಾಡಿದ ಮಾದರಿಯಲ್ಲೇ ಇನ್ನೂ ನಾಲ್ವರಿಗೆ ಮಾಡಿದ್ದಾನೆ. ಅವನನ್ನು ಬಂಧಿಸಿ, ಲ್ಯಾಪ್​ಟಾಪ್​, ಎರಡು ಮೊಬೈಲ್​, ಕಾರು, ಆಧಾರ್​ ಕಾರ್ಡ್​​ಗಳು, ಆಭರಣಗಳನ್ನೆಲ್ಲ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ನಾಚಿಕೆ ಆಗಬೇಕು ತುಕ್ಡೆ ತುಕ್ಡೆ ಗ್ಯಾಂಗ್​ನವರಿಗೆ..ರಾಷ್ಟ್ರಕ್ಕೇ ಮಾರಕ ಅವರು: ಹುತಾತ್ಮ ಯೋಧನ ಪತ್ನಿಯ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts