More

    ಶೇವಿಂಗ್​ ಕ್ರೀಂ ಬದಲು ಹೇರ್​ ರಿಮೂವಲ್​ ಕ್ರೀಮ್​ ಅನ್ನು ಮುಖದ ತುಂಬ ಹಚ್ಚಿಕೊಂಡ! ಮುಂದೇನಾಯ್ತು

    ಗೋಲ್ಡ್ ಕೋಸ್ಟ್: ಮೊಡವೆಗೆ ಹಚ್ಚು ಕ್ರೀಂ ಎಂದುಕೊಂಡು ಬೇರಾವುದೋ ಕ್ರೀಂ ಹಚ್ಚಿಕೊಂಡು ಮುಖವನ್ನು ಹಾಳು ಮಾಡಿಕೊಳ್ಳುವವರನ್ನು ನೋಡಿರುತ್ತೀರಿ. ಆದರೆ ಶೇವಿಂಗ್​ ಕ್ರೀಂ ಹಚ್ಚಿಕೊಳ್ಳುವ ಬದಲು ಹೇರ್​ ರಿಮೂವಲ್​ ಹಚ್ಚಿಕೊಳ್ಳುವವರ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?


    ಆಸ್ಟ್ರೇಲಿಯಾದ ಗೋಲ್ಡ್​ ಕೋಸ್ಟ್ ನಿವಾಸಿ ರೊನಾಲ್ಡ್ ವಾಕರ್​ (22) ಇತ್ತೀಚೆಗೆ ಶೇವಿಂಗ್​ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅವರು ತಂದಿಟ್ಟುಕೊಂಡಿದ್ದ ಶೇವಿಂಗ್ ಕ್ರೀಂ ಖಾಲಿಯಾಗಿದ್ದರಿಂದ ಬೇರೆ ಕ್ರೀಂ ಹಚ್ಚಿಕೊಂಡು ಶೇವಿಂಗ್​ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅದಾಗಲೇ ಕೆಲಸದ ಮೇರೆ ಹೊರಗೆ ಹೋಗಿದ್ದ ಅಣ್ಣನ ಕ್ರೀಂ ಒಂದು ಅಲ್ಲಿದ್ದು, ಅದನ್ನೇ ಮುಖದ ತುಂಬಾ ಹಚ್ಚಿಕೊಂಡಿದ್ದಾರೆ. ಕ್ರೀಂ ಹಚ್ಚಿಕೊಂಡ ಕೆಲ ಸೆಕೆಂಡುಗಳಲ್ಲಿ ಅವರಿಗೆ ಮುಖ ಉರಿಯಲು ಆರಂಭಿಸಿದೆ. ಗಾಬರಿಗೊಂಡು ಅಣ್ಣನಿಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿದ್ದಾರೆ. ಆಗ ಅವರ ಅಣ್ಣ, ಅದು ಶೇವಿಂಗ್​ ಕ್ರೀಂ ಅಲ್ಲ, ಹೇರ್​ ರಿಮೂವಲ್​ ಕ್ರೀಂ ಎಂದು ತಿಳಿಸಿದ್ದಾರೆ.


    ಗಾಬರಿಗೊಂಡ ರೊನಾಲ್ಡ್​ ತಕ್ಷಣ ಮುಖ ತೊಳೆದುಕೊಂಡಿದ್ದಾರೆ. ಮುಖದಲ್ಲಿನ ಹುಬ್ಬು ತಲೆಯ ಮುಂಭಾಗದ ಕೂದಲು ಕ್ರೀಂನೊಂದಿಗೆ ಬಂದಿದೆ. ಈ ವಿಚಾರವನ್ನು ರೊನಾಲ್ಡ್​ ತನ್ನ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರೊನಾಲ್ಡ್ ಫೋಟೋ ನೋಡುತ್ತಿರುವ ಜನರು ಆತನ ಪರಿಸ್ಥಿತಿ ನೆನಪಿಸಿಕೊಂಡು ನಗು ಬೀರಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts