More

    ಕೊವಿಡ್​-19 ಸೋಂಕಿಗೆ ಒಳಗಾದ ತನ್ನ 80 ವರ್ಷದ ತಾಯಿಗೆ ಈ ಮಗ ಕೊಟ್ಟಿದ್ದು ಕ್ರೂರ ಶಿಕ್ಷೆ…

    ವಿಜಯವಾಡ: ಕರೊನಾ ಸೋಂಕು ಜಗತ್ತಿಗೆ ಕಾಲಿಟ್ಟಾಗಿನಿಂದ ಅದೆಷ್ಟೆಷ್ಟೋ ಅಮಾನವೀಯ ಘಟನೆಗಳು ನಡೆದುಹೋಗಿವೆ.
    ಇದೀಗ ಪುತ್ರನೋರ್ವ ತನ್ನ 80 ವರ್ಷದ ತಾಯಿಯಲ್ಲಿ ಕರೊನಾ ಸೋಂಕು ದೃಢಪಡುತ್ತಿದ್ದಂತೆ ಆಕೆಯನ್ನು ನಡುರಸ್ತೆಯಲ್ಲಿ ಕೈಬಿಟ್ಟು, ಕ್ರೂರತನ ತೋರಿಸಿದ್ದಾನೆ.

    ಆಂಧ್ರಪ್ರದೇಶದ ಗುಂಟೂರಿನಲ್ಲಿ ಘಟನೆ ನಡೆದಿದೆ. ಕರೊನಾ ಸೋಂಕಿಗೆ ತುತ್ತಾದ ವೃದ್ಧ ತಾಯಿಯನ್ನು ಆರೈಕೆ ಮಾಡದೆ, ಆಕೆಯಲ್ಲಿ ಬಸ್​ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆತನ ವಿರುದ್ಧ ಎಫ್ಐಆರ್​ ದಾಖಲಿಸಿದ್ದಾರೆ.
    ವೃದ್ಧ ಮಹಿಳೆ ಗೋವಾದ ತನ್ನ ಮಗಳ ಮನೆಯಿಂದ ಗುಂಟೂರಿನಲ್ಲಿರುವ ತನ್ನ ಪುತ್ರನ ಮನೆಗೆ ಬಂದಿದ್ದರು. ಗೋವಾದಿಂದ ಆಗಮಿಸಿದ್ದ ಅವರಲ್ಲಿ ಕರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಪುತ್ರ ವೆಂಕಟೇಶ್ವರ್​ ರಾವ್​ ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸಿದ್ದ. ವೈದ್ಯಕೀಯ ವರದಿಯಲ್ಲಿ ಕೊವಿಡ್-19 ಇರುವುದು ದೃಢಪಟ್ಟಿತ್ತು.

    ಅದಾದ ಬಳಿಕ ತಾಯಿಯನ್ನು ಸೀದಾ ಬಸ್​​ನಿಲ್ದಾಣಕ್ಕೆ ಕರೆದುಕೊಂಡು ಹೋದ ವೆಂಕಟೇಶ್ವರ್​ ರಾವ್​, ವೃದ್ಧೆಯನ್ನು ಅಲ್ಲಿನ ಬೆಂಚ್​ ಮೇಲೆ ಕೂರಿಸಿ, ನೀರು ತರುವ ನೆಪದಲ್ಲಿ ಪರಾರಿಯಾಗಿದ್ದಾನೆ. ಮತ್ತೆ ಬರಲಿಲ್ಲ. ಇದನ್ನೂ ಓದಿ:10ನೇ ವರ್ಷದ ವಿವಾಹ ವಾಷಿರ್ಕೋತ್ಸವದ ಸಂಭ್ರಮದಲ್ಲಿ ಧೋನಿ ದಂಪತಿ

    ತುಂಬ ಹೊತ್ತಿನಿಂದ ವೃದ್ಧೆ ಅಲ್ಲಿ ಕುಳಿತಿದ್ದನ್ನು ನೋಡಿದ ಪ್ರಯಾಣಿಕರೋರ್ವರು ಅವರ ಬಳಿ ಹೋಗಿ ಮಾತನಾಡಿಸಿದ್ದಾರೆ. ಆಕೆ ತನ್ನ ಮಗ ನೀರು ತರಲು ಹೋದವನು ಬರಲಿಲ್ಲ ಎಂದು ಹೇಳಿದ್ದಾರೆ. ಹಾಗೇ ತಮ್ಮ ಮನೆಯ ವಿಳಾಸವನ್ನೂ ತಿಳಿಸಿದ್ದಾರೆ. ಪ್ರಯಾಣಿಕನಿಗೆ ಅನುಮಾನ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆರೋಗ್ಯ ಸಿಬ್ಬಂದಿಯೂ ಬಂದು ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡುತ್ತಿದ್ದಾರೆ.

    ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿದ ಬಳಿಕ, ಮಗ ವೆಂಕಟೇಶ್ವರ್​ ರಾವ್​ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. (ಏಜೆನ್ಸೀಸ್​)

    ಮದುವೆ ಎರಡೇ ದಿನ ಇರುವಾಗ ಪಾಗಲ್​ ಪ್ರೇಮಿಯ ಗುಂಡೇಟಿಗೆ ಬಲಿಯಾದ 19ರ ಯುವತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts