More

    ಮಮತಾ ಬ್ಯಾನರ್ಜಿ ದುರ್ಗಾ ದೇವಿಯ ಹಾಗೆ, ಆಕೆಯ ದೃಢತೆ ನಮಗೆ ಮಾದರಿ ಎಂದ ಎಚ್​ಡಿಕೆ

    ಬೆಂಗಳೂರು : “ದುಷ್ಟ ಶಕ್ತಿಗಳ ವಿರುದ್ಧ ಗೆದ್ದ ದುರ್ಗಾ ದೇವಿಯಂತೆ ಮಮತಾ ಬ್ಯಾನರ್ಜಿ ಅವರು ಹೊರಹೊಮ್ಮಿದ್ದಾರೆ. ವಿವಿಧ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶದಲ್ಲಿ ದೇಶದ ಜನರು ಪ್ರಾದೇಶಿಕ ಹೆಮ್ಮೆಯನ್ನು ಪ್ರತಿಪಾದಿಸಿದ್ದಾರೆ” ಎಂದು ಜೆಡಿಎಸ್​ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಕುಮಾರಸ್ವಾಮಿ ಅವರು ಇಂದು ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾದ ನಾಯಕರನ್ನು ಹೊಗಳುತ್ತಾ ಬ್ಯಾನರ್ಜಿ ಅವರ ಬಗ್ಗೆ ಈ ಮಾತುಗಳನ್ನಾಡಿದ್ದಾರೆ. ಇಂದಿನ ಚುನಾವಣಾ ಫಲಿತಾಂಶಗಳು, ಜನರು ತಮ್ಮ ಹೃದಯ ಗೆದ್ದ ಪ್ರಾದೇಶಿಕ ಪಕ್ಷಗಳ ನಾಯಕರ ಹಿಂದೆ ನಿಲ್ಲುತ್ತಾರೆ ಎಂಬುದಕ್ಕೆ ಹೊಸ ಉದಾಹರಣೆಯಾಗಿದೆ ಎಂದಿದ್ದಾರೆ. “ಅಧಿಕಾರದ ಅನೈತಿಕ ಪ್ರಯೋಗದ ವಿರುದ್ಧ ಎದ್ದುನಿಂತ ಮಮತಾ ಅವರ ಟಫ್​ನೆಸ್​ ನಮಗೆ ಮಾದರಿಯಾಗಲಿದೆ. ಮತ್ತು ವಿಪರೀತ ರಾಜಕೀಯ ಸನ್ನಿವೇಶದಲ್ಲೂ ಮುನ್ನಡೆದ ಡಿಎಂಕೆ ನಾಯಕರ ತಾಳ್ಮೆ ನಮಗೆ ಪಾಠವಾಗಲಿದೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಇದನ್ನೂ ಓದಿ: ಹುಷಾರ್​, ಚುನಾವಣೆ ಗೆಲುವನ್ನು ಆಚರಿಸಲು ಗುಂಪು ಸೇರಿದರೆ ಕೇಸ್ !

    ಈ ನಡುವೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜೆಡಿಎಸ್​​ಗೆ ಮೂರನೇ ಸ್ಥಾನ ಬಂದಿದೆ. ಬೀದರ್​ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಿಜೆಪಿಯ ಶರಣು ಸಲಗಾರ್​ ವಿಜೇತರಾದರೆ, ಕಾಂಗ್ರೆಸ್​ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್ ಎರಡನೇ ಸ್ಥಾನ ಗಳಿಸಿದರು. ಜೆಡಿಎಸ್​​ನ ಸೈಯದ್ ಯಸ್ರಬ್ ಅಲಿ ಖ್ವಾದ್ರಿ ಮೂರನೇ ಸ್ಥಾನ ಗಳಿಸಿದರು. ಜನರ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ ಎಚ್​ಡಿಕೆ, ಬಿಜೆಪಿ ಮತ್ತು ಕಾಂಗ್ರೆಸ್​ನ ಸುಳ್ಳು ಪ್ರಚಾರ ಮತ್ತು ಹಣದ ಶಕ್ತಿಗಳು ಈ ಫಲಿತಾಂಶಕ್ಕೆ ಕೊಡುಗೆ ನೀಡಿವೆ ಎಂದಿದ್ದಾರೆ.

    ಖ್ವಾದ್ರಿ ಅವರಿಗೆ ಮತ ಹಾಕಿದ ಜನರಿಗೆ ಧನ್ಯವಾದ ತಿಳಿಸಿ, ಉಪಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಮತ್ತು ನಾಯಕರಿಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ. “ವಿವಿಧ ಪರಿಸ್ಥಿತಿಗಳಿಂದ ಕಷ್ಟದ ಸಮಯವನ್ನು ಎದುರಿಸುತ್ತಿರುವ ಜೆಡಿ(ಎಸ್) ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಎದ್ದು ನಿಂತು ರಾಜಕೀಯವಾಗಿ ಬೆಳೆಯಲಿದೆ” ಎಂದು ಪಕ್ಷದ ಕಾರ್ಯಕರ್ತರಲ್ಲಿ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    “ಅಸ್ಸಾಂನ ಜನ ಬಿಜೆಪಿ ಸರ್ಕಾರದ ಪ್ರಯೋಜನ ಅರಿತಿದ್ದಾರೆ”

    ಕೋವಿಡ್ ವಾರಿಯರ್​​ಗಳ ಸೇವೆಗೆ ‘ಚೈತನ್ಯ ಕೇಂದ್ರ’ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts