More

    ನಂದಿಗ್ರಾಮದಲ್ಲಿ ಸೋತರೂ ಮೇ 5ರಂದೇ ಮುಖ್ಯಮಂತ್ರಿಯಾಗಿ ದೀದಿ ಪ್ರಮಾಣವಚನ!

    ಕಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ತಮ್ಮ ಟಿಎಂಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಆ ಪಕ್ಷದ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಅವರು ಅದ್ವಿತೀಯ ಸಾಧನೆ ಮಾಡಿದ್ದಾರೆ.

    ಮಮತಾ ಅವರು ಮೇ 5 ರಂದೇ ಬುಧವಾರ ಸಂಜೆ 5 ಗಂಟೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ. ರಾಜ್ಯಪಾಲ ಜಗದೀಪ್ ಧನಕರ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.

    ನಂದಿಗ್ರಾಮದಲ್ಲಿ ಸೋತರೂ ಮಮತಾ ಅವರು ಸಿಎಂ ಆಗುತ್ತಿದ್ದಾರೆ. ಮುಂದಿನ ಆರು ತಿಂಗಳಲ್ಲಿ ತೆರವಾದ ಅಥವಾ ಯಾವುದಾದರೊಂದು ವಿಧಾನಸಭಾ ಕ್ಷೇತ್ರವನ್ನು ತೆರವು ಮಾಡಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಶಾಸಕಿಯಾಗುವ ಲೆಕ್ಕಾಚಾರದಲ್ಲಿ ದೀದಿ ಇದ್ದಾರೆ.

    ಈ ಹಿಂದೆ ಕರ್ನಾಟಕದಲ್ಲೂ ಹೀಗೆ ಆಗಿತ್ತು. 1976 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದುಕೊಂಡಿತ್ತು. ಆದರೆ ಆ ಪಕ್ಷದ ನಾಯಕತ್ವ ವಹಿಸಿದ್ದ ಎಸ್ ನಿಜಲಿಂಗಪ್ಪ ಅವರು ಚನ್ನಗಿರಿಯಲ್ಲಿ ಸೋತಿದ್ದರು. ನಂತರ ಸಿಎಂ ಆಗಿದ್ದರು. ಆ ನಂತರ ಶಿಗ್ಗಾವಿ ಕ್ಷೇತ್ರದಲ್ಲಿ ಶಾಸಕರಾಗಿದ್ದವರನ್ನು ರಾಜೀನಾಮೆ ಕೊಡಿಸಿ ಅವಿರೋಧವಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

    ಅಕೌಂಟ್​ ಬ್ಯಾನ್​: ಟ್ವಿಟ್ಟರ್​ ವಿರುದ್ಧ ಗುಡುಗಿದ ಕಂಗನಾ ರಣಾವತ್

    ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ರಾಜ್ಯಪಾಲ ಜಗದೀಪ್ ಧನಕರ್ ಜೊತೆ ಮಾತನಾಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts