More

    ಆಸ್ಪತ್ರೆಯಲ್ಲಿ ದೀದಿ : ಕಾಲಿಗೆ ಫ್ರಾಕ್ಚರ್, ಭುಜಕ್ಕೆ ಮೂಗೇಟು

    ಕೊಲ್ಕತಾ: ಪಶ್ಚಿಮ ಬಂಗಾಳದ ನಂದಿಗ್ರಾಮಕ್ಕೆ ಚುನಾವಣೆ ಸಂಬಂಧವಾಗಿ ಭೇಟಿ ನೀಡಿದ್ದ ವೇಳೆ ಗಾಯಗೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ನಿನ್ನೆ ರಾತ್ರಿ ಕೊಲ್ಕತಾದ ಎಸ್​ಎಸ್​ಕೆಎಂ ಆಸ್ಪತ್ರೆಗೆ ಸೇರಿಸಲಾಯಿತು. ಬ್ಯಾನರ್ಜಿ ಅವರನ್ನು ಚಿಕಿತ್ಸೆ ಮಾಡುತ್ತಿರುವ ವೈದ್ಯರು, ಅವರಿಗೆ ಎಡ ಪಾದದಲ್ಲಿ ಫ್ರಾಕ್ಚರ್​ ಆಗಿದ್ದು, ಭುಜ ಮತ್ತು ಕತ್ತಿಗೆಗೆ ಮೂಗೇಟು ಬಿದ್ದಿದೆ ಎಂದಿದ್ದಾರೆ. ಅವರನ್ನು 48 ಗಂಟೆಗಳ ಕಾಲ ಅಬ್ಸರ್ವೇಷನ್​ನಲ್ಲಿರಿಸಲು ವೈದ್ಯರು ನಿರ್ಧರಿಸಿದ್ದಾರೆ.

    “ಆರಂಭಿಕ ಪರೀಕ್ಷೆಯಲ್ಲಿ ಅವರ ಎಡ ಪಾದ ಮತ್ತು ಹಿಮ್ಮಡಿಯ ಎಲುಬಿಗೆ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ. ಬಲ ಭುಜ, ಮುಂದೋಳು ಮತ್ತು ಕುತ್ತಿಗೆಗೆ ಮೂಗೇಟು ಬಿದ್ದಿದೆ. ಘಟನೆಯ ನಂತರ ಸಿಎಂ ಎದೆ ನೋವು ಮತ್ತು ಉಸಿರಾಟದಲ್ಲಿ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಆಕೆಯನ್ನು 48 ಗಂಟೆಗಳ ಕಾಲ ನಿಕಟ ವೀಕ್ಷಣೆಯಲ್ಲಿ ಇರಿಸಲಾಗಿದೆ” ಎಂದು ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಎಂ.ಬಂದೋಪಾಧ್ಯ ತಿಳಿಸಿದ್ದಾರೆ.

    ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!

    ಬ್ಯಾನರ್ಜಿ ಅವರಿಗೆ ತೆಳುಜ್ವರ ಕೂಡ ಕಾಣಿಸಿಕೊಂಡಿದ್ದು ಅವರನ್ನು ವಿವಿಐಪಿ ವುಡ್​ಬರ್ನ್​ ಬ್ಲಾಕ್​ನಲ್ಲಿರುವ ವಿಶೇಷ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ. ಎಕ್ಸ್​​ರೇ, ಎಂಆರ್​ಐ, ಸಿಟಿ ಸ್ಕಾನ್​ಗಳು ನಡೆದಿದ್ದು, ಇನ್ನೂ ಕೆಲವು ಪರೀಕ್ಷೆಗಳ ನಂತರ ಅವರ ಸ್ಥಿತಿಯನ್ನು ಪರಿಶೀಲಿಸಲಾಗುವುದು. ನಂತರ ಚಿಕಿತ್ಸೆಯ ಬಗ್ಗೆ ನಿರ್ಧರಿಸಲಾಗುವುದು ಎನ್ನಲಾಗಿದೆ.

    ಕೆಲವು ಜನರು ತಮ್ಮ ಮೇಲೆ ನೂಕುನುಗ್ಗಲು ಮಾಡಿದ್ದು, ಆ ಸಮಯದಲ್ಲಿ ಯಾರೂ ಪೊಲೀಸರು ಸ್ಥಳದಲ್ಲಿರಲಿಲ್ಲ. ನನ್ನ ಮೇಲೆ ಸಂಚು ನಡೆದಿದೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನಿನ್ನೆ ದೂರಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ದೀದಿ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೇಳಿತ್ತು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಂಗಾಳ : ಎಬಿವಿಪಿ ಸದಸ್ಯರ ಮೇಲೆರಗಿದರೇ… ಟಿಎಂಸಿ ರೌಡಿಗಳು?!

    ಹರಿಯಾಣ : ‘ಅವಿಶ್ವಾಸ’ವನ್ನು ಮಣಿಸಿದ ಬಿಜೆಪಿ-ಜೆಜೆಪಿ ಸರ್ಕಾರ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts