More

    ದೇಶ ಉದ್ಧಾರ ಮಾಡುವ ಕಾರ್ಯಕ್ರಮ ಬಿಜೆಪಿ ಬಳಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ದೇಶ ಉದ್ಧಾರ ಮಾಡುವ ಕಾರ್ಯಕ್ರಮ ಬಿಜೆಪಿ ಬಳಿ ಇಲ್ಲ. ದೇಶ ಒಡೆಯುವುದೆ ಬಿಜೆಪಿ ಕೆಲಸವಾಗಿದೆ. ಸಮಾಜದಲ್ಲಿ ಶಾಂತಿ ಇರಬಾರದು ಎಂಬ ಉದ್ದೇಶ ಬಿಜೆಪಿಗಿದೆ ಎಂದು ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜಿಪಿ ಸರ್ಕಾರ ಹಾಗೂ ಮೋದಿ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ 12 ತಾಸು ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ರಾತ್ರಿ ಪಾಳೆಯಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಅವಕಾಶ ನೀಡಿದ್ದಾರೆ. ನಮ್ಮ ದೇಶದ ಮಹಿಳೆಯರು ಜಮೀನಿನಲ್ಲಿ ಕೆಲಸ ಮಾಡ್ತಾರೆ. ಇದಕ್ಕೆ ನಮ್ಮ ಚಿಂತೆ ಇರಲಿಲ್ಲ. ದೊಡ್ಡ ಕಂಪನಿಯವರು ಒತ್ತಡ ತರುತ್ತಿದ್ದಾರೆ. ಮಹಿಳೆಯರಿಗೆ ರಾತ್ರಿ ಪಾಳೆ ನೀಡುವಂತೆ ಒತ್ತಡ ತಂದಿದ್ದಾರೆ ಎಂದಿದ್ದಾರೆ.

    ಇದನ್ನೂ ಓದಿ: ಪಾಕ್​​ನಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಹಲ್ಲಿ ತೈಲ ಬಳಕೆ!

    ಪಿಎಫ್ ಫಂಡ್‌ ಹಣವನ್ನು ಉದ್ಯಮಿಗಳಿಗೆ ಸಾಲ ನೀಡುತ್ತಿದ್ದಾರೆ. ಕಡಿಮೆ ಬಡ್ಡಿಗೆ ಸಾಲ ನೀಡುತ್ತಿದ್ದಾರೆ. ಶೇರ್ ಮಾರ್ಕೆಟ್ ಮೇಲೆ ಹಣ ಹೂಡುತ್ತಿದ್ದಾರೆ. ಮಾರ್ಕೆಟ್ ಬಿದ್ದು ಹೊದ್ರೆ ಏನ್ ಮಾಡ್ತಾರೆ? ಕಾರ್ಮಿಕರ ಹಣಕ್ಕೆ ಯಾರು‌ ಗ್ಯಾರಂಟಿ ಕೊಡುತ್ತಾರೆ? ಕಾರ್ಮಿಕರ ಬಗ್ಗೆ ಕಾಳಜಿಯೂ ಇಲ್ಲ, ಅವರ ಕಷ್ಟ ಪಟ್ಟು ದುಡಿದ ದುಡಿನ ಬಗ್ಗೆ ಜವಾಬ್ದಾರಿ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

    ಇದನ್ನೂ ಓದಿ: BJP Manifesto: ಬಿಜೆಪಿಯ ‘ಪ್ರಜಾ ಪ್ರಣಾಳಿಕೆ’ಯಲ್ಲಿ ಏನಿದೆ? 

    ಕಾರ್ಮಿಕರ ವೇತನ ಶೇಕಡಾ ೫ ರಷ್ಟು ಮಾತ್ರ ಹೆಚ್ಚಾಗಿದೆ. ನಾಲ್ಕು ಕಾನೂನು ತಂದಿದ್ದಾರೆ. ನಾಲ್ಕು ಕಾನೂನು ಕಾರ್ಮಿಕರ ವಿರೋಧಿ ಇದ್ದಾವೆ. ನಾಲ್ಕು ‌ಕಾನೂನಗಳನ್ನು ನಾನು ಖಂಡಿಸುತ್ತೇನೆ. ಈ‌ ಕಾನೂನುಗಳನ್ನು ವಾಪಸ್ಸು ಪಡೆಯಬೇಕು. ಬಹುಮತ ಇದೆ ಅಂತ‌ ಕಾನೂನು ಪಾಸ್ ಮಾಡಿದ್ದಾರೆ. ಬಡವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ಕೇಂದ್ರ ಹೇಳಿದ ಹಾಗೆ ರಾಜ್ಯ ಸರ್ಕಾರ ಕೇಳ್ತಾ ಇದೆ ಎಂದು ಸಾಲು ಸಾಲು ಆರೋಪ ಮಾಡಿದ್ದಾರೆ.

    ಕರ್ನಾಟಕ ಒಂದು ಪ್ರಗತಿಪರ ರಾಜ್ಯ, ಇಲ್ಲಿ ಜಾರಿ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಮೋದಿ ಹೇಳಿದ ಹಾಗೆ ರಾಜ್ಯ ಸರ್ಕಾರ ಮಾಡುತ್ತಿದೆ. ಮೋದಿ ಉದ್ಯಮಿಗಳ‌ ಮಾತು ಕೇಳ್ತಾರೆ. ಉದ್ಯಮಿಗಳಿಗೆ ಅನುಕೂಲ ಆಗುವ ಹಾಗೆ ಮೋದಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಆಜಾನ್‌ ವೇಳೆ ಭಾಷಣ ನಿಲ್ಲಿಸಿ ಗೌರವ ತೋರಿದ ರಾಹುಲ್ ಗಾಂಧಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts