More

    ಮೈ ಭೀ ದುಃಖಿ ಹ್ಞೂ ಅಂತಾರೆ ಪ್ರಧಾನಿ: ಮಲ್ಲಿಕಾರ್ಜುನ ಖರ್ಗೆ ಟೀಕೆ

    ಬೆಂಗಳೂರು: ಕೇಂದ್ರ ಸರ್ಕಾರ ಬಾಯಿ ತೆಗೆದಿದೆ, ಕಣ್ಣು ಬಾಯಿ‌ಮುಚ್ಚಿಕೊಂಡು ಕೂತಿದೆ. ಪ್ರಧಾನಿ ಮೈ ಭೀ ದುಃಖಿ ಹ್ಞೂ ಅಂತಾರೆ. ಆದರೆ ವಲಸೆ ಕಾರ್ಮಿಕರಿಗೆ ನೆರವಾಗುತ್ತಿಲ್ಲ. ಕೋವಿಡ್ 19 ನಿಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ವಲಸಿಗರು, ಅಸಂಘಟಿತ, ಸಂಘಟಿತ ಕಾರ್ಮಿಕರಿಗೆ ಯಾವುದೇ ರೀತಿ ಸರ್ಕಾರ ಸಹಾಯ ಮಾಡಲಿಲ್ಲ. ಅವರೂ ತೊಂದರೆಗೀಡಾಗಿದ್ದಾರೆ ಎಂದು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

    ಎಂಎಸ್ ಎಂಇ ಸಂಪೂರ್ಣ ನಿಂತು ಹೀಗಿದೆ. ಅಲ್ಲಿ‌ಕೆಲಸ ಮಾಡುವ 11 ಕೋಟಿ ಕಾರ್ಮಿಕರಿಗೆ ತೊಂದರೆಯಾಗಿದೆ. ಅಂತರಾಜ್ಯ, ಅಂತರ ಜಿಲ್ಲಾ ವಲಸಿಗರ ಸಂಖ್ಯೆ ಎಂಟು ಕೋಟಿ ಇದೆ. ಅವರ ಜೀವನ ಅಸ್ತವ್ಯಸ್ತವಾಗಿದೆ. ಸಹಜವಾಗಿ ರೈತರು ಮತ್ತು ರೈತ ಕಾರ್ಮಿಕರಿಗೆ ತೊಂದರೆಯಾಗಿದೆ. ದೇಶದಲ್ಲಿ ದವಸ ಧಾನ್ಯ ಉತ್ಪತ್ತಿಯಾದರೂ ಸಹ ಹಾಳಾಗಿದೆ. ಕೇಳುವವರು ಯಾರೂ ಇಲ್ಲ. ಗ್ರಾಹಕರು ಸಹಜವಾಗಿ ಹಣ ಇದ್ದರೆ ಖರೀದಿ ಮಾಡುತ್ತಾರೆ. ಆದರೆ ಖರೀದಿ ಶಕ್ತಿ ಇಲ್ಲ.

    ಇದನ್ನೂ ಓದಿ:  ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!

    ರೈಲ್ವೆ ಇಲಾಖೆ ಇದೆಯೋ ಇಲ್ಲವೋ ಅರ್ಥ ಆಗುತ್ತಿಲ್ಲ. 13 ಸಾವಿರ ಪ್ಯಾಸೆಂಜರ್ ರೈಲು ಅಡ್ಡಾಡುತ್ತದೆ. ಒಂಬತ್ತು ಸಾವಿರ ರೈಲು ಸರಕು ಸಾಗಣೆ ಮಾಡುತ್ತವೆ. ಎರಡು ಕೋಟಿ ಮೂವತ್ತು ಲಕ್ಷ ರೈಲಲ್ಲಿ ಓಡಾಡುತ್ತಾರೆ. ಇವತ್ತು ಕೇವಲ ವಲಸೆ ಕಾರ್ಮಿಕರಿಗೆ ಸರಿಯಾದ ವ್ಯವಸ್ಥೆ ಮಾಡಲಿಲ್ಲ. ಪ್ಯಾಸೆಂಜರ್ ರೈಲಲ್ಲಿ ನಾಲ್ಕು ದಿನದಲ್ಲಿ ಎಲ್ಲ ವಲಸೆ ಕಾರ್ಮಿಕರನ್ನು ಬಿಟ್ಟು ಬಿಡಬಹುದಿತ್ತು.‌ ಮುಂಚಿತವಾಗಿ ಘೋಷಿಸಿದ್ದರೆ ವಲಸೆ ಕಾರ್ಮಿಕರು ಬೀದಿಯಲ್ಲಿ ಸಾಯುತ್ತಿರಲಿಲ್ಲ.‌ ಗರ್ಭಿಣಿಯರಿಗೆ ಬೀದಿಯಲ್ಲಿ ಹೆರಿಗೆ ಆಗುತ್ತಿರಲಿಲ್ಲ. ಮಕ್ಕಳು ಹಾಲಿಲ್ಲದೇ ಸಾಯುತ್ತಿರಲಿಲ್ಲ. ಅನ್ನ ನೀರಿಲ್ಲದೇ ಕೋಟ್ಯಂತರ ಜನ ಕಷ್ಟಕ್ಕೆ ಒಳಗಾಗಿದ್ದಾರೆ.

    ಈ ವರೆಗೆ 260 ರೈಲು ಸಂಚರಿಸಿದ್ದು ಮೂರು ಲಕ್ಷ ಜನರಿಗೆ ಅವಕಾಶವಾಗಿದೆ. ಅದೂ ಸೋನಿಯಾ ಗಾಂಧಿ ಹೇಳಿದ ಮೇಲೆ ರೈಲು ಬಿಟ್ಟರು. ಯಾವುದೇ ಮುಂದಾಲೋಚನೆ ಇಲ್ಲದೆ ತೀರ್ಮಾನ‌ಮಾಡಿದ್ದಾರೆ. ಸೋಂಕು ಕಡಿಮೆ ಇದ್ದಾಗ ಲಾಕ್ ಡೌನ್ ಮಾಡಿ ಹೆಚ್ಚಾದಾಗ ಲಾಕ್ ಡೌನ್ ಓಪನ್ ಮಾಡಿದ್ದಾರೆ. ಇದು ಎಲ್ಲರಿಗೂ ತೊಂದರೆ ಮಾಡಿದ ಸರ್ಕಾರ. ನಮ್ಮ ಸರ್ಕಾರ ಜನರಿಗೆ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ. ಕೋವಿಡ್ 19 ಹರಡುತ್ತಿರುವುದು ಸ್ವಯಂಕೃತ ತಪ್ಪುಮ 560 ಜನ ಸತ್ತಿದ್ದಾರೆ. ಇದಕ್ಕೆ ಯಾರು ಹೊಣೆ. ಊಟ ತಿಂಡಿ ಇಲ್ಲದೇ ಸತ್ತರು. 2-3 ಸಾವಿರ ಕಿಲೋ ಮೀಟರ್ ನಡೆದರು. ಯುದ್ಧದ ಸಂದರ್ಭದಲ್ಲೂ ಈ ರೀತಿ ಆಗಿರಲಿಲ್ಲ.

    ಇದನ್ನೂ ಓದಿ: ಹನ್ನೊಂದು ತಿಂಗಳ ಮಗು ಬಕೆಟ್​ಗೆ ಬಿದ್ದು ಸಾವು..

    20 ಲಕ್ಷ ಕೋಟಿ ಪ್ಯಾಕೇಜ್ ಅಂದರು, ಎಲ್ಲಿದೆ ಶೇ. ಹತ್ತು ಜಿಡಿಪಿ? ಶೇ.ಒಂದು ಭಾಗ ಅಷ್ಟೆ.‌ ಕೊಟ್ಟಿದ್ದು ಒಂದು ಲಕ್ಷ ಎಪ್ಪತ್ತು ಸಾವಿರ ಕೋಟಿ ಮಾತ್ರ. ಯಾರ ಜೀವ ಕಡಿಯಲು ಬಂದಿದ್ದೀರಿ. ಇದು ಕನ್ನಡಿಯೊಳಗಿನ ಗಂಟು. ಜನರ ಜೇಬಲ್ಲಿ ದುಡ್ಡು ಬಂದರೆ ಖರ್ಚು ಮಾಡುತ್ತಾರೆ.‌ ಮಹಾರಾಷ್ಟ್ರದಲ್ಲಿ 150 ರೈಲು ಘೋಷಿಸಿದರು, ಐವತ್ತು ರೈಲು ಮಾತ್ರ ಓಡಿಸಿದರು. ಇಲ್ಲೂ ಸಹ ಜನ‌ದುಡ್ಡು ಕೊಟ್ಟು ಹೋಗಿದ್ದಾರೆ. ರೈಲುಗಳು ಸಹ ಸರಿಯಾಗಿ ಗುರಿ ಮುಟ್ಟಿಸಲಿಲ್ಲ.

    ಪ್ರಮಾಣವಚನಕ್ಕಿಲ್ಲ ಸರ್ಕಾರದ ಅನುಮತಿ: ರಾಜಕೀಯ ಹುನ್ನಾರ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts