More

    ಅಹಂ ಬಿಟ್ಟರೆ ಉತ್ತಮ ಆರೋಗ್ಯ – ಮಲ್ಲಯ್ಯ ಸ್ವಾಮೀಜಿ

    ಅಥಣಿ: ಉತ್ತಮ ಆರೋಗ್ಯ ಹೊಂದಲು ನಮ್ಮಲ್ಲಿರುವ ಅಹಂ ಬಿಟ್ಟು ನಿತ್ಯವೂ ಗುರುವಿನ ನಾಮಸ್ಮರಣೆ ಮಾಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಮಧುರಖಂಡಿಯ ಮಲ್ಲಯ್ಯ ಸ್ವಾಮೀಜಿ ಹೇಳಿದ್ದಾರೆ.

    ಪಟ್ಟಣದ ಮೋಟಗಿಮಠದ ಲಿಂ.ಗುರುಬಸವ ಸ್ವಾಮೀಜಿ 36ನೇ ಸ್ಮರಣೋತ್ಸವ ಅಂಗವಾಗಿ ಗುರುವಾರ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುವಿನ ಕರುಣಾ ಗುಣ ಪಡೆಯಲು ನಮ್ಮಲ್ಲಿ ಸತ್ಯ, ಶುದ್ಧ ಕಾಯಕ ಇದ್ದಾಗ ಮಾತ್ರ ಸಾಧ್ಯ. ಅದರಂತೆ ಜೀವನ ಮುಕ್ತಿಗೆ ಸತ್ಸಂಗ ಅವಶ್ಯವಾಗಿದೆ ಎಂದು ತಿಳಿಸಿದರು. ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಜ್ಞಾನಸಂಪತ್ತು ನಾಶವಾಗದ ಸಂಪತ್ತು. ಗುರುಬಸವ ಸ್ವಾಮೀಜಿ ಜ್ಞಾನ ದಾಸೋಹ ಮಾಡಿದ್ದಾರೆ. ಕಾಡುಗಲ್ಲನ್ನು ಮೂರ್ತಿಯನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

    ಸಾನ್ನಿಧ್ಯವಹಿಸಿದ್ದ ನದಿಇಂಗಳಗಾವಿಯ ಸಿದ್ದಲಿಂಗ ಸ್ವಾಮೀಜಿ, ಶೆಟ್ಟಮಠದ ಮರುಳಸಿದ್ದ ಸ್ವಾಮೀಜಿ, ಗುರುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಮುಕ್ತಾಯಿ ಮಹಿಳಾ ಬಳಗದಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಪ್ರಕಾಶ ಮಹಾಜನ, ಡಾ.ಮಹಾಂತೇಶ ಉಕ್ಕಲಿ, ಅಜ್ಜಪ್ಪ ಕಾವೇರಿ, ಪಂಕಜ ಸೋಮಯ್ಯ, ಶೇಖರ ಮಗದುಮ್ಮ, ಈರನಗೌಡ ಪಾಟೀಲ, ಸಂಜಯ ತೆಲಸಂಗ, ಎಸ್.ಕೆ.ಹೊಳೆಪ್ಪನವರ, ಮುತ್ತಣ್ಣ ಸಂತಿ, ಬಸವರಾಜ ಕೊಹಳ್ಳಿ ಸೇರಿದಂತೆ ಅಥಣಿಯ ಯುವ ವೇದಿಕೆ ಹಾಗೂ ಗುರುಬಸವ ವಿದ್ಯಾವಿಕಾಸ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts