More

    ಸ್ವಾಭಿಮಾನದ ಬದುಕು ಕಲ್ಪಿಸಿದ ಕಾಂಗ್ರೆಸ್

    ಮಳಖೇಡ: ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಲ್ಲಿನ ಐತಿಹಾಸಿಕ ರಾಷ್ಟ್ರಕೂಟರ ಕೋಟೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮಳಖೇಡಕ್ಕೆ ಮಾನ್ಯಖೇಟವೆಂದು ಮರುನಾಮಕರಣ ಮಾಡಲು ಪ್ರಾಮಾಣಿಕ ಪ್ರಯತ್ನಿಸುವೆ. ಇನ್ನೆರಡು ತಿಂಗಳಲ್ಲಿ ಮಳಖೇಡದ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿಲ್ಲ, ಇವುಗಳನ್ನು ಜಾರಿಗೊಳಿಸಿ ಎಲ್ಲ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಗೆ ೫ ಸಾವಿರ ಕೋಟಿ ರೂ. ನೀಡಲಾಗುತ್ತಿದೆ. ೫ ವರ್ಷಗಳಲ್ಲಿ ೫೦ ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕಲಬುರಗಿಯಲ್ಲಿ ೩೦೦ ಬೆಡ್‌ನ ತಾಯಿ ಮಗು ಆಸ್ಪತ್ರೆ, ೩೦ ಬೆಡ್‌ನ ಬರ್ನ್ ಆಸ್ಪತ್ರೆ, ಏಮರ್ಜೆನ್ಸಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

    ಸಾನಿಧ್ಯ ವಹಿಸಿದ್ದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ದರ್ಗಾದ ಹಜರತ್ ಸೈಯ್ಯದ್ ಶಾ ಮುಸ್ತಫಾ ಖಾದ್ರಿ, ಕೆಪಿಸಿಸಿ ಸದಸ್ಯ ಮಹಾಂತಪ್ಪ ಸಂಗಾವಿ ಮಾತನಾಡಿದರು.

    ಭಂಗಿಮಠದ ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಗ್ರಾಪಂ ಅಧ್ಯಕ್ಷ ಚನ್ನಯ್ಯ ಪುರಾಣಿಕ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ, ಪ್ರಮುಖರಾದ ರವಿ ನಂದಿಗಾಮ, ಬಸವರಾಜ ಮಾಲಿಪಾಟೀಲ್, ಚನ್ನಬಸಪ್ಪ ಹಾಗರಗಿ, ಸತೀಶ ಪೂಜಾರಿ, ಝಾಕೀರ್ ಹುಸೇನ್‌ಖಾನ್, ವಿಜಯಕುಮಾರ ಪವಾರ್, ಬಸವರಾಜ ರೇವಗೊಂಡ, ನಾಗರಾಜ ನಂದೂರ, ದಿನೇಶ ಪಾಟೀಲ್, ಅಲಿಆಗಾ ಜಾಗೀರದಾರ, ರಮೇಶ ನಂದೂರ, ಭೀಮರಾವ ಮಾಲಿಪಾಟೀಲ್, ವೀರಣ್ಣ ಸಜ್ಜನಶೆಟ್ಟಿ, ರುದ್ರು ಪಿಲ್ಲಿ, ಗುರಣಪ್ಪ ತಳಕಿನ, ಶ್ರೀನಿವಾಸ ಸಂಗಾವಿ, ಶರಣಯ್ಯ ಸ್ಥಾವರ, ಅಂಬರೀಷ ಗುಡಿ, ಫಯಾಜ್ ಇನಾಮದಾರ್, ಕುಪ್ಪಣ್ಣ ಎಮ್ಮಿ, ಮಲ್ಲಪ್ಪ ಆರಬೋಳ ಇತರರಿದ್ದರು.
    ಸಿದ್ದಯ್ಯ ಹಿರೇಮಠ ನಿರೂಪಣೆ ಮಾಡಿದರು. ರಾಜಶೇಖರ ಪುರಾಣಿಕ ಸ್ವಾಗತಿಸಿ, ವಂದಿಸಿದರು.

    ಬೃಹತ್ ಮೆರವಣಿಗೆಯೊಂದಿಗೆ ಸ್ವಾಗತ: ಮಳಖೇಡಕ್ಕೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಗ್ರಾಮದ ರಾಜ್ಯ ಹೆದ್ದಾರಿಯಿಂದ ರಾಷ್ಟ್ರಕೂಟರ ಕೋಟೆವರೆಗೂ ತೆರೆದ ವಾಹನದಲ್ಲಿ ಸಂಭ್ರಮದಿಂದ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಪುಷ್ಪವೃಷ್ಟಿ ಸುರಿಸಿದರು. ಮಾರ್ಗ ಮಧ್ಯೆದಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಅಭಿಮಾನ ಸಲ್ಲಿಸಿದರು.

    ನನಗೆ ರಾಜಕೀಯವಾಗಿ ನೆಲೆ ಕೊಟ್ಟಿದ್ದು ಮಳಖೇಡ ಗ್ರಾಮ. ಹಳ್ಳಿಯ ಅಭಿವೃದ್ಧಿಗೆ ಸದಾ ಶ್ರಮಿಸುವೆ. ಕ್ಷೇತ್ರದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಅ.೧೩ ರಂದು ಸೇಡಂನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಲಾಗಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು.
    | ಡಾ.ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

    ರಾಜ್ಯದಲ್ಲಿಯೇ ಮಳಖೇಡ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು, ಸಮಗ್ರ ಪ್ರಗತಿಗೆ ಶ್ರಮಿಸುತ್ತಿರುವೆ. ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಹಿರಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು. ಮಾದರಿ ಗ್ರಾಪಂ ನಿರ್ಮಾಣಕ್ಕೆ ಹಗಲಿರುಳು ದುಡಿಯುವೆ.
    | ಚನ್ನಯ್ಯ ಪುರಾಣಿಕ, ಅಧ್ಯಕ್ಷ, ಗ್ರಾಪಂ ಮಳಖೇಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts