More

    ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅಜೇಯ ಓಟ, ಸತತ 5 ಸೋಲಿನೊಂದಿಗೆ ಹೊರಬಿದ್ದ ಸ್ಕಾಟ್ಲೆಂಡ್

    ಶಾರ್ಜಾ: ನಾಯಕ ಬಾಬರ್ ಅಜಮ್ (66 ರನ್, 47 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಅನುಭವಿ ಬ್ಯಾಟ್ಸ್‌ಮನ್ ಶೋಯಿಬ್ ಮಲಿಕ್ (54* ರನ್, 18 ಎಸೆತ, 1 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ಬಲದಿಂದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 5ನೇ ಜಯದೊಂದಿಗೆ ಅಜೇಯವಾಗಿ ಸೆಮಿೈನಲ್‌ಗೇರಿದೆ. ಪಾಕ್ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 72 ರನ್‌ಗಳಿಂದ ಜಯ ಸಾಧಿಸಿತು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಪಾಕ್ 4 ವಿಕೆಟ್‌ಗೆ 189 ರನ್ ಪೇರಿಸಿತು. ಮೊಹಮದ್ ರಿಜ್ವಾನ್ (15) ಮತ್ತು ಖರ್ ಜಮಾನ್ (8) ವೈಲ್ಯದ ನಡುವೆ ಬಾಬರ್ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ಆಸರೆಯಾದರು. ಸ್ಲಾಗ್ ಓವರ್‌ಗಳಲ್ಲಿ ಮಲಿಕ್ ಸಿಡಿಸಿದರು. ಇದರಿಂದ ಪಾಕ್ ಕೊನೇ 5 ಓವರ್‌ಗಳಲ್ಲಿ 77 ರನ್ ದೋಚಿತು. ಕ್ರಿಸ್ ಗ್ರೀವ್ಸ್ ಎಸೆದ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಮಲಿಕ್ 3 ಸಿಕ್ಸರ್ ಸಹಿತ 26 ರನ್ ಸಿಡಿಸಿದರು. ಪ್ರತಿಯಾಗಿ ಸ್ಕಾಟ್ಲೆಂಡ್ ತಂಡ 6 ವಿಕೆಟ್‌ಗೆ 117 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಕಾಟ್ಲೆಂಡ್ ತಂಡ ಸೂಪರ್-12ರಲ್ಲಿ ಗೆಲುವು ಕಾಣದೆ ಹೊರಬಿದ್ದಿತು.

    ಪಾಕಿಸ್ತಾನ: 4 ವಿಕೆಟ್‌ಗೆ 189 (ಬಾಬರ್ 66, ಹಫೀಜ್ 31, ಮಲಿಕ್ 54*, ಗ್ರೀವ್ಸ್ 43ಕ್ಕೆ 2, ಶರೀಫ್​ 41ಕ್ಕೆ 1, ತಾಹಿರ್ 24ಕ್ಕೆ 1). ಸ್ಕಾಟ್ಲೆಂಡ್: 6 ವಿಕೆಟ್‌ಗೆ 117 (ಮುನ್ಸೆ 17, ಕ್ರಾಸ್ 5, ಬೆರಿಂಗ್ಟನ್ 54*, ಲೀಸ್ಕ್ 14, ಶಹೀನ್ ಷಾ ಅಫ್ರಿದಿ 24ಕ್ಕೆ 1, ಶಾದಾಬ್ ಖಾನ್ 14ಕ್ಕೆ 2, ಹಸನ್ ಅಲಿ 33ಕ್ಕೆ 1, ಹ್ಯಾರಿಸ್ ರವ್ೂ 27ಕ್ಕೆ 1).

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts