More

    ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಸಾಕ್ಷಿ ಮಲಿಕ್

    ನವದೆಹಲಿ: ರಿಯೋ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಏಷ್ಯಾ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಚಾಂಪಿಯನ್​ಷಿಪ್​ನ ನಾಲ್ಕನೇ ದಿನವಾದ ಶುಕ್ರವಾರ ಭಾರತ ಮಹಿಳಾ ತಂಡ ಒಂದು ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿದಂತೆ ಒಟ್ಟಾರೆ 8 ಪದಕ ಗೆದ್ದುಕೊಂಡಿತು. ಮಹಿಳಾ ವಿಭಾಗದ ಮೊದಲ ದಿನವಾದ ಗುರುವಾರ ಭಾರತದ ದಿವ್ಯಾ, ಪಿಂಕಿ ಹಾಗೂ ಸರಿತಾ ಮೋರ್ ಕಂಚು ಜಯಿಸಿದ್ದರೆ, ನಿರ್ಮಲಾ ದೇವಿ 2ನೇ ಶ್ರೇಷ್ಠ ನಿರ್ವಹಣೆ ತೋರಿದ್ದರು.

    ಕೆಡಿ ಜಾಧವ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ 65 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ 1-2 ರಿಂದ ಜಪಾನ್​ನ ನವೊಮಿ ರೂಕೆ ಎದುರು ಸೋಲನುಭವಿಸಿದರು. 2017ರಲ್ಲೂ ಜಪಾನ್ ಆಟಗಾರ್ತಿ ಎದುರು ಸಾಕ್ಷಿ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು. ಮೊದಲ ಸುತ್ತಿನಲ್ಲಿ ಜಪಾನ್ ಆಟಗಾರ್ತಿ ಎದುರು 1-2 ರಿಂದ ಹಿನ್ನಡೆ ಅನುಭವಿಸಿದ ಸಾಕ್ಷಿ, ಎರಡನೇ ಸುತ್ತಿನಲ್ಲಿ 0-2 ರಿಂದ ನಿರಾಸೆ ಕಂಡರು. ‘ಆಕೆ ಬಲಿಷ್ಠ ಆಟಗಾರ್ತಿ ಆಗಿರಲಿಲ್ಲ. ಆದರೂ ಅಂಕಗಳಿಕೆಯಲ್ಲಿ ಹಿಂದೆ ಉಳಿದೆ’ ಎಂದು ಸಾಕ್ಷಿ ಪ್ರತಿಕ್ರಿಯಿಸಿದ್ದಾರೆ.

    ವಿನೇಶ್​ಗೆ ಸುಲಭ ಜಯ: ಭಾರತದ ಸ್ಟಾರ್ ಮಹಿಳಾ ಪೈಲ್ವಾನ್ ವಿನೇಶ್ ಪೋಗಟ್ 53 ಕೆಜಿ ವಿಭಾಗದಲ್ಲಿ 10-0 ಯಿಂದ ವಿಯೆಟ್ನಾಂನ ಥಿ ಲೈ ಕೀವು ಎದುರು ಜಯ ದಾಖಲಿಸಿದರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಕದನದಲ್ಲಿ ವಿನೇಶ್ ಜಪಾನ್​ನ ಮಾಯೂ ಮೌಕಿಡಾ ಎದುರು ಸೋಲನುಭವಿಸಿದ್ದರು. ಈ ಮೂಲಕ ವಿನೇಶ್ 2013 ರಿಂದ ಎಲ್ಲ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಪದಕ ಜಯಿಸಿದಂತಾಗಿದೆ. 57 ಕೆಜಿ ವಿಭಾಗದಲ್ಲಿ ಅಂಶು ಉಜ್ಬೇಕಿಸ್ತಾನದ ಸೆವಾರಾ ಈಶ್ಮುರಾಟೊವಾ ಎದುರು ಜಯ ದಾಖಲಿಸಿದರು. 72 ಕೆಜಿ ವಿಭಾಗದಲ್ಲಿ ಗುರುಶರಣ್ ಪ್ರೀತ್ ಕೌರ್ ಮಂಗೋಲಿಯಾದ ತೆಸೆವೆಗ್ಮೆಡ್ ಎಂಖಾಬಾಯರ್ ಎದುರು ಅವರನ್ನು ಸೋಲಿಸಿ ಕಂಚು ಗೆದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts