More

    ಮಲೆನಾಡು ಇದೀಗ ಕೊಂಚ ಕೂಲ್

    ಶಿವಮೊಗ್ಗ: ಜಿಲ್ಲಾದ್ಯಂತ ಸತತ ಮೂರನೇ ದಿನವೂ ಮಳೆ ಮುಂದುವರಿದಿದ್ದು, ಬೇಸಿಗೆ ತಾಪದಿಂದ ಬಳಲಿದ್ದ ಮಲೆನಾಡಿಗರಿಗೆ ಮಳೆ ತಂಪೇರದಿದೆ. ಗುಡುಗು, ಸಿಡಿಲು ಆರ್ಭಟದೊಂದಿಗೆ ಹಲವೆಡೆ ಭಾರೀ ಮಳೆಯಾದೆ. ಶಿವಮೊಗ್ಗ ತಾಲೂಕಿನ ಹನುಮಂತಾಪುರದಲ್ಲಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ.

    ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಇಡೀ ಜಿಲ್ಲೆಯನ್ನು ಬರಪೀಡಿತವೆಂದು ಸರ್ಕಾರ ಘೋಷಣೆ ಮಾಡಿತ್ತು. ಬರದ ನಡುವೆ ಬಿಸಿಲಿನ ತಾಪ ಜಿಲ್ಲೆಯಲ್ಲಿ 40 ಡಿಗ್ರಿವರೆಗೂ ತಲುಪಿತ್ತು. ಇದೀಗ ಎರಡ್ಮೂರು ದಿನಗಳಿಂದ ಜಿಲ್ಲೆಯ ಬಹಳಷ್ಟು ಕಡೆ ಮಳೆಯಾಗುತ್ತಿರುವುದರಿಂದ ಜನರು ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.
    ಎರಡು ದಿನಗಳ ಹಿಂದೆ ಶಿವಮೊಗ್ಗ ನಗರದ ಕೆಲವೆಡೆ ಮಾತ್ರ ಮಳೆಯಾಗಿತ್ತು. ಶನಿವಾರ ನಗರದಾದ್ಯಂತ ಉತ್ತಮ ಮಳೆಯಾಗಿದೆ. ಸಂಜೆ ಭಾರೀ ಗುಡುಗು ಸಿಡಿಲಿನೊಂದಿಗೆ ಶುರುವಾದ ಮಳೆ 20 ನಿಮಿಷ ಸುರಿಯಿತು. ಶಿವಮೊಗ್ಗ ನಗರ ಮಾತ್ರವಲ್ಲದೆ, ಅಬ್ಬಲಗೆರೆ, ಹುಣಸೋಡು, ಆಯನೂರು, ಸಾಗರ, ಆನಂದಪುರ, ತೀರ್ಥಹಳ್ಳಿ, ಸೊರಬ, ಆನವಟ್ಟಿ, ಹೊಸನಗರ, ರಿಪ್ಪನ್‌ಪೇಟೆಯಲ್ಲೂ ಉತ್ತಮ ಮಳೆಯಾಗಿದೆ. ಹಲವೆಡೆ ರಸ್ತೆಗಳ ಮೇಲೆ ಮಳೆ ನೀರು ಉಕ್ಕಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    ಜಾನುವಾರುಗಳು ಬಲಿ
    ಶುಕ್ರವಾರವಷ್ಟೇ ಶಿವಮೊಗ್ಗ ತಾಲೂಕಿನ ಆಯನೂರು ಕೋಟೆಯಲ್ಲಿ ಸಿಡಿಲು ಬಡಿದು 18 ಕುರಿಗಳು ಅಸುನೀಗಿದ್ದವು. ಶನಿವಾರ ಕೂಡ ಸಿಡಿಲು ಬಡಿದು ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಾಪುರದಲ್ಲಿ ನಾಗೇಶ್ ಎಂಬುವರ ಹಸುಗಳು ಮೃತಪಟ್ಟಿವೆ. ಮನೆ ಪಕ್ಕದ ಹುಣಸೆ ಮರದ ಕೆಳಗೆ ಜಾನುವಾರುಗಳನ್ನು ಕಟ್ಟಿದ್ದರು. ಸಂಜೆ ಸಿಡಿಲು ಬಡಿದು ದನಗಳು ಸಾವನ್ನಪ್ಪಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts