More

    ಮಲೇಬೆನ್ನೂರಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ದಾಳಿ: ಕೋಟ್ಪಾ ಕಾಯ್ದೆಯಡಿ 33 ಪ್ರಕರಣ ದಾಖಲು

    ಮಲೇಬೆನ್ನೂರು: ಪಟ್ಟಣದ ವಿವಿಧ ಮಳಿಗೆಗಳ ಮೇಲೆ ಶುಕ್ರವಾರ ದಾಳಿ ಮಾಡಿದ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾದಳ 33 ಪ್ರಕರಣ ದಾಖಲಿಸಿ, 3.250 ರೂ. ದಂಡ ವಸೂಲಿ ಮಾಡಿದೆ.

    ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ – 2003 ಸೆಕ್ಷನ್ 4 ರಡಿ 29 ಹಾಗೂ ಸೆಕ್ಷನ್ 6ಎ ಅಡಿ 03 ಮತ್ತು ಸೆಕ್ಷನ್ 6ಬಿ 01ಪ್ರಕರಣ ದಾಖಲಿಸಲಾಗಿದೆ.

    ಮಲೇಬೆನ್ನೂರು ಸುತ್ತಮುತ್ತಲ ಹೋಟೆಲ್, ಬಾರ್-ರೆಸ್ಟೋರೆಂಟ್, ಪಾನ್‌ಶಾಪ್ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರುವವರು ಹಾಗೂ ತಂಬಾಕು ಉತ್ಪನ್ನ ಸೇವಿಸುವವರಿಗೆ ಸ್ಥಳದಲ್ಲೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಲಾಯಿತು.

    18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ನಿಷೇಧ, ಮಕ್ಕಳಿಂದ ತಂಬಾಕು ಉತ್ಪನ್ನ ಮಾರಾಟಕ್ಕೆ ತಡೆ, ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧ, ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧ, ತಂಬಾಕು ಉತ್ಪನ್ನ ಪ್ಯಾಕ್‌ಗಳ ಮೇಲೆ ಎಚ್ಚರಿಕೆ ಚಿಹ್ನೆ ಇಲ್ಲದೇ ಮಾರಾಟ ಮಾಡುವುದನ್ನು ನಿಷೇಧಿಸಿದ ಬಗ್ಗೆ ತಂಡದ ಸದಸ್ಯರು ಮಾಹಿತಿ ನೀಡಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ಎಚ್.ಚಂದ್ರಮೋಹನ್, ಹರಿಹರದ ಆಹಾರ ಸುರಕ್ಷತಾ ಅಧಿಕಾರಿ ಎಂ.ಆರ್.ಕುಸುಮ್ಮನ್ನವರ್, ಮಲೇಬೆನ್ನೂರು ಪುರಸಭೆ ಆರೋಗ್ಯ ನಿರೀಕ್ಷಕ ಗುರುಪ್ರಸಾದ್, ಕಿರಿಯ ಆರೋಗ್ಯ ಸಹಾಯಕ ಎ.ಎಸ್.ಕಾಜಲ್‌ಕಿಂಗ್, ಪೊಲೀಸ್ ಇಲಾಖೆಯ ಎಚ್.ಎಸ್.ರಂಗಪ್ಪ, ಸಹಾಯಕರಾದ ರುದ್ರೇಶ್, ಪ್ರವೀಣ್ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts