More

    ಇದು ಭಾರಿ ಭಯಾನಕ ಕರೊನಾ; ಈಗಿನದ್ದಕ್ಕಿಂತಲೂ ಹತ್ತು ಮಾರಕ…!

    ನವದೆಹಲಿ: ಕರೊನಾ ಸಂಕಷ್ಟಕ್ಕೆ ಆದಷ್ಟು ಬೇಗ ಪರಿಹಾರ ಸಿಗಲಿದೆ ಎಂದು ತಜ್ಞರು ಭರವಸೆ ನೀಡುತ್ತಿರುವ ಬೆನ್ನಲ್ಲೇ ಈ ವೈರಸ್​ ಇನ್ನಷ್ಟು ವಿರಾಟ್​ ರೂಪಗಳನ್ನು ಪ್ರದರ್ಶಿಸುತ್ತಿದೆ.

    ಭಾರತದಲ್ಲಿ ಕಂಡು ಬರುತ್ತಿರುವ ವೈರಸ್ ಉಳಿದಡೆಯ ವೈರಸ್​ಗಳಿಗೆ ಹೋಲಿಸಿದಲ್ಲಿ ಅಷ್ಟೊಂದು ಮಾರಕವಲ್ಲ, ಎಂದೇ ಹೇಳಲಾಗಿತ್ತು. ಆದರೆ, ಭಾರತದಲ್ಲಿ ಪ್ರತಿದಿನ ಕಂಡುಬರುತ್ತಿರುವ ರೋಗಿಗಳ ಸಂಖ್ಯೆ ಅಮೆರಿಕ ಬ್ರೆಜಿಲ್​ಗಿಂತಲೂ ಹೆಚ್ಚಾಗಿದೆ. ಕರೊನಾ ಈ ಮಟ್ಟಿಗೆ ಕ್ಷಿಪ್ರದಾಳಿ ನಡೆಸುತ್ತಿರುವುದಾದರೂ ಏಕೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

    ಇದನ್ನೂ ಓದಿ; ಸೌದಿ ಅರೇಬಿಯಾದಲ್ಲಿ ಉತ್ಪಾದನೆಯಾಗಲಿದೆ ರಷ್ಯನ್​ ಕರೊನಾ ಲಸಿಕೆ; ಫಿಲಿಫೈನ್ಸ್​, ಬ್ರೆಜಿಲ್​ನಲ್ಲೂ ಕ್ಲಿನಿಕಲ್​ ಟ್ರಯಲ್​ 

    ಈ ನಡುವೆ ಮಲೇಷ್ಯಾದಿಂದ ಬಂದಿರುವ ವರದಿ ಇನ್ನಷ್ಟು ಭೀತಿ ಮೂಡಿಸಿದೆ. ಕರೊನಾ ವೈರಸ್​ನ ಹೊಸ ಅವತರಣಿಕೆ ಅಥವಾ ರೂಪಾಂತರವೊಂದು ಕಂಡುಬಂದಿದ್ದು, ಅದನ್ನು ‘D614G’ ಎಂದು ಕರೆಯಲಾಗಿದೆ. ಇದು ಹಾಲಿ ಕಂಡುಬರುತ್ತಿರುವ ವೈರಸ್​ ರೂಪಾಂತರಕ್ಕಿಂತ ಹತ್ತು ಪಟ್ಟು ಹೆಚ್ಚು ಮಾರಕ ಎಂದು ಮಲೇಷ್ಯಾದ ಆರೋಗ್ಯ ಮಹಾನಿರ್ದೇಶಕ ನೂರ್​ ಹಿಷಾಮ್​ ಅಬ್ದುಲ್ಲಾ ಹೇಳಿದ್ದಾರೆ.

    ಅಲ್ಲಿನ ರೆಸ್ಟೋರಂಟ್​ ಮಾಲೀಕನೊಬ್ಬನಿಂದ ಹರಡಿದ ಸೋಂಕಿನಲ್ಲಿ ಈ ವೈರಸ್​ ಕಂಡುಬಂದಿದೆ. ಆತನ ಹಾಗೂ ಆತನ ಸಂಪರ್ಕದಲ್ಲಿದ್ದವರಲ್ಲೂ ಈ ವೈರಸ್​ ಪತ್ತೆಯಾಗಿದೆ. ಆತಂಕದ ವಿಷಯವೆಂದರೆ, ರೆಸ್ಟೋರಂಟ್​ ಮಾಲೀಕ ಭಾರತ ಭೇಟಿ ನೀಡಿ ಮಲೇಷ್ಯಾಗೆ ತೆರಳಿದಾಗ ಸೋಂಕು ಇರುವುದು ಗೊತ್ತಾಗಿದೆ. ಹೀಗಾಗಿ ಈ ವೈರಸ್​ ಕುರುಹು ಭಾರತದಿಂದಲೇ ಹಬ್ಬಿರಬಹುದೇ ಎಂಬ ಕಳವಳವೂ ವ್ಯಕ್ತವಾಗಿದೆ.

    ಇದನ್ನೂ ಓದಿ; ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ 

    ಇದಷ್ಟೇ ಅಲ್ಲದೇ, ಫಿಲಿಫೈನ್ಸ್​ನಿಂದ ಬಂದ ಮೂವರು ಇಂಥದ್ದೇ ವೈರಸ್​ನ ಕುರುಹುಗಳು ಕಂಡುಬಂದಿವೆ ಎಂದು ಹೇಳಲಾಗಿದೆ. ಇದು ಆರಂಭಿಕ ಪರೀಕ್ಷೆಯಲ್ಲಿ ಗೊತ್ತಾದ ಫಲಿತಾಂಶವಾಗಿದೆ. ಇನ್ನೂ ಬಹಳಷ್ಟು ಪ್ರಕರಣಗಳಲ್ಲಿ ಪರೀಕ್ಷೆಗಳು ನಡೆಯಬೇಕಿವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

    ಆಧಾರ್​ ಮಾದರಿಯಲ್ಲೇ ಆರೋಗ್ಯ ಗುರುತಿನ ಸಂಖ್ಯೆ; ರಾಷ್ಟ್ರೀಯ ಡಿಜಿಟಲ್​ ಹೆಲ್ತ್​ ಮಿಷನ್​ಗೆ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts