More

    ನಿಲ್ಲಿಸಿದ್ದ ಕಾರಿನೊಳಗೆ ಖ್ಯಾತ ನಟನ ಮೃತದೇಹ ಪತ್ತೆ

    ಕೇರಳ: ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ.

    ವಿನೋದ್ ಥಾಮಸ್ (45) ಮೃತ , ಹೋಟೆಲ್‌ನ ಆಡಳಿತ ಮಂಡಳಿಯು ತನ್ನ ಆವರಣದಲ್ಲಿ ಬಹಳ ದಿನಗಳಿಂದ ನಿಲ್ಲಿಸಿದ ಕಾರಿನೊಳಗೆ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯೊಬ್ಬರು ಬಹಳ ಕಾಲದಿಂದ ಕಾರೊಂದು ಹೊಟೆಲ್ ಬಳಿ ನಿಂತಿದ್ದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

    ನಡೆದಿದ್ದೇನು?: ಮಲಯಾಳಂನ ಜನಪ್ರಿಯ ನಟ ವಿನೋದ್ ಥಾಮಸ್ (45) ಕೇರಾದ ಕೊಟ್ಟಾಯಂ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸಿದ್ದ ವಾಹನದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನು ಗಮನಿಸಿದ ಹೋಟೆಲ್ ಆಡಳಿತ ಮಂಡಳಿ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ವಿನೋದ್ ಥಾಮಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರದು ಕೊಲೆಯೋ ಆತ್ಮಹತ್ಯೆಯೋ ಎಂಬ ಮಾಹಿತಿ ಪೊಲೀಸ್ ತನಿಖೆ ಬಳಿಕ ಹೊರಬರಬೇಕಿದೆ.

    ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಅಲ್ಲಿನ ಪ್ರೇಕ್ಷಕರ ಮನೆಮನ ತಲುಪಿದ್ದ ನಟ ಹೀಗೆ ಕಾರಿನೊಳಗೆ ಶವವಾಗಿ ಮಲಗಿದ್ದಾರೆ ಎಂದರೆ ಪ್ರೇಕ್ಷಕರಿಗೆ ಶಾಕ್ ಆಗುವುದು ಸಹಜ. ಇದ್ದಕ್ಕಿಂದಂತೆ ಬಂದ ಇಂಥ ಶಾಕ್ ಸುದ್ದಿ ಕೇಳಿ ಮಲಯಾಳಂ ಚಿತ್ರಪ್ರೇಮಿಗಳು ಅವರ ಶವವನ್ನು ನೋಡಲು ತಂಡೋಪತಂಡವಾಗಿ ಬರುತ್ತಿದ್ದಾರೆ ಎನ್ನಲಾಗಿದೆ.

    ವಿನೋದ್ ಥಾಮಸ್ ಅವರು ‘ಅಯ್ಯಪ್ಪನುಂ ಕೊಶಿಯುಂ’ ಮತ್ತು ‘ನಾತೊಲಿ ಒರು ಚೆರಿಯ ಮೀನಲ್ಲಾ’ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದಾರೆ. ಒರು ಮುರೈ ವಂತ್ ಪಥಯಾ, ಹ್ಯಾಪಿ ವೆಡ್ಡಿಂಗ್ ಮತ್ತು ಜೂನ್ ಚಿತ್ರಗಳಲ್ಲಿನ ನಟನೆಗಾಗಿ ಅವರು ಹೆಚ್ಚು ಖ್ಯಾತಿಯನ್ನು ಗಳಿಸಿದರು. ಸದ್ಯ ರೇವತಿ ಎಸ್ ವರ್ಮಾ ನಿರ್ದೇಶನದ ‘ಈ ವಲಯಂ’ ಚಿತ್ರದಲ್ಲಿ ನಟಿಸುತ್ತಿದ್ದರು. ಇದಕ್ಕೂ ಮುನ್ನ ವಿನೋದ್ ಥಾಮಸ್ ಅನುಮಾನಾಸ್ಪದ ಸಾವು ಮಲಯಾಳಂ ಚಿತ್ರರಂಗವನ್ನು ಕಂಗಾಲಾಗಿಸಿದೆ.

    ವಿಶ್ವಕಪ್ ಮಹಾಸಮರ; ಬೆಂಗಳೂರಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts