More

    ಡಾರ್ಲಿಂಗ್ ಪ್ರಭಾಸ್​ಗೆ ಚಾಕಲೇಟ್ ಬಾಯ್ ನಂತಹ ವಿಲನ್!

    ನಟ ಪ್ರಭಾಸ್ ಅವರ ಮುಂದಿನ ಸಿನಿಮಾ ‘ರಾಧೆ ಶ್ಯಾಮ್’ನಲ್ಲಿ ಅವರ ಆ್ಯಕ್ಷನ್ ಇಮೇಜ್ ಬದಿಗಿಟ್ಟು, ಡಾರ್ಲಿಂಗ್ ತಮ್ಮ ಲವರ್ ಬಾಯ್ ಇಮೇಜ್​ಗೆ ಮರಳಲಿದ್ದಾರೆ. ಹೌದು, ಈ ಸಿನಿಮಾ ಮಾರ್ಚ್ 11 ರಂದು ತೆರೆಗೆ ಬರುತ್ತಿದೆ. ಇನ್ನು, ಹಲವು ಸಿನಿಮಾಗಳ ಕೆಲಸದಲ್ಲಿ ಬ್ಯೂಸಿಯಿರುವ ನಟ ಪ್ರಭಾಸ್ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಸಲಾರ್’ ಸಿನಿಮಾದಲ್ಲಿ ಕೂಡಾ ನಾಯಕ ನಟನಾಗಿ ಮಿಂಚಲಿದ್ದಾರೆ. ಸದ್ಯ, ಈ ಚಿತ್ರದ ಒಂದು ಹೊಸ ಅಪ್​ಡೇಟ್ ಸಿಕ್ಕಿದೆ. ಅಂದಹಾಗೆ, ‘ಸಲಾರ್’ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ.
    ಇನ್ನು, ಸ್ವತಃ ನಟ ಪ್ರಭಾಸ್ ಅವರೇ ಈ ವಿಷಯವನ್ನು ತಿಳಿಸಿದ್ದಾರೆ. ಹೌದು, ‘ಸಲಾರ್​’ ಸಿನಿಮಾ ವಿಲನ್ ಆಯ್ಕೆ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಹೆಚ್ಚು ಗಮನ ವಹಿಸಿದ್ದಾರೆ. ಜತೆಗೆ, ಸಾಕಷ್ಟು ಲೆಕ್ಕಾಚಾರ ಹಾಕಿ ಪೃಥ್ವಿರಾಜ್​ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಪೃಥ್ವಿರಾಜ್ ಅವರು ‘ಸಲಾರ್’ ಸಿನಿಮಾದಲ್ಲಿ ಮುಖ್ಯವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ”, ಎಂದು ಸಂದರ್ಶನವೊಂದರಲ್ಲಿ ಡಾರ್ಲಿಂಗ್ ಪ್ರಭಾಸ್ ಅವರು ಹೇಳಿದ್ದಾರೆ. ಮತ್ತೊಂದೆಡೆ, ನಿರ್ದೇಶಕ ಪ್ರಶಾಂತ್ ನೀಲ್ ಈ ಬಗ್ಗೆ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಸಂಭಾವನೆ ಇಳಿಸಿಕೊಂಡ ಪೂಜಾ ಹೆಗ್ಡೆಗೆ ಪವನ್ ಕಲ್ಯಾಣ್ ಸಿನಿಮಾ ಜತೆಗೆ 2 ಸಿನಿಮಾ ಆಫರ್?

    ನಾಗಚೈತನ್ಯ ಕುಟುಂಬಕ್ಕೆ ಹೊಸ ಶಾಕ್ ಕೊಟ್ಟ ಸಮಂತಾ! ಅಭಿಮಾನಿಗಳು ಬೇಜಾರು…

    ‘ಕಿಂಗ್ ಈಸ್ ಬ್ಯಾಕ್’ ಎಂದ ನೆಟ್ಟಿಗರು! ಉದ್ದ ಕೂದಲು, ಸೂಪರ್ ಹಾಟ್ ಶಾರುಖ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts