More

    NIGHT CURFEW Movie Review ; ಕರೊನಾ ಕಾಲದ ಕರಾಳ ಕಥನ

    | ಹರ್ಷವರ್ಧನ್​​ ಬ್ಯಾಡನೂರು

    ಚಿತ್ರ: ನೈಟ್​ ಕರ್ಫ್ಯೂ
    ನಿರ್ದೇಶನ: ರವೀಂದ್ರ ವೆಂಶಿ
    ನಿರ್ಮಾಣ: ಚಂದ್ರಶೇಖರ್​
    ತಾರಾಗಣ: ಮಾಲಾಶ್ರೀ, ರಂಜಿನಿ ರಾವನ್​, ಪ್ರಮೋದ್​ ಶೆಟ್ಟಿ, ಸಾಧು ಕೋಕಿಲ, ಪಾವಗಡ ಮಂಜು, ರಂಗಾಯಣ ರಘು, ವರ್ಧನ್​ ತೀರ್ಥಹಳ್ಳಿ, ಅಶ್ವಿನ್​ ಹಾಸನ್​ ಮುಂತಾದವರು

    ಕರೊನಾ ಲಾಕ್​ಡೌನ್​ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಹಲವು ಸಿನಿಮಾಗಳು, ವೆಬ್​ಸರಣಿಗಳು ಬಂದಿವೆ. ಜನ ಎದುರಿಸಿದ ಸಮಸ್ಯೆ, ಗುಳೆ ಹೊರಟ ಜನರ ನೋವು, ಚಿಕಿತ್ಸೆ ಸಿಗದೇ, ಆಸ್ಪತ್ರೆಯಲ್ಲಿ ಬೆಡ್​ ಇಲ್ಲದೇ, ಆಕ್ಸಿಜನ್​ ಕೊರತೆಯಿಂದ ಉಂಟಾದ ಸಂಕಷ್ಟಗಳನ್ನು ಅನಾವರಣ ಮಾಡಲಾಗಿದೆ. ಆದರೆ, ನಿರ್ದೇಶಕ ರವೀಂದ್ರ ವೆಂಶಿ ಕರೊನಾ ಸಮಯದಲ್ಲೇ ನಡೆದ ವಿಲಕ್ಷಣ ಕೆಮ್​ಗಳನ್ನು ಆಧಾರವಾಗಿಟ್ಟುಕೊಂಡು “ನೈಟ್​ ಕರ್ಫ್ಯೂ’ ಸಿನಿಮಾ ಮಾಡಿದ್ದಾರೆ. ಹಾಗಾದರೆ ಹೇಗಿದೆ ಈ ಚಿತ್ರ?

    NIGHT CURFEW Movie Review ; ಕರೊನಾ ಕಾಲದ ಕರಾಳ ಕಥನ

    ಅದು ನಿಮ್ಮ ಆರೋಗ್ಯಾಲಯ ಆಸ್ಪತ್ರೆ. ಅದರ ಹಿರಿಯ ವೈದ್ಯೆ ಡಾ. ದುರ್ಗ (ಮಾಲಾಶ್ರೀ), ಡಾ. ವೇದಾ (ರಂಜಿನಿ) ಮತ್ತು ಸಿಬ್ಬಂದಿ ಕರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿರುತ್ತಾರೆ. ಅದೇ ಸಮಯದಲ್ಲಿ ಅಲ್ಲಿಗೆ ಒಬ್ಬ ಯುವತಿಯನ್ನು ಆ್ಯಂಬುಲೆನ್ಸ್​ನಲ್ಲಿ ಕರೆತರುವ ವ್ಯಕ್ತಿಗಳಿಬ್ಬರು, “ಆಕೆಗೆ ಕರೊನಾ ಬಂದು, ಆರೋಗ್ಯ ಸಮಸ್ಯೆ ಉಂಟಾಗಿದೆ. ಬೆಳಗ್ಗೆಯಿಂದ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗಳನ್ನು ಸುತ್ತುತ್ತಿದ್ದೇವೆ. ಎಲ್ಲಿಯೂ ಅಡ್ಮಿಟ್​ ಮಾಡಿಕೊಳ್ಳುತ್ತಿಲ್ಲ’ ಎಂದು ಬಿಕ್ಕುತ್ತಾ ಕೈಮುಗಿಯುತ್ತಾರೆ. ಬಳಿಕ ಡಾ. ವೇದಾ ಆ ಯುವತಿಯನ್ನು ಅಡ್ಮಿಟ್​ ಮಾಡಿಕೊಳ್ಳುತ್ತಾರೆ. ಆದರೆ, ಚಿಕಿತ್ಸೆ ಕೊಡುವ ಮುನ್ನವೇ ಆ ಯುವತಿ ಸಾವಿಗೀಡಾಗಿರುತ್ತಾಳೆ. ಮತ್ತೊಂದೆಡೆ ಗೆಳೆಯರಾದ ಸಾಧು ಮತ್ತು ಮುತ್ತ (ಪಾವಗಡ ಮಂಜು) ಬಾರ್​ಗೆ ಹೋಗಿ ಮದ್ಯದ ಬಾಟಲ್​ಗಳನ್ನು ಕದಿಯಲು ಪ್ಲಾ$್ಯನ್​ ಮಾಡುತ್ತಾರೆ. ಬೀಗ ಮುರಿದು ಬಾರ್​ ಒಳಗೆ ಹೋದರೆ, ಅಲ್ಲೊಬ್ಬ ವ್ಯಕ್ತಿ ಬಿದ್ದಿರುತ್ತಾನೆ. ಹೀಗೆ ಎರಡು ಟ್ರಾ$್ಯಕ್​ಗಳಲ್ಲಿ ಸಾಗುವ ಕಥೆ ಒಂದೆಡೆ ಸೇರುತ್ತದೆ. ಹಾಗಾದರೆ ಆ ಯುವತಿ ಯಾರು? ಆಕೆ ಸಾವಿಗೆ ಕರೊನಾ ಕಾರಣವೇ? ಈ ಎಲ್ಲ ಪ್ರಶ್ನೆಗಳಿಗೆ “ನೈಟ್​ ಕ್ಯೂರ್’ನಲ್ಲಿ ಉತ್ತರವಿದೆ.
    ಆ್ಯಕ್ಷನ್​ ಕ್ವೀನ್​ ಮಾಲಾಶ್ರೀ ಎಂದಿನಂತೆ ವೈದ್ಯೆಯ ಪಾತ್ರವಾಗಿದ್ದರೂ “ದುರ್ಗಿ’ಯ ಅವತಾರ ತಾಳಿದ್ದಾರೆ. ಉಳಿದಂತೆ ಪ್ರಮೋದ್​ ಶೆಟ್ಟಿ, ರಂಜಿನಿ, ವರ್ಧನ್​, ಅಶ್ವಿನ್​ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಾಧು ಕೋಕಿಲ, ಪಾವಗಡ ಮಂಜು, ರಂಗಾಯಣ ರು ಅಲ್ಲಲ್ಲಿ ನಗಿಸುತ್ತಾರೆ. ಒಂದೇ ರಾತ್ರಿ ನಡೆಯುವ ಕಥೆಯಾದರೂ ಅಲ್ಲಲ್ಲಿ ಲಾಜಿಕ್​ ಮಿಸ್​ ಆಗಿದೆ. ಚಿತ್ರಕಥೆ ಮತ್ತಷ್ಟು ಗಟ್ಟಿಯಾಗಿದ್ದರೆ ಪ್ರೇಕ್ಷಕರಿಗೆ ಒಂದೊಳ್ಳೆ ಥ್ರಿಲ್​ ಸಿಗುತ್ತಿತ್ತು. ಆದರೆ, ನೈಜ ಘಟನೆಯಾಧಾರಿತ ಕೆಮ್​ ಥ್ರಿಲ್ಲರ್​ ಜಾನರ್​ ಅಭಿಮಾನಿಗಳಿಗೆ ಮತ್ತು ಮಾಲಾಶ್ರೀ ್ಯಾನ್ಸ್​ಗೆ “ನೈಟ್​ ಕ್ಯೂರ್’ ಇಷ್ಟವಾಗಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts