More

    VIDEO| ಯೂಟ್ಯೂಬ್​ನಲ್ಲಿ ದಾಖಲೆ ಬರೆಯುತ್ತಿರೋ ‘ಮಲಾಂಗ್​’ ಟ್ರೈಲರ್​: ಬಿಕಿನಿ ಲುಕ್​ನಿಂದ ನಶೆಯೇರಿಸಿದ ದಿಶಾ!

    ನವದೆಹಲಿ: ವಿಭಿನ್ನ ರೀತಿಯ ಕಿಸ್ ಪೋಸ್ಟರ್​ನಿಂದಲೇ ಸಿನಿರಸಿಕರಲ್ಲಿ ಕಿಚ್ಚು ಹಚ್ಚಿದ್ದ ಬಾಲಿವುಡ್​ ‘ಮಲಾಂಗ್​’ ಚಿತ್ರ, ಇದೀಗ ಟ್ರೈಲರ್​ನಿಂದ ಭಾರಿ ಸದ್ದು ಮಾಡುತ್ತಿದೆ. ನಿನ್ನೆ ಬಿಡುಗಡೆಯಾದ ಮಲಾಂಗ್ ಚಿತ್ರದ ಟ್ರೈಲರ್​ ಯೂಟ್ಯೂಬ್​ನಲ್ಲಿ ದಾಖಲೆ ಬರೆಯುತ್ತಿದೆ.

    ಚಿತ್ರದಲ್ಲಿ ಬಾಲಿವುಡ್​ ಬೋಲ್ಡ್​ ಬ್ಯೂಟಿ ದಿಶಾ ಪಾಟನಿ ಹಾಗೂ ನಟ ಆದಿತ್ಯ ರಾಯ್​ ಕಪೂರ್​ ಚುಂಬನದ ಪೋಸ್ಟರ್​ ವೈರಲ್​ ಆಗಿತ್ತು. ಇದೀಗ ಟ್ರೈಲರ್​ನಲ್ಲೂ ಬಿಕಿನಿ ಉಡುಗೆಯ ಮೂಲಕ ಪಡ್ಡೆ ಹುಡುಗರ ನಿದ್ದೆಗೆ ದಿಶಾ ಭಂಗ ತಂದಿದ್ದಾರೆ. ಇನ್ನೂ ಆದಿತ್ಯಾ ಮತ್ತು ದಿಶಾ ಅವರ ಸಾಕಷ್ಟು ರೋಮ್ಯಾಂಟಿಕ್​​ ದೃಶ್ಯಗಳು ಟ್ರೈಲರ್​ನಲ್ಲಿದೆ.

    ಬಾಲಿವುಡ್​ ಸಿನಿ ದಿಗ್ಗಜ ಅನಿಲ್​ ಕಪೂರ್​ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​ ಸಂಪೂರ್ಣ ಆ್ಯಕ್ಷನ್​ ಮತ್ತು ರೋಮ್ಯಾಂಟಿಕ್​ ದೃಶ್ಯಗಳಿಂದ ಕೂಡಿದ್ದು, ಈಗಾಗಲೇ 1 ಕೋಟಿ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಯೂಟ್ಯೂಬ್​ನಲ್ಲಿ ದಾಖಲೆ ಬರೆಯುತ್ತಿರೋ ಮಲಾಂಗ್​ ಚಿತ್ರದ ಟ್ರೈಲರ್​ ಝಲಕ್​ ಅನ್ನು ಈ ಕೆಳಗೆ ಕಾಣಬಹುದಾಗಿದೆ.

    ಫೆಬ್ರವರಿ 7ಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದ್ದು, ಚಿತ್ರವನ್ನು ಟಿ-ಸೀರೀಸ್​, ಎಲ್​ಯುವಿ ರಂಜನ್​, ಅಂಕುರ್​ ಗಾರ್ಗ್​ ಮತ್ತು ಜಯ್​ ಶೇವಕ್ರಮಣಿ ನಿರ್ಮಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts