More

    ವಾಯುಪಡೆಗೆ ಮೇಕ್​ ಇನ್​ ಇಂಡಿಯಾ ಬಲ- 56 ಸಾಗಾಣಿಕೆ ವಿಮಾನ ಖರೀದಿಗೆ ಒಪ್ಪಂದ

    ನವದೆಹಲಿ: ಭಾರತೀಯ ವಾಯುಪಡೆಗೆ ಮಧ್ಯಮ ಪ್ರಮಾಣದ “ಸಿ-295 ಎಂಡಬ್ಲೂ’ ಬಹೋಪಯೋಗಿ ವಿಮಾನಗಳ ಖರೀದಿಗೆ ಸ್ಪೇನ್​ನ ಏರ್​ಬಸ್​ ಡಿಫೆನ್ಸ್‌ ಮತ್ತು ಸ್ಪೇಸ್​ ಕಂಪನಿ ಜತೆಗೆ ರಕ್ಷಣಾ ಸಚಿವಾಲಯ ಶುಕ್ರವಾರ ಒಪ್ಪಂದ ಮಾಡಿಕೊಂಡಿದೆ. 20 ಸಾವಿರ ಕೋಟಿ ರೂಪಾಯಿಯ ವೆಚ್ಚದಲ್ಲಿ 56 ವಿಮಾನಗಳನ್ನು ಖರೀದಿಸಲಾಗುತ್ತಿದೆ. ಪ್ರಧಾನಿ ನೇತೃತ್ವದ ಭದ್ರತೆ ಕುರಿತ ಸಂಪುಟ ಉಪಸಮಿತಿ ಎರಡು ವಾರದ ಹಿಂದೆ ಈ ಯೋಜನೆಗೆ ಒಪ್ಪಿಗೆ ನೀಡಿತ್ತು.

    ಒಟ್ಟು 56 ವಿಮಾನಗಳ ಪೈಕಿ 16 ವಿಮಾನಗಳು ಸ್ಪೇನ್​ನಿಂದ ಪೂರೈಕೆ ಆಗಲಿದ್ದು, ಉಳಿದ 40 ವಿಮಾನಗಳನ್ನು “ಮೇಕ್​ ಇನ್​ ಇಂಡಿಯಾ’ ಕಾರ್ಯಕ್ರಮದಡಿಯಲ್ಲಿ ಟಾಟಾ ಅಡ್ವಾನ್ಸ್​ಡ್​ ಸಿಸ್ಟಂ ಲಿಮಿಟೆಡ್​ (ಟಿಎಎಸ್​ಎಲ್​) ಸಹಯೋಗದಲ್ಲಿ ಭಾರತಲ್ಲೇ ತಯಾರಿಸಲಾಗುತ್ತದೆ. ಇದು 10 ವರ್ಷದ ಗುತ್ತಿಗೆ ಯೋಜನೆ ಆಗಿದ್ದು, ಈ ವಿಮಾನಗಳು ಈಗಾಗಲೇ ಐಎಎ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ “ಅವ್ರೊ-748′ ವಿಮಾನಗಳ ಬದಲು ಕಾರ್ಯನಿರ್ವಹಿಸಲಿವೆ.

    ಎಲ್ಲ 56 ವಿಮಾನಗಳಲ್ಲೂ ದೇಶೀಯ ತಂತ್ರಜ್ಞಾನದ ಎಲೆಕ್ಟ್ರಾನಿಕ್​ ಯುದ್ಧ ಸನ್ನದ್ಧ ಉಪಕರಣ ಅಳವಡಿಕೆ ಮಾಡಲಾಗುತ್ತದೆ. “ಸಿ-295 ಎಂಡಬ್ಲೂ’ ವಿಮಾನಕ್ಕೆ ಅಗತ್ಯವಾದ ಬಿಡಿಭಾಗಗಳಲ್ಲಿ ಹೆಚ್ಚಿನವು ಭಾರತದಲ್ಲೇ ಉತ್ಪಾದನೆ ಆಗಲಿದೆ. ವಿಮಾನಗಳು ಪೂರೈಕೆ ಆರಂಭವಾಗುವುದಕ್ಕೂ ಮುನ್ನ ಸರ್ವೀಸಿಂಗ್​ ಕೇಂದ್ರಗಳನ್ನು ಭಾರತದಲ್ಲಿ ತೆರೆಯಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
    ಏರ್​ಬಸ್​ ಡಿಫೆನ್ಸ್‌ಮತ್ತು ಟಾಟಾ ಅಡ್ವಾನ್ಸಡ್​ ಸಿಸ್ಟಂ ಹಾಗೂ ರಕ್ಷಣಾ ಸಚಿವಾಲಯದ ಮಧ್ಯೆ ಐತಿಹಾಸಿಕ ಒಪ್ಪಂದವಾಗಿದೆ. ಇದಕ್ಕಾಗಿ ಎರಡೂ ಕಂಪನಿಗಳಿಗೆ ಅಭಿನಂದನೆ ಮತ್ತು ಇದನ್ನು ಸಾಧ್ಯ ಮಾಡಿದ ಸರ್ಕಾರ, ಸೇನೆಗೆ ಧನ್ಯವಾದ. ಈ ಯೋಜನೆಯಿಂದ ಭಾರತದಲ್ಲಿ ವಿಮಾನ ತಯಾರಿಕಾ ವಲಯದ ಪ್ರಗತಿ ಹೆಚ್ಚಲಿದೆ. ಜತೆಗೆ ದೇಶೀಯ ಪೂರೈಕೆ ಸಾಮರ್ಥ್ಯ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಲಿದೆ ಎನ್ನುತ್ತಾರೆ ಟಾಟಾ ಸಮೂಹದ ಅಧ್ಯಕ್ಷ ರತನ್​ ಟಾಟಾ,

    ವಿಮಾನ ವಿಶೇಷ
    * 5ರಿಂದ 10 ಟನ್​ ತೂಕದ ಸಾಮಗ್ರಿಗಳ ಸಾಗಣೆ.
    * ಸೆಮಿ-ಏರ್​ಸ್ಟ್ರಿಪ್​ಗಳಿಂದಲೂ ಹಾರಾಟ
    * ಹಿಂಬದಿಯಲ್ಲಿ ಇಳಿಜಾರಿನ ಬಾಗಿಲಿರುವುದರಿಂದ ಸೇನಾ ಸಿಬ್ಬಂದಿ, ಸಲಕರಣೆಗಳ ಏರ್​ಡ್ರಾಪ್​ಗೆ ಅನುಕೂಲ
    * ಸರ್ವಋತು ಕಾರ್ಯಾಚರಣೆ
    * 2000 ನಾಟಿಕಲ್​ ಮೈಲಿ ದೂರ ಕ್ರಮಿಸುವ ಸಾಮರ್ಥ್ಯ
    * ನಿರಂತರ 11 ತಾಸು ಹಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts