More

    ವಾಯುಪಡೆಯಲ್ಲಿ ಖಾಲಿ ಇವೆ ಗ್ರೂಪ್ ಸಿ ಹುದ್ದೆಗಳು: 83 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ‘ಸಿ’ ಸಿವಿಲಿಯನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 7ನೇ ವೇತನ ಆಯೋಗದ ಅನ್ವಯ ಹುದ್ದೆಗೆ ಅನುಗುಣವಾಗಿ ಹಂತ 1 ರಿಂದ 4ರ ವರೆಗೆ ವೇತನ ಇದೆ. ಆಸಕ್ತ ಅಭ್ಯರ್ಥಿಗಳು ಯಾವುದೇ ಸ್ಟೇಷನ್​ಗೆ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಸೂಚನೆ ಜತೆ ನೀಡಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ 10 ರೂ. ಸ್ಟಾಂಪ್ ಅಂಟಿಸಿ ಆರ್ಡಿನರಿ ಪೋಸ್ಟ್ ಮೂಲಕ ಆಯ್ಕೆ ಮಾಡಿಕೊಳ್ಳುವ ಸ್ಟೇಷನ್/ ಕೇಂದ್ರಕ್ಕೆ ಅರ್ಜಿಸಲ್ಲಿಸಲು ಸೂಚಿಸಲಾಗಿದೆ.

    ಹುದ್ದೆ ವಿವರ

    * ಸೂಪರಿಟೆಂಡೆಂಟ್ (ಸ್ಟೋರ್) – 1

    * ಲೋವರ್ ಡಿವಿಷನ್ ಕ್ಲರ್ಕ್ (ಎಲ್​ಡಿಸಿ) – 12

    * ಕುಕ್ (ಆರ್ಡಿನರಿ ಗ್ರೇಡ್) – 5

    * ಕಾರ್ಪೆಂಟರ್ (ಸ್ಕಿಲ್ಡ್) – 1

    * ಸಿವಿಲಿಯನ್ ಮೆಕಾನಿಕಲ್ ಟ್ರಾನ್ಸ್​ಪೋರ್ಟ್ ಡ್ರೖೆವರ್ (ಸಿಎಂಟಿಡಿ – ಆರ್ಡಿನರಿ ಗ್ರೇಡ್) – 45

    * ಫೈರ್​ವ್ಯಾನ್ – 1

    * ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) – 18

    ಎಲ್ಲೆಲ್ಲಿ ನೇಮಕಾತಿ?: ಬೆಳಗಾವಿಯ ಸ್ಟೇಷನ್ ಕಮಾಂಡರ್ ಏರ್​ವುನ್ ಟ್ರೇನಿಂಗ್ ಸ್ಕೂಲ್​ನಲ್ಲಿ ಸಿಎಂಟಿಡಿಗೆ 1 ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಉಳಿದಂತೆ ಆಗ್ರಾ, ಅಸ್ಸಾಂ, ರಾಜಸ್ಥಾನ, ಚೆನ್ನೈ, ಸಿಕಂದರಾಬಾದ್, ದೆಹಲಿ, ಪಂಜಾಬ್, ಚಂಡೀಗಢ, ಶ್ರೀನಗರ, ಡೆಹ್ರಾಡೂನ್, ಕಾನ್ಪುರ, ತಮಿಳುನಾಡು, ಗುವಾಹಟಿ, ಅಲಹಾಬಾದ್, ನಾಸಿಕ್, ಮಧ್ಯಪ್ರದೇಶ, ಹರಿಯಾಣದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

    ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವಿದ್ಯಾರ್ಹತೆ: ಪ್ರೌಢ ಶಿಕ್ಷಣ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು. ಹುದ್ದೆಗೆ ಅನುಗುಣವಾಗಿ ಸ್ಟೋರ್ ಹಾಗೂ ಅಕೌಂಟ್ಸ್​ನಲ್ಲಿ ಅನುಭವ, ನಿಮಿಷಕ್ಕೆ 35 ಪದ ಇಂಗ್ಲಿಷ್, 30 ಪದ ಹಿಂದಿ ಟೈಪಿಂಗ್ ತಿಳಿದಿರಬೇಕು, ಕೇಟರಿಂಗ್​ನಲ್ಲಿ ಡಿಪ್ಲೊಮಾ, ಕಾರ್​ಪೆಂಟರ್ ವಿಷಯದಲ್ಲಿ ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್​ಸ್ಟಿಟ್ಯೂಟ್​ನಿಂದ ಪ್ರಮಾಣಪತ್ರ, ಸಿವಿಲ್ ಡ್ರೈವಿಂಗ್ ಲೈಸೆನ್ಸ್ ಜತೆ ವೃತ್ತಿ ಅನುಭವ, ಫೈರ್ ಫೈಟಿಂಗ್​ನಲ್ಲಿ ತರಬೇತಿ ಪಡೆದಿರಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ವಯಸ್ಸು, ಕನಿಷ್ಠ ವಿದ್ಯಾರ್ಹತೆ, ದಾಖಲೆ, ಪ್ರಮಾಣಪತ್ರ, ಅರ್ಹತೆಗಳನ್ನು ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಇದರಲ್ಲಿ 1:10ರ ಅನುಪಾತದಲ್ಲಿ ಆಯ್ಕೆಮಾಡಲಾದ ಅಭ್ಯರ್ಥಿಗಳನ್ನು ಕೌಶಲ/ ದೈಹಿಕ/ ಪ್ರಾಕ್ಟಿಕಲ್ ಪರೀಕ್ಷೆಗೆ ಒಳಪಡಿಸಲಾಗುವುದು. ಇದರಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಿ ಅಂತಿಮ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 1.12.2021 (ಎಂಪ್ಲಾಮೆಂಟ್ ನ್ಯೂಸ್​ನಲ್ಲಿ ಜಾಹೀರಾತು ಪ್ರಕಟವಾದ 30ದ ದಿನದ ಒಳಗೆ)

    ಅಧಿಸೂಚನೆಗೆ: https://bit.ly/3BZmM0N  (ಎಂಪ್ಲಾಮೆಂಟ್ ನ್ಯೂಸ್​ನ ಅ.30ರ ಸಂಚಿಕೆ ಪುಟ 24)

    ಬೀದರ್ ಪಶುವೈದ್ಯ ವಿವಿಯಲ್ಲಿದೆ 94 ಬೋಧಕ ಹುದ್ದೆಗಳು: ಅರ್ಜಿ ಆಹ್ವಾನ- 2.18 ಲಕ್ಷ ರೂ.ವರೆಗೆ ಸಂಬಳ

    ಡಿಪ್ಲೋಮಾ, ಬಿಇ ಪದವೀಧರರಾ? ಕೊಂಕಣ್ ರೈಲ್ವೆಯಲ್ಲಿದೆ 139 ಹುದ್ದೆಗಳು: ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts