More

    ಮೇಜರ್ ಧ್ಯಾನ್‌ಚಂದ್ ಸ್ಮಾರಕ ಜಿಲ್ಲಾ ಮಟ್ಟದ ಹಾಕಿ ಪಿಜಿಎಸ್‌ಇ, ಟೆರೇಷಿಯನ್ ಪ್ರಥಮ


    ಮೈಸೂರು:
    ಉತ್ತಮ ಪ್ರದರ್ಶನ ನೀಡಿದ ಪಿಜಿಎಸ್‌ಇ ಮಾನಸಗಂಗೋತ್ರಿ ಹಾಗೂ ಟೆರೇಷಿಯನ್ ಪದವಿ ಕಾಲೇಜು ತಂಡಗಳು ಕ್ರಮವಾಗಿ ಮೇಜರ್ ಧ್ಯಾನ್‌ಚಂದ್ ಸ್ಮಾರಕ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವು.
    ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿಯು ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್‌ನ ಹಾಕಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾಲೇಜು ವಿಭಾಗದ ಪುರುಷರ ಫೈನಲ್ ಪಂದ್ಯದಲ್ಲಿ ಪಿಜಿಎಸ್‌ಇ ಮಾನಸಗಂಗೋತ್ರಿ ತಂಡ 6-5 ಗೋಲುಗಳಿಂದ ಡಿಪೌಲ್ ಕಾಲೇಜು ವಿರುದ್ಧ ಜಯ ಸಾಧಿಸಿತು. ಅಂತಿಮ ಪಂದ್ಯದಲ್ಲಿ ಸೋಲು ಕಂಡ ಡಿಪೌಲ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ಮೈಕಾ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆಯಿತು.


    ಕಾಲೇಜು ಮಹಿಳೆಯರ ವಿಭಾಗದ ಅಂತಿಮ ಪಂದ್ಯದಲ್ಲಿ ಟೆರೇಷಿಯನ್ ಪದವಿ ಕಾಲೇಜು ತಂಡ 4-1 ಗೋಲುಗಳಿಂದ ಟೆರೇಷಿಯನ್ ಪಿಯು ಕಾಲೇಜು ವಿರುದ್ಧ ಜಯ ಸಾಧಿಸಿತು. ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜು ತಂಡ ಮೂರನೇ ಸ್ಥಾನ ಪಡೆಯಿತು. ಪ್ರೌಢಶಾಲಾ ಬಾಲಕಿಯರ ಹಾಗೂ ಬಾಲಕರ ಎರಡು ವಿಭಾಗದಲ್ಲೂ ಡಿಎಂಎಸ್‌‘ಎ’ ತಂಡ ಪ್ರಥಮ ಹಾಗೂ ಡಿಎಂಎಸ್ ‘ಬಿ’ ತಂಡಗಳು ದ್ವಿತೀಯ ಸ್ಥಾನ ಪಡೆದವು.

    ಬಹುಮಾನ ವಿತರಣೆ: ಗೆಲುವು ಪಡೆದ ತಂಡಗಳಿಗೆ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರೀಯ ಹಾಕಿ ಆಟಗಾರ್ತಿ ಪಿ.ಸಿ.ನಿಶಾ, ನಿವೃತ್ತ ಬಾಸ್ಕೆಟ್ ಬಾಲ್ ತರಬೇತುದಾರ ಓಂಪ್ರಕಾಶ್, ಮುಕ್ತ ವಿವಿ ಸಿಂಡಿಕೇಟ್ ಸದಸ್ಯ ಎನ್.ಕೃಷ್ಣೇಗೌಡ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಹಾಕಿ ತರಬೇತುದಾರ ಅಶೋಕ್ ವೈ. ತುಪ್‌ಸುಂದರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts