More

    ಸ್ವಚ್ಛತೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಿ

    ಕಲಬುರಗಿ: ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಎಲ್ಲೆಡೆಯಿಂದ ಅಪಾರ ಜನರು ಬರಲಿದ್ದು, ನಗರ ಹಾಗೂ ಸಮ್ಮೇಳನನ ನಡೆಯುವ ಸ್ಥಳದ ಸುತ್ತಲೂ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಮಹತ್ವ ಕೊಡುವುದರ ಜತೆಗೆ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಾಹಿತ್ಯ ಸಮ್ಮೇಳನದ ಸ್ವಚ್ಛತಾ ಸಮಿತಿ ಅಧ್ಯಕ್ಷರಾದ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಸೂಚಿಸಿದರು.
    ಸಮಿತಿ ಪದಾಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಮ್ಮೇಳನದ ಸ್ಥಳ, ಊಟದ ಮನೆ ಹಾಗೂ ಮೆರವಣಿಗೆ ಹೊರಡುವ ಮಾರ್ಗದುದ್ದಕ್ಕೂ ಸ್ವಚ್ಛತೆ ಕೈಗೊಳ್ಳುವಂತೆ ತಿಳಿಸಿದರು.
    ಸಮಿತಿಯ ಪದಾಧಿಕಾರಿಗಳೊಂದಿಗೆ ಮೆರವಣಿಗೆ ಹೋಗುವ ಮಾರ್ಗವನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸ್ವಚ್ಛತೆ ಕಡೆಗೂ ಗಮನ ಕೊಡಬೇಕು. ಹೆಚ್ಚುವರಿಯಾಗಿ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಿಂದಲೂ ಪೌರ ಕಾಮರ್ಿಕರನ್ನು ಕರೆಯಿಸಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ನಿರ್ದೆಶನ ನೀಡಿದರು.
    ಎರಡು ದಿನದೊಳಗೆ ಮಹಾನಗರದಾದ್ಯಂತ ಇರುವ ಬ್ಯಾನರ್, ಕಟೌಟ್ಗಳನ್ನು ತೆರವುಗೊಳಿಸಿ ಕೇವಲ ಸಮ್ಮೇಳನ ಕುರಿತಾದ ಕಟೌಟ್ಗಳಿರುವಂತೆ ಕ್ರಮ ಕೈಗೊಳ್ಳಿ ಎಂದು ಎಂವೈಪಿ ಸೂಚಿಸಿದರು.
    ಪಾಲಿಕೆಯ ಸಾವಿರ ಪೌರ ಕಾರ್ಮಿಕರೊಂದಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ 300ಕ್ಕೂ ಅಧಿಕ ಪೌರ ಕಾರ್ಮಿಕರನ್ನು ಸಮ್ಮೇಳನ ಸ್ವಚ್ಛತೆಗೆ ಕರೆಯಿಸಿಕೊಳ್ಳಲಾಗುತ್ತಿದೆ. ಸಮ್ಮೇಳನದ ಸ್ವಚ್ಚತೆಗಾಗಿ 450 ಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಶಾಸಕ ಎಂ.ವೈ.ಪಾಟೀಲ್ ಗಮನಕ್ಕೆ ತಂದರು. ಸಮಿತಿಯ ಕಾರ್ಯದರ್ಶಿ ಗಳಾದ ಜಿಪಂ ಡಿಆರ್ಡಿಎ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಪಾಲಿಕೆ ಕಾರ್ಯ ನಿರ್ವಾಹಕ ಅಭಿಯಂತರ ದಶವಂತ ಗಾಜರೆ, ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರ ರಿಯಾಜ್ ಅಹ್ಮದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜನಿಯರ್ ಶಶಿಕಾಂತ ಕಮಲಾಪುರಕರ್, ಪಾಲಿಕೆಯ ಪರಿಸರ ಅಧಿಕಾರಿ ಮುನಾಫ್ ಪಟೇಲ್, ಪರಿಷತ್ ಪ್ರತಿನಿಧಿ ಸಂತೋಷ ಪತಂಗೆ, ಸಿವಿಲ್ ಇಂಜನಿಯರ್ ಅಸೋಷಿಯೆಷನ್ ಉಪಾಧ್ಯಕ್ಷ ರಾಜಶೇಖರ ಶೀಲವಂತ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts