More

    ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ ಮಾಡಿ, ಕೇಂದ್ರಕ್ಕೆ ದುಂಬಾಲು ಬಿದ್ದ ಮಹಾರಾಷ್ಟ್ರ ಸರ್ಕಾರ

    ಮುಂಬೈ: ನಿಮ್ಮನ್ನು ಊರಿಗೆ ಕಳುಹಿಸುವ ಜವಾಬ್ದಾರಿ ನನ್ನದು. ಈ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ. ಲಾಕ್​ಡೌನ್​ ಅವಧಿ ಮುಗಿಯುವವರೆಗೆ ಸಹಕರಿಸಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಕೆಲ ದಿನಗಳ ಹಿಂದಷ್ಟೇ ವಲಸೆ ಕಾರ್ಮಿಕರಿಗೆ ಹೇಳಿದ್ದರು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರವೀಗ ಕಾರ್ಯೋನ್ಮುಖವಾಗಿದೆ.

    ಮಹಾರಾಷ್ಟ್ರ ಈಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲು ದೀರ್ಘ ಪ್ರಯಾಣದ ವಿಶೇಷ ರೈಲುಗಳ ಸಂಚಾರ ಆರಂಭಿಸಬೇಕೆಂದು ಮನವಿ ಮಾಡಿದೆ.

    ಮಹಾರಾಷ್ಟ್ರ ಪ್ರಮುಖ ಕೈಗಾರಿಕಾ ರಾಜ್ಯವಾಗಿದ್ದು, ಇಲ್ಲಿನ ಕಾರ್ಖಾನೆಗಳಲ್ಲಿ ಉತ್ತರಪ್ರದೇಶ, ಬಿಹಾರ ಹಾಗೂ ಈಶಾನ್ಯ ರಾಜ್ಯಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಮಹಾರಾಷ್ಟ್ರದ ವಿವಿಧೆಡೆ ಸ್ಥಾಪಿಸಲಾಗಿರುವ ನಿರಾಶ್ರಿತ ಕೇಂದ್ರಗಳಲ್ಲಿ ಹೊರರಾಜ್ಯಗಳ 6.5ಕ್ಕೂ ಅಧಿಕ ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

    ಲಾಕ್​ಡೌನ್​ ಘೋಷಣೆಯಾಗಿದ್ದರಿಂದ ಕೈಗಾರಿಕೆಗಳು ಸ್ಥಗಿತಗೊಂಡು ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ತಮ್ಮೂರುಗಳಿಗೆ ಹೋಗಲು ತವಕಿಸುತ್ತಿದ್ದಾರೆ. ಇತ್ತೀಚೆಗೆ ಬಾಂದ್ರಾ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರೇ ಇದಕ್ಕೆ ಸಾಕ್ಷಿ.

    ಲಾಕ್​ಡೌನ್​ ತೆರವಾಗುವ ಮೇ 3 ಅಥವಾ ನಂತರದ ದಿನಗಳಲ್ಲಿ ರೈಲು ಪ್ರಯಾಣಿಕರಲ್ಲಿ ಭಾರಿ ದಟ್ಟಣೆ ಉಂಟಾಗುವುದರಿಂದ ಮುಂಬೈ ಹಾಗೂ ಪುಣೆಯಿಂದ ದೇಶದ ಪ್ರಮುಖ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಆರಂಭಿಸಬೇಕೆಂದು ರೈಲ್ವೆ ಸಚಿವ ಪಿಯೂಷ್​ ಗೋಯಲ್​ಗೆ ಡಿಸಿಎಂ ಅಜಿತ್​ ಪವಾರ್​ ಪತ್ರ ಬರೆದಿದ್ದಾರೆ.

    ಕೇಂದ್ರ ಸರ್ಕಾರಿ ನೌಕರರ, ಪಿಂಚಣಿದಾರರ ತುಟ್ಟಿಭತ್ಯೆಗೆ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts