More

    ಬೀದಿ ನಾಯಿ ಸಮಸ್ಯೆಗೆ ಪರಿಹಾರ: ಬೀದಿ ಬದಿಯ ಶ್ವಾನಗಳನ್ನು ಸೇವನೆಗಾಗಿ ಅಸ್ಸಾಂಗೆ ಕಳುಹಿಸಿ ಎಂದ ಶಾಸಕ

    ಮುಂಬೈ: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿಗೆ ವಿಲಕ್ಷಣ ಪರಿಹಾರವನ್ನು ನೀಡಿದ ಮಹಾರಾಷ್ಟ್ರ ಶಾಸಕ ಬಚ್ಚು ಕಾಡು ವಿವಾದಕ್ಕೀಡಾಗಿದ್ದಾರೆ. ಬೀದಿನಾಯಿಗಳ ನಿಯಂತ್ರಣವಾಗಬೇಕಾದರೆ,ಅವುಗಳನ್ನು ಅಸ್ಸಾಂಗ ಕಳುಹಿಸಬೇಕು. ಅಲ್ಲಿನ ಜನರು ಅವುಗಳನ್ನು ಉತ್ಸಾಹದಿಂದ ತಿನ್ನುತ್ತಾರೆ ಎಂದು ಮಹಾರಾಷ್ಟ್ರದ ಶಾಸಕ ಬಚ್ಚು ಕಾಡು ವಿಲಕ್ಷಣ ಸಲಹೆ ನೀಡಿದ್ದು, ಬಚ್ಚು ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

    ರಾಜ್ಯದಲ್ಲಿ ಬೀದಿ ನಾಯಿಗಳಿಂದ ಎದುರಾಗುವ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಪ್ರಹಾರ ಜನಶಕ್ತಿ ಪಕ್ಷದ ಮುಖ್ಯಸ್ಥರಾಗಿರುವ ಬಚು ಕಾಡು ಮಾತನಾಡಿ, ಮಹಾರಾಷ್ಟ್ರದ ಬೀದಿ ನಾಯಿಗಳನ್ನು ಅಸ್ಸಾಂಗೆ ತಿನ್ನಲು ಕಳುಹಿಸಬೇಕು. ಇತ್ತೀಚೆಗಷ್ಟೇ ಅಸ್ಸಾಂಗೆ ಭೇಟಿ ನೀಡಿದ್ದು, ರಾಜ್ಯದಲ್ಲಿ ನಾಯಿಗಳನ್ನು 8000 ರೂ.ಗೆ ಮಾರಾಟ ಮಾಡುತ್ತಿರುವುದು ಗೊತ್ತಾಯಿತು ಎಂದಿದ್ದಾರೆ.

    ಇದನ್ನೂ ಓದಿ: ಕೆಮ್ಮಿನ ಸಿರಪ್ ಕುಡಿದು ಮಕ್ಕಳು ನಿಧನ; ಮಹಾರಾಷ್ಟ್ರದ 6 ಕಂಪನಿಗಳ ಲೈಸೆನ್ಸ್​ ರದ್ದು!

    ಅಸ್ಸಾಂನಲ್ಲಿ ಶ್ವಾನಗಳಿಗೆ ಬಹಳ ಬೇಡಿಕೆ ಇದೆ. ಅವುಗಳಿಗೆ 8 ಸಾವಿರ ರೂ.ಗಳವರೆಗೂ ಬೆಲೆ ಇದೆ.ರಾಜ್ಯದಲ್ಲಿ ಬೀದಿ ನಾಯಿಗಳ ನಿಯಂತ್ರಣವಾಗಬೇಕಾದರೆ ಅವುಗಳನ್ನ ಮೊದಲು ಅಸ್ಸಾಂಗೆ ಕಳುಹಿಸಬೇಕು ಎಂದಿದ್ದಾರೆ.

    ಇಂಥ ಅಮಾನವೀಯ ಸಲಹೆ ನೀಡಿದ್ದಕ್ಕಾಗಿ ಪ್ರಾಣಿದಯಾ ಸಂಘಗಳು ಬಚ್ಚು ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿವೆ. ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಶಾಸಕರೊಬ್ಬರು ಇಂತಹ ಸಲಹೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜಾರ್ಖಂಡ್ ಬಿಜೆಪಿ ಶಾಸಕ ಬಿರಂಚಿ ನಾರಾಯಣ್ ಅವರು, ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡುವ ಸಮಸ್ಯೆಗೆ ರಾಜ್ಯ ಸರ್ಕಾರಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ನಾಗಾಲ್ಯಾಂಡ್ ಜನರಿಗೆ ಕರೆ ಮಾಡಿ ಸಮಸ್ಯೆ ದೂರವಾಗುತ್ತದೆ ಎಂದು ಹೇಳಿದ್ದರು.

    ಚಪ್ಪಲಿ ಬಿಡುವ ವಿಚಾರಕ್ಕೆ ಜಗಳ; ಪ್ರಾಣ ಕಳೆದುಕೊಂಡ ನೆರೆ ಮನೆಯ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts