More

    VIDEO| ಮುಂದುವರಿದ ಮಹಾ ಸಿಎಂ ಉದ್ಧವ್ ನಾನ್ ಸ್ಟಾಪ್ ಉದ್ಧಟತನ: ಸಾಕ್ಷ್ಯಾಚಿತ್ರ ಬಿಡುಗಡೆ

    ಚಿಕ್ಕೋಡಿ: ಬೆಳಗಾವಿ ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ತೆಗೆದಿರುವ ಕ್ಯಾತೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಈ ಮೊದಲು ನೇರವಾಗಿ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದರು. ಇದು ಸಾಲದು ಎಂಬಂತೆ ಎರಡು ದಿನಗಳ ಹಿಂದೆ ಪುಸ್ತಕ ಬಿಡುಗಡೆ ಮಾಡಿ ಉರಿಯೋ ಬೆಂಕಿಗೆ ತುಪ್ಪ ಸುರಿದ್ದರು. ಇದೀಗ ಸಾಕ್ಷ್ಯಾಚಿತ್ರದ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಮತ್ತಷ್ಟು ಘಾಸಿಗೊಳಿಸುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರ ಕೈಹಾಕಿದೆ.

    ಸಿಎಂ ಉದ್ಧವ್ ಅವರ ನಾನ್ ಸ್ಟಾಪ್ ಉದ್ಧಟತನವು ಕನ್ನಡಿಗರ ತಾಳ್ಮೆ ಪರಿಕ್ಷೆ ಮಾಡುತ್ತಿದೆ. ಸದ್ಯ ಬಿಡುಗಡೆಯಾಗಿರುವ “ಎ ಕೇಸ್ ಫಾರ್ ಜಸ್ಟಿಸ್” ಎಂಬ ಸಾಕ್ಷ್ಯಾಚಿತ್ರವು ಮತ್ತಷ್ಟು ವಿವಾದ ಕಿಡಿ ಹೊತ್ತಿಸುವ ಲಕ್ಷಣಗಳು ಕಾಣುತ್ತಿವೆ. ಜನವರಿ 27ರಂದು ಸಾಕ್ಷ್ಯಾಚಿತ್ರವನ್ನು ಯೂಟ್ಯೂಬ್​ನಲ್ಲಿ ಸಿಎಂ ಉದ್ಧವ್​ ಠಾಕ್ರೆ ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿರಿ: ಬೆಳಗಾಂ ಹೆಸರನ್ನು ಬೆಳಗಾವಿ ಮಾಡಿದ್ದು, ಅಲ್ಲಿ ವಿಧಾನಸೌಧ ನಿರ್ಮಿಸಿದ್ದು ತಪ್ಪಂತೆ!: ಉದ್ಧವ್ ಠಾಕ್ರೆ ಉದ್ಧಟ ಹೇಳಿಕೆ…

    ಸಾಕ್ಷ್ಯಾಚಿತ್ರದಲ್ಲಿ ಕರ್ನಾಟಕದಲ್ಲಿ ಮರಾಠಿ ಕುರುಹುಗಳನ್ನು ಉಲ್ಲೇಖಿಸಲಾಗಿದೆ. ಕಾರವಾರದ ಶಾಲೆಯ ಇಂಗ್ಲೀಷ್ ಕೊಂಕಣಿ ಮರಾಠಿ ಭಾಷಾ ಭೋದನೆಯ ಚಿತ್ರಣವಿದೆ. ಎನ್​ಸಿಪಿ ಬೆಟಾಲಿಯನ್​ನಲ್ಲಿ ಮರಾಠಿ ಭಾಷೆಯ ಭಿತ್ತಿಫಲಕ ಇರುವ ದೃಶ್ಯವಿದೆ. ಅಲ್ಲದೆ, ಬೆಳಗಾವಿಗಾಗಿ ನಡೆದ ಅನೇಕ ಹೋರಾಟಗಳ ದೃಶ್ಯವಿದೆ.

    ಇಷ್ಟೇ ಅಲ್ಲದೆ, 1913ರಲ್ಲಿ ಪ್ರಕಟವಾದ ಕಾರವಾರದ ಸಹಕಾರ ಬ್ಯಾಂಕ್​ನ ಸುದ್ದಿ, 1890ರಲ್ಲಿ ಬೆಳಗಾವಿಯಲ್ಲಿ ಸಿದ್ಧವಾದ ಸೇತುವೆ ಮೇಲೆ ಮರಾಠಿ ಭಾಷೆಯ ನಾಮಫಲಕ ಇರುವ ದೃಶ್ಯ ವಿಡಿಯೋದಲ್ಲಿದ್ದು, ಬೆಳಗಾವಿ ನಮ್ಮದೇ ಎನ್ನುವ ಮೂಲಕ ಮತ್ತೆ ಮತ್ತೆ ಕನ್ನಡಿಗರನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts