More

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಧಾನ ಪರಿಷತ್​ಗೆ ಅವಿರೋಧ ಆಯ್ಕೆ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿ 9 ಮಂದಿ ಗುರುವಾರ ರಾಜ್ಯ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು.

    ಸಿಎಂ ಉದ್ಧವ್​ ಠಾಕ್ರೆ ವಿಧಾನ ಪರಿಷತ್​ಗೆ ಆಯ್ಕೆಯಾಗುವುದರೊಂದಿಗೆ ಅವರ ಮುಖ್ಯಮಂತ್ರಿ ಹುದ್ದೆ ಗಟ್ಟಿಯಾಗಿದೆ.

    ಆಯ್ಕೆಯಾದವರು: ವಿಧಾನಪರಿಷತ್​ ಉಪ ಸಭಾಧ್ಯಕ್ಷೆ ನೀಲಂ ಗೋರೆ, (ಶಿವಸೇನಾ) ಬಿಜೆಪಿಯ ರಂಜಿತ್ಸಿಂಗ್​ ಮೋಹಿತೆ ಪಾಟೀಲ್​, ಗೋಪಿಚಂದ್‌ ಪಡಲ್ಕರ್‌, ಪ್ರವೀಣ್‌ ದಾಟೆ ಮತ್ತು ರಮೇಶ್‌ ಕರಾಡ್, ಎನ್​ಸಿಪಿಯ ಅಮೋಲ್​ ಮಿಟ್ಕರಿ ಹಾಗೂ ಕಾಂಗ್ರೆಸ್​ನ ರಾಜೇಶ್​ ರಾಥೋಡ್​ ಅವರು ಅವಿರೋಧವಾಗಿ ಆಯ್ಕೆಯಾದರು.

    ಇದನ್ನೂ ಓದಿ    VIDEO| ಮರಿ ಆನೆ ಸಫಾರಿ ವಾಹನದಲ್ಲಿರುವವರನ್ನು ಹೇಗೆ ಬೆದರಿಸುತ್ತದೆ ನೋಡಿ !

    ಉದ್ಧವ್​ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರ 6 ತಿಂಗಳೊಳಗೆ ಶಾಸಕರಾಗಬೇಕಿತ್ತು. ಸಂವಿಧಾನದ ಪ್ರಕಾರ ಅವರು ಮೇ.27ರೊಳಗೆ ಶಾಸಕರಾಗಿ ಆಯ್ಕೆಯಾಬೇಕಿತ್ತು. ಇಲ್ಲದಿದ್ದರೆ ಅವರು ಮುಖ್ಯಮಂತ್ರಿ ಪಟ್ಟ ಕಳೆದುಕೊಳ್ಳಬೇಕಿತ್ತು.

    ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಕಳೆದ ತಿಂಗಳು ರಾಜ್ಯಪಾಲರಿಗೆ ಪತ್ರ ಬರೆದು ಶೀಘ್ರವೇ ಖಾಲಿಯಾಗಿರುವ ವಿಧಾನ ಪರಿಷತ್​ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಕರೊನಾ ವೈರಸ್​ ಸೋಂಕು ಹಾವಳಿ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಒಪ್ಪಿರಲಿಲ್ಲ. ಇದರಿಂದ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿದ್ದ ಉದ್ಧವ್​ ಠಾಕ್ರೆ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಶೀಘ್ರವೇ ಚುನಾವಣೆ ನಡೆಸುವಂತೆ ಕೋರಿದ್ದರು. (ಏಜೆನ್ಸೀಸ್​)

    ಶಾಲೆಗಳಲ್ಲಿ ಶುರುವಾಗಲಿದೆ ಶಿಫ್ಟ್​, ಎರಡು ದಿನಕ್ಕೊಮ್ಮೆ ಕ್ಲಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts