More

    ಶಾಲೆಗಳಿಗೆ ದಾನ ಮಾಡಿ: ಶಾಸಕ ಸಿದ್ದು ಸವದಿ

    ಮಹಾಲಿಂಗಪುರ: ದೇಶ, ತಂದೆ-ತಾಯಿಗಳು ಹಾಗೂ ಸೈನಿಕರನ್ನು ಗೌರವದಿಂದ ಕಾಣಬೇಕು. ತಿಮ್ಮಪ್ಪನ ಹುಂಡಿಯಲ್ಲಿ ಹಣ ಹಾಕುವ ಬದಲು ಶಾಲೆಗೆ ದಾನ ಮಾಡಿದರೆ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಸಮೀಪದ ಕೆಸರಗೊಪ್ಪ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಿರ್ಮಿಸಿರುವ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಲ್ಲಿದೆ. ಕೆಸರಗೊಪ್ಪ ಗ್ರಾಮೀಣ ಪ್ರದೇಶವಾದರೂ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದರು.

    ಕಬಡ್ಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರೌಢಶಾಲೆ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಮುಧೋಳ ತಾಪಂ ಅಧ್ಯಕ್ಷೆ ವೀಣಾ ದೇಸಾಯಿ, ಕೆಸರಗೊಪ್ಪ ಗ್ರಾಪಂ ಅಧ್ಯಕ್ಷ ಬಸವರಾಜ ಶಿರೋಳ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುರೇಶ ಅಕ್ಕಿವಾಟ, ತಾಪಂ ಸದಸ್ಯ ಪರಪ್ಪ ಜಾನವಾಡ, ಮನೋಹರ ಶಿರೋಳ, ಮಹಾಲಿಂಗ ಮಾದರ, ಸಂಗಪ್ಪ ಹಲ್ಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಆನಂದ ಕಂಪು, ಬಾಳಪ್ಪ ಜಗದಾಳ, ಪರಪ್ಪ ಜನವಾಡ, ತಿಮ್ಮಣ್ಣ ಬಟಕುರ್ಕಿ, ಚನ್ನು ದೇಸಾಯಿ, ಮಾರುತಿ ಬ್ಯಾಕೋಡ, ಮಾರುತಿ ಕರೋಶಿ, ವಿಠಲ ಢವಳೇಶ್ವರ, ಮುದಕಯ್ಯ ಹಿರೇಮಠ, ಜೆ.ವಿ. ಹುನಗುಂದ, ಜೋತೆಪ್ಪ ಕಪರಟ್ಟಿ, ಪ್ರಕಾಸ ಚನ್ನಾಳ, ಮಹಾದೇವಿ ದಡ್ಡಿಮನಿ, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ಸತ್ತಿಗೇರಿ, ಉಪಾಧ್ಯಕ್ಷೆ ಸಾವಿತ್ರಿ ಢವಳೇಶ್ವರ, ಮುಖ್ಯಶಿಕ್ಷಕ ಸಿ.ವಿ. ಚೌದ್ರಿ ಇತರರು ಇದ್ದರು.

    ವಿವಿಧೆಡೆ ಭೂಮಿಪೂಜೆ
    ಇದೇ ವೇಳೆ ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 96 ಲಕ್ಷ ರೂ. ವೆಚ್ಚದ ಪಿಯು ಕಾಲೇಜು ಹೆಚ್ಚುವರಿ ಕಟ್ಟಡ ನಿರ್ಮಾಣ, ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಕೆಸರಗೊಪ್ಪ ಗ್ರಾಮದ ಸ್ಮಶಾನದಿಂದ ಸಮೀರವಾಡಿ ರಸ್ತೆಯ ಶ್ರೀಶೈಲ ಸತ್ತಿಗೇರಿ ತೋಟದವರೆಗಿನ 5 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ, ಕೆರಗೊಪ್ಪ ಗ್ರಾಮದ ಚಿಮ್ಮಡ ರಸ್ತೆಯಿಂದ ಪ್ರಭು ಸತ್ತಿಗೇರಿ ವಸ್ತಿವರೆಗೆ 2 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ, 4 ಲಕ್ಷ ರೂ. ವೆಚ್ಚದ ಮಲ್ಲಪ್ಪ ಮಿರ್ಜಿ ವಸ್ತಿ ರಸ್ತೆ ಸುಧಾರಣೆ, ಕೆಸರಗೊಪ್ಪ ಗ್ರಾಮದ ಚಿಮ್ಮಡ ರಸ್ತೆಯಿಂದ ಅಲ್ಲಪ್ಪ ಶಿರೋಳ ಮನೆವರೆಗಿನ 4 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ, ಹನಗಂಡಿ ರಸ್ತೆಯಿಂದ ಸಸಾಲಟ್ಟಿಯವರ ಹಳ್ಳದವರೆಗಿನ 4 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಶಾಸಕ ಸವದಿ ಭೂಮಿಪೂಜೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts