More

    ನಾಟಕ ಪರಿಣಾಮ ಬೀರುವ ಮಾಧ್ಯಮ

    ಮಹಾಲಿಂಗಪುರ: ನಾಟಕ ನೈಜತೆ, ನಿಖರತೆ ಅಭಿನಯಿಸುವ ಒಂದು ಕಲೆ. ಅದು ಮನರಂಜನೆ ಜತೆಗೆ ಮಾಹಿತಿಯನ್ನು ಒದಗಿಸಿ, ಜನರ ಮೇಲೆ ಪರಿಣಾಮ ಬೀರುವ ಒಂದು ಪ್ರಬಲ ಮಾಧ್ಯಮ ಎಂದು ಚಲನಚಿತ್ರ ಹಾಗೂ ನಾಟಕ ಕಲಾವಿದ ಹರೀಶ ಹಿರಿಯೂರ ಹೇಳಿದರು.

    ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಎಸ್.ಸಿ.ಪಿ. ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಉದ್ಘಾಟನೆ ಮತ್ತು ಪ್ರಮಾಣ ವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಮಾಜದಲ್ಲಿ ನಡೆಯುವ ದರ್ಪ ದೌರ್ಜನ್ಯಗಳನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ನಿರೂಪಿಸಿ ಕೊನೆಗೆ ಸತ್ಯಕ್ಕೆ ನ್ಯಾಯಕ್ಕೆ ಜಯ ಸಿಗುವುದೆಂಬ ಸುಂದರ ಸಂದೇಶ ಸಾರಿ ಸಂಸಾರದ ಜಂಜಾಟದಿಂದ ನೊಂದ ಮನಸುಗಳಿಗೆ ಹಾಸ್ಯದ ಹೊನಲು ಹರಿಸಿ ಮನಸ್ಸನ್ನು ತಿಳಿಗೊಳಿಸುವ ಪ್ರಮುಖ ಸಾಧನ ನಾಟಕ ಎಂದರು.

    ಬೆಂಗಳೂರಿನ ಸೈಕ್ಲಿಂಗ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಶ್ರೀಶೈಲ ಕುರನಿ ಮಾತನಾಡಿ, ಕೆ.ಎಲ್.ಇ. ಸಂಸ್ಥೆಯ ಎಸ್.ಸಿ.ಪಿ. ಪದವಿ ಕಾಲೇಜಿನಲ್ಲಿ ಶಿಸ್ತು, ಸಂಯಮ ಮತ್ತು ಸ್ವಚ್ಛತೆಯ ವಾತಾವರಣವಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟವಂತರು ಎಂದರು.

    ಕೆ.ಎಲ್.ಇ. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಅಶೋಕ ಅಂಗಡಿ, ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ವಾರ್ಷಿಕ ಚಟುವಟಿಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಂ.ಜಿ.ಯರನಾಳ, ಕ್ರೀಡಾ ವಿಭಾಗದ ವಿ.ಎಸ್. ಅಂಗಡಿ, ಎ.ಎಂ. ಉಗಾರೆ, ಸಾಂಸ್ಕೃತಿಕ ವಿಭಾಗದ ಡಾ.ಎಸ್.ಎಸ್. ಕೋಳಿ, ಸಂಧ್ಯಾ ಕೊಡಗನೂರ ಹಲವರು ಇದ್ದರು.

    ಪ್ರಮಾಣ ವಚನ ಬೋಧನೆ
    ಕಾಲೇಜು ವಿದ್ಯಾರ್ಥಿಗಳ ಸಂಸತ್ತಿಗೆ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ರವೀನಾ ಕರಿಹೊಳೆ, ಕ್ರೀಡಾ ಕಾರ್ಯದರ್ಶಿ ರಿಯಾಜಹ್ಮದ್ ಪಾರಸ್, ಸಾಂಸ್ಕೃತಿಕ ಕಾರ್ಯದರ್ಶಿ ಶಿಲ್ಪಾ ಖೋತ, ಶಿಲ್ಪಾ ತಿಮ್ಮಾಪುರ, ಮಹಿಳಾ ಪ್ರತಿನಿಧಿ ದೀಪಾ ಹೊಸಕೋಟಿ, ಸಹನಾ ವಜ್ಜರಮಟ್ಟಿ, ಶಿಸ್ತು ಕಾರ್ಯದರ್ಶಿ ಪ್ರಜ್ವಲ ಲೋನಿ, ಓದುವ ಕೊಠಡಿ ಕಾರ್ಯದರ್ಶಿ ಪ್ರೇಮಾ ಮಿರ್ಜಿ, ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯದರ್ಶಿ ಹಸೀನಾ ನದ್ಾ, ವಿದ್ಯಾ ನುಚ್ಚುಂಡಿ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ಪ್ರಮಾಣ ವಚನ ಬೋಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts