More

    ಸರ್ಕಾರ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಲಿ

    ಮಹಾಲಿಂಗಪುರ: ಎಪಿಎಂಸಿ, ಭೂ ಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಮತ್ತು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ವಿರೋಧ ಪಕ್ಷಗಳ ಸಲಹೆ, ಸೂಚನೆ ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಬಂಡವಾಳಶಾಹಿಗಳ ಪರ ವರ್ತಿಸುವುದು ಸರಿಯಲ್ಲ. ತಿದ್ದುಪಡಿ ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಜನ ಜಾಗೃತಿ ಮೂಡಿಸಲು ಎರಡು ಕೋಟಿ ಮತದಾರರ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು ಅದನ್ನು ಸಂಸತ್ತಿನಲ್ಲಿ ಮಂಡಿಸುವ ಜತೆಗೆ ರಾಷ್ಟ್ರಪತಿಗಳಿಗೆ ಕಳಿಸಲಾಗುವುದು ಎಂದು ಹೇಳಿದರು.

    ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ತ್ರಿಭಾಷಾ ನೀತಿ ಮರುಪರಿಶೀಲಿಸಬೇಕು, ಕಾಯ್ದೆ ತಿದ್ದುಪಡಿ ಕಾರ್ಯ ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಡಾ.ಎ.ಆರ್. ಬೆಳಗಲಿ, ತೇರದಾಳ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನಗರ ಘಟಕ ಅಧ್ಯಕ್ಷ ಈಶ್ವರ ಚಮಕೇರಿ, ಕಾಂಗ್ರೆಸ್ ಮುಖಂಡರಾದ ರಂಗನಗೌಡ ಪಾಟೀಲ, ಜಾವೇದ ಬಾಗವಾನ, ಶ್ರೀಪಾದ ಗುಂಡಾ, ಎಸ್.ಎಂ. ಉಳ್ಳೇಗಡ್ಡಿ, ಪ್ರಕಾಶ ಮಮದಾಪುರ, ಜೋತೆಪ್ಪ ಕಪರಟ್ಟಿ, ನಾನಾ ಜೋಶಿ, ಅರ್ಜುನ ದೊಡಮನಿ, ವಿಠ್ಠಲ ಸಂಶಿ, ಸಿದ್ದು ಬೇನೂರ, ಸಿದ್ರಾಮ ಯರಗಟ್ಟಿ, ಹೊಳೆಪ್ಪ ಬಾಡಿಗಿ, ವಿನೋದ ಸಿಂಪಿ, ಬಸವರಾಜ ಮುಕುಂದ, ಮಹಾಲಿಂಗಪ್ಪ ಲಾತೂರ, ಶಂಕರ ಸೊನ್ನದ, ನಿಯಾಜ ಪಟೇಲ ಮುಂತಾದವರು ಭಾಗವಹಿಸಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts