More

    ಪಿರಿಯಾಪಟ್ಟಣದಲ್ಲಿ ಮಹದೇಶ್ವರ ಜಾತ್ರೆ

    ಪಿರಿಯಾಪಟ್ಟಣ: ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಶ್ರೀ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವ ನಡೆಯಿತು.

    ಮುಂಜಾನೆಯಿಂದಲೇ ದೇವಾಲಯದ ಗರ್ಭಗುಡಿಯಲ್ಲಿ ಉದ್ಭವ ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷವಾಗಿ ಬಿಲ್ವಪತ್ರೆ ಪೂಜೆ, ರುದ್ರಾಭಿಷೇಕ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
    ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ ಬಳಿಕ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಸಿಂಗರಿಸಿದ್ದ ರಥಕ್ಕೆ ತಂದು ಕೂರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರು ರಥವನ್ನು ಎಳೆದು ಮಹದೇಶ್ವರನಿಗೆ ಉಘೇ ಉಘೇ ಎಂದು ಘೋಷಣೆ ಕೂಗಿದರು.

    ಎರಡು ಬಾರಿ ದೇವಸ್ಥಾನ ಸುತ್ತ ರಥವನ್ನು ಪ್ರದಕ್ಷಿಣೆ ಹಾಕಿಸಿ ರಥವನ್ನು ಸ್ವಸ್ಥಾನಕ್ಕೆ ಎಳೆದು ತಂದು ನಿಲ್ಲಿಲಾಯಿತು. ಮಹದೇಶ್ವರಸ್ವಾಮಿ ಭಕ್ತ ಮಂಡಳಿ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.
    ಮಂಡಳಿಯ ಸದಸ್ಯರಾದ ನಾಗಣ್ಣ, ನಂಜುಂಡಪ್ಪ, ಮಲ್ಲಿಕಾರ್ಜುನ, ಕೆ.ಎಸ್.ಮಹದೇವಪ್ಪ, ಕೆ.ಎಂ.ವಿನಯ್, ಶೇಖರ್, ನಾಗಣ್ಣ, ಶಿಲ್ಪಾ, ಅನಿತಾ ಹಾಜರಿದ್ದರು.

    ವಿವಿಧ ದೇವಾಲಯಗಳಲ್ಲಿ ಪೂಜೆ: ಮಹಾಶಿವರಾತ್ರಿ ಅಂಗವಾಗಿ ಪಿರಿಯಾಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿದವು.

    ಪಟ್ಟಣದ ವೈದ್ಯೇಶ್ವರ, ಕನ್ನಂಬಾಡಿಯಮ್ಮ, ಮಸಣೀಕಮ್ಮ, ಬಸವೇಶ್ವರ, ವದ್ಲಿ ಬಸಪ್ಪ, ನೂರೊಂದು ಲಿಂಗೇಶ್ವರ ದೇವಾಲಯಗಳಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿದರು.
    ಪಟ್ಟಣದ ವೈದ್ಯೇಶ್ವರ ಬಡಾವಣೆಯ ವೈದ್ಯೇಶ್ವರ ದೇವಾಲಯದ ಬ್ರಹ್ಮರಥೋತ್ಸವ ಶಿವರಾತ್ರಿಯ ಮಾರನೆಯ ದಿನವಾದ ಶನಿವಾರ ಜರುಗಲಿದ್ದು, ಸಿದ್ಧತೆಗಳು ನಡೆದಿವೆ. ಜಾಗರಣೆ ಅಂಗವಾಗಿ ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿಯಿಡೀ ಗಮಕ ವಾಚನ ಕಾರ್ಯಕ್ರಮ ಆಯೋಜಿಸಿ, ದೇವರ ಭಕ್ತಿ ಚಿತ್ರಗಳನ್ನು ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts