More

    ಮಠಾಧೀಶರ ವರ್ಧಂತಿ ಆಚರಣೆಗಿಂತ ಸಾಧನೆ ಮಾದರಿಯಾಗಬೇಕು

    ಮಾಗಡಿ : ಮಠಾಧೀಶರ ವರ್ಧಂತಿ ಆಚರಣೆಗಳಿಗಿಂತ ಅವರ ಸಾಧನೆಗಳು ಸಮಾಜಕ್ಕೆ ಮಾದರಿಯಾಗಬೆಕು ಎಂದು ಜಡೇದೇವರಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಹೇಳಿದರು.
    ತಾಲೂಕಿನ ಜಡೇದೇವರ ಮಠದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀಗಳ 50ನೇ ವರ್ಧಂತಿ ಅಂಗವಾಗಿ ಪಟ್ಟಣದ ವೀರಶೈವ ಮಂಡಳಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
    ಮಠಾಧ್ಯಕ್ಷರಿಗೆ ತಮ್ಮ ಹುಟ್ಟುಹಬ್ಬಕ್ಕಿಂತ ಮಠಗಳ ಸೇವೆ, ಸಾಧನೆ, ಸಮಾಜಕ್ಕೆ ನೀಡುವ ಕೊಡುಗೆ ಅಮೂಲ್ಯವಾಗಿದೆ. 300 ವರ್ಷಗಳ ಕಾಲ ನಿರಂತರವಾಗಿ ಲೋಕಕಲ್ಯಾಣಾರ್ಥ ತಪ್ಪಸ್ಸು ಮಾಡಿ ಜೀವಂತವಾಗಿ ಲಿಂಗೈಕ್ಯರಾದ ಜಡೇಶ್ವರ ಸ್ವಾಮೀಜಿ ಇದ್ದ ಮಠದಲ್ಲಿ 9ನೇ ಮಠಾಧಿಪತಿಯಾಗಿರುವುದಕ್ಕೆ ಸಂತೋಷವಾಗಿದೆ. ಕಳೆದ ಐದು ವರ್ಷದ ಹಿಂದೆ ಶ್ರೀಮಠ ಯಾವ ಕಾಡಿನಲ್ಲಿದೆ ಎನ್ನುತ್ತಿದ್ದರು. ಇಂದು ಮಠದಲ್ಲಿ ಅನೇಕ ಧಾರ್ಮಿಕ ಕೆಲಸ, ಜ್ಞಾನದಾಸೋಹ, ಅನ್ನದಾಸೋಹ ಮಾಡುತ್ತಿದೆ. ಪ್ರತಿದಿನ ಲಿಂಗಪೂಜೆಗೆ ಸಮಯ ಮೀಸಲಿಟ್ಟು ಸಂಸ್ಕೃತಿ ಉಳಿಸಿ ಬೆಳಸಬೇಕು ಎಂದರು.
    ಗುರುವಿನ ಮಾರ್ಗದರ್ಶನದಲ್ಲಿ ಜನ್ಮ ಸಾರ್ಥಕ : ವೀರಶೈವ-ಲಿಂಗಾಯಿತ ಸಮಾಜದ ಕೆ.ಪಿ.ಮಹದೇವ ಶಾಸ್ತಿ ಮಾತನಾಡಿ, ಮಠಕ್ಕೆ ಸಾಕಷ್ಟು ಇತಿಹಾಸವಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ಮಠ ಸೇವೆ ಸಲ್ಲಿಸುತ್ತಿದೆ. ಇಮ್ಮಡಿ ಬಸವರಾಜ ಸ್ವಾಮೀಜಿಗಳು ಸುತ್ತಮುತ್ತಲ ಗ್ರಾಮಗಳಲ್ಲಿನ ರೈತರಿಗೆ ಕೃಷಿ, ನೀರಿನ ಸದ್ಬಳಕೆ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದ್ದಾರೆ. ಭಗವಂತನಿಗೆ ಭಕ್ತಿಯಿಂದ ಪೂಜಿಸಿದರೆ ಮುಕ್ತಿ ದೊರೆಯುತ್ತದೆ. ಅದೇರೀತಿ ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ಜನ್ಮ ಸಾರ್ಥಕವಾಗುತ್ತದೆ ಎಂದರು.
    ಪೊಲೀಸ್ ಅಧಿಕಾರಿ ವಿಜಯ್ ಕುಮಾರ್, ಪುರಸಭೆ ಸದಸ್ಯೆ ಶಿವರುದ್ರಮ್ಮ, ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ಗೌರವಾಧ್ಯಕ್ಷ ಆನಂದಪ್ಪ, ನಟರಾಜಪ್ಪ, ಕಂಡಾಕ್ಟರ್ ರಾಜು,ವಿನೋದ್ ಕುಮಾರ್, ಪ್ರದೀಪು, ವಿಜಯ್ ಕುಮಾರ್, ರಂಜು, ವಿನಯ್, ಶರತ್, ಹರೀಶ್ ಇತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts