More

    ಮಧ್ಯ ಪ್ರದೇಶದಲ್ಲಿ ಅಲುಗಾಡುತ್ತಿರುವ ಸಿಎಂ ಕುರ್ಚಿ ಉಳಿಯುತ್ತಾ..? ಕಮಲನಾಥ್​​ಗೆ ಕ್ಷಣ ಕ್ಷಣಕ್ಕೂ ಟೆನ್ಶನ್​..!

    ಭೋಪಾಲ್ : ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಪತನದ ಕೌಂಟ್ ಡೌನ್ ಶುರುವಾಗಿದೆ. ಸಿಎಂ ಕಮಲನಾಥ್ ವಿರುದ್ಧ ಬಂಡಾಯ ಸಾರಿರುವ ಜ್ಯೋತಿರಾದಿತ್ಯ ಸಿಂಧ್ಯಾ ಬೆಂಬಲಿತ ಕಾಂಗ್ರೆಸ್ ಶಾಸಕರು ರೆಸಾರ್ಟ್ ರಾಜಕೀಯ ಸ್ಟಾರ್ಟ್ ಮಾಡಿದ್ದಾರೆ.

    ಇದರಿಂದ ಕಮಲ್ ನಾಥ್ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಹೀಗಾಗಿ ಸೋಮವಾರ ರಾತ್ರಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ , ವಕೀಲ ಹಾಗೂ ರಾಜ್ಯಸಭಾ ಸಂಸದರಾಗಿರುವ ವಿವೇಕ್ ಟಂಕಾ, ವಿರೋಧ ಪಕ್ಷದ ಮಾಜಿ ನಾಯಕ ಅಜಯ್ ಸಿಂಗ್ ಸೇರಿ 10 ಮಂದಿ ಸಚಿವರ ಜೊತೆ ರಾಜ್ಯದಲ್ಲಿ ಹೇಗೆ ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಳ್ಳುವುದು ಎಂಬುದರ ಬಗ್ಗೆ ಸಿಎಂ ಕಮಲ್ ನಾಥ್ ಸುದೀರ್ಘ ಚರ್ಚೆ ನಡೆಸಿದ್ದಾರೆ. ಶಾಸಕರ ರಾಜೀನಾಮೆ ಆಟ ಮುಂದುವರಿದರೆ ಇದು ಬಿಜೆಪಿಗೆ ವರದಾನವಾಗಲಿದೆ.

    ಪ್ರಸ್ತುತ ಮಧ್ಯಪ್ರದೇಶ ವಿಧಾನಸಭೆ 230 ಸ್ಥಾನಗಳನ್ನು ಹೊಂದಿದ್ದು, ಈ ಪೈಕಿ ಕಾಂಗ್ರೆಸ್​ನ ಬನ್ವಾರಿಲಾಲ್ ಶರ್ಮಾ ಹಾಗೂ ಬಿಜೆಪಿಯ ಮನೋಹರ್ ಉತ್ವಾಲ್ ಅವರ ನಿಧನದಿಂದ ಎರಡು ಸ್ಥಾನಗಳು ಖಾಲಿಯಾಗಿದೆ. ಈಗ ಮ್ಯಾಚಿಕ್ ನಂಬರ್ 115 ಇದ್ದು, ಕಾಂಗ್ರೆಸ್​ಗೆ 114 ಶಾಸಕರ ಬೆಂಬಲ ಜೊತೆ ಬಿಎಸ್ಪಿ 2, ಎಸ್ಪಿ 1, ನಾಲ್ವರು ಪಕ್ಷೇತರ ಶಾಸಕರ ಸಪೋರ್ಟ್ ಇದೆ.

    ಇನ್ನು ವಿರೋಧ ಪಕ್ಷ ಬಿಜೆಪಿ 107 ಶಾಸಕರನ್ನು ಹೊಂದಿದೆ. ಆದರೆ ಕಾಂಗ್ರೆಸ್​ನ 19 ಶಾಸಕರು ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಲ್ಲಿ ಜ್ಯೋತಿರಾತಿದ್ಯ ಸಿಂಧ್ಯಾ ಬೆಂಬಲಿತ 17 ಶಾಸಕರು ಬಂಡಾಯ ಬಾವುಟ ಹಾರಿದ್ದಾರೆ. ಕಮಲ್ ನಾಥ್​ ಸರ್ಕಾರದ ಜೊತೆ 95 ಶಾಸಕರು ಮಾತ್ರವಿದ್ದು, ಮಿತ್ರ ಪಕ್ಷಗಳ ಏಳು ಎಂಎಲ್​ಎಗಳು ಸಪೋರ್ಟ್ ಇದೆ. ಪ್ರಸ್ತುತ ಸಿಎಂ ಕಮಲ್ ನಾಥ್​ ಬೆಂಬಲಕ್ಕೆ 102 ಶಾಸಕರು ಮಾತ್ರ ಇದ್ದಾರೆ. 107 ಶಾಸಕರನ್ನು ಹೊಂದಿರುವ ಬಿಜೆಪಿ ಸದ್ಯಕ್ಕೆ ಮೇಲುಗೈ ಸಾಧಿಸಿದೆ. ಒಂದು ವೇಳೆ 19 ರೆಬಲ್ ಶಾಸಕರು ರಾಜೀನಾಮೆ ನೀಡಿದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನ ನಿಶ್ಚಿತ ಎನ್ನಲಾಗುತ್ತಿದೆ. (ಏಜನ್ಸೀಸ್)

    ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ ಮಾಜಿ ಸಿಎಂ ಶಿವರಾಜ್​ಸಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts