More

    ದೇವಸ್ಥಾನ ಆಕೃತಿಯ ಕೇಕ್​ ಕಟ್ ಮಾಡಿದ ಕಾಂಗ್ರೆಸ್ ಶಾಸಕ; ಕಮಲ ನಾಥ್ ವಿರುದ್ಧ ಬಿಜೆಪಿ ಕಿಡಿ

    ಭೋಪಾಲ್​: ಶಾಸಕ ಕಮಲ್ ನಾಥ್ ದೇವಾಲಯದ ಆಕಾರದ ಕೇಕ್ ಕತ್ತರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈಗ ಬಿಜೆಪಿ ಮತ್ತು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಗಳವಾರ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಶಿಕಾರ್ಪುರದಲ್ಲಿ ಈ ಘಟನೆ ನಡೆದಿದೆ.

    ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ ಕಮಲ ನಾಥ್​ ಹನುಮಂತನ ಪ್ರತಿಕೃತಿ ಇರುವ ದೇವಸ್ಥಾನದ ಆಕೃತಿಯ ಕೇಕ್​ ಕಟ್​ ಮಾಡಿ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ‘ಕಮಲ ನಾಥ್ ಹಿಂದೂ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

    ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಚೌಹಾಣ್ ‘ದೇವರ ಮೇಲಿನ ಭಕ್ತಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಅವರು ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದರು. ಆದರೆ ಈಗ ಚುನಾವಣೆ ಸಂದರ್ಭ ಅವರಿಗೆ ಹನುಮಂತ ನೆನಪಾಗಿದ್ದಾರೆ. ಕೇಕ್ ಮೇಲೆ ಹನುಮಂತನ ಭಾವಚಿತ್ರವನ್ನು ನಿರ್ಮಿಸಿ ಅದನ್ನು ಕತ್ತರಿಸುವುದು ಹಿಂದೂ ಧರ್ಮ ಮತ್ತು ಸನಾತನ ಸಂಪ್ರದಾಯಕ್ಕೆ ಮಾಡಿದ ಅವಮಾನ, ಸಮಾಜ ಇದನ್ನು ಒಪ್ಪುವುದಿಲ್ಲ’ ಎಂದು ಕಿಡಿಕಾರಿದರು.

    ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ‘ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್‌, ಕೇಸರಿ ಬಾವುಟ ಹಾಗೂ ಹನುಮಂತನ ಚಿತ್ರವಿರುವ ನಾಲ್ಕು ಹಂತದ ದೇಗುಲದ ಕೇಕ್‌ಗೆ ಚಾಕು ಹಾಕಿ ಚುನಾವಣಾ ಸಂದರ್ಭದಲ್ಲಿ ಹನುಮ ಭಕ್ತ ಎಂದು ಹೇಳಿಕೊಂಡು ನಮ್ಮ ಆರಾಧ್ಯ ದೇವರಿಗೆ ಮತ್ತು ಕೋಟಿ ಕೋಟಿ ಹಿಂದುಗಳಿಗೆ ಅಪಮಾನ ಮಾಡುತ್ತಿದ್ದಾರೆ. ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts